HDK vs Siddaramaiah: Union Minister HD Kumaraswamy arrested?

HDK vs Siddaramaiah: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅರೆಸ್ಟ್? ಸ್ಫೋಟಕ ಬಾಂಬ್ ಸಿಡಿಸಿದ ಸಿಎಂ ಸಿದ್ದರಾಮಯ್ಯ‌!

HDK vs Siddaramaiah: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅರೆಸ್ಟ್? ಸ್ಫೋಟಕ ಬಾಂಬ್ ಸಿಡಿಸಿದ ಸಿಎಂ ಸಿದ್ದರಾಮಯ್ಯ‌!

ಕೊಪ್ಪಳ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯಪಾಲರು, ತನ್ನ ವಿರುದ್ದ ಮಾತ್ರ ಯಾವುದೇ ತನಿಖಾ ವರದಿಯನ್ನು ಆಧರಿಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ಅನುಮತಿ ನೀಡಿದ್ದಾರೆ. ಇದು ತಾರತಮ್ಯವಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ‌ (HDK vs Siddaramaiah) ಖಾರವಾಗಿ ಪ್ರಶ್ನಿಸಿದರು.

ಅವರು ಇಂದು ಗಿಣಿಗೇರ ಏರ್ಸ್ಟ್ರಿಪ್ ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸುವ ಬಗ್ಗೆಯೇ ಮುಖ್ಯಮಂತ್ರಿಗಳು ಯೋಚಿಸುತ್ತಿದ್ದಾರೆ ಎಂಬ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಕುಮಾರಸ್ವಾಮಿಯವರನ್ನು ಬಂಧಿಸುವ ಅಗತ್ಯಬಿದ್ದರೆ ಮುಲಾಜಿಲ್ಲದೆ ಬಂದಿಸ್ತೀವಿ. ಆದರೆ ಈಗ ಇನ್ನೂ ಬಂಧಿಸುವ ಸನಗನಿವೇಶ ಬಂದಿಲ್ಲ. ಕುಮಾರಸ್ವಾಮಿಯವರು ಈಗಲೇ ಹೆದರಿದ್ದಾರೆ ಎಂದು ಸ್ಪಷ್ಟವಾಗಿ ನುಡಿದರು.

Join Our Telegram: https://t.me/dcgkannada

ಆದರೆ ಈ ಪ್ರಕರಣ ಸಂಬಂಧಪಟ್ಟಂತೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಬಹುದು ಎಂಬ ಭಯ ಅವರನ್ನು ಕಾಡುತ್ತಿದೆ. ಅವರ ವಿರುದ್ಧ ಲೋಕಾಯುಕ್ತ ಎಸ್ ಐ ಟಿಯವರು ತನಿಖಾ ವರದಿ ನೀಡಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ್ದಾಗ್ಯೂ , ರಾಜ್ಯಪಾಲರಿಂದ ಯಾವುದೇ ಕ್ರಮವಾಗದ ಕಾರಣ, ಎಸ್ ಐ ಟಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದೆ ಎಂದರು.

ಕುಮಾರಸ್ವಾಮಿಯವರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿಯನ್ನು ಬಿಡುಗಡೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಚಾರದ ಬಗ್ಗೆ ತನಗೆ ಮಾಹಿತಿಯಿಲ್ಲವೆಂದು ತಿಳಿಸಿದ ಮುಖ್ಯಮಂತ್ರಿಗಳು, ಕುಮಾರಸ್ವಾಮಿಯವರದು ಎಂದಿಗೂ ಹಿಟ್ ಎಂಡ್ ರನ್ ಕೇಸ್ ಎಂದರು. (HDK vs Siddaramaiah)

ಅಭಿವೃದ್ಧಿ ಕೆಲಸದಲ್ಲಿ ರಾಜಕೀಯವಿಲ್ಲ:

ಕೊಪ್ಪಳ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸೇರಿದಂತೆ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರಿಸುತ್ತಾ, ಸರ್ಕಾರ ಅಭಿವೃದ್ಧಿ ಕೆಲಸದಲ್ಲಿ ರಾಜಕೀಯ ಮಾಡದೇ , ಜಿಲ್ಲೆಯ ಜನರ ಹಾಗೂ ಇಲ್ಲಿನ ಅಭಿವೃದ್ಧಿ ಪರವಾಗಿಯೇ ನಮ್ಮ ನಿರ್ಣಯಗಳಿರುತ್ತವೆ. ಕೊಪ್ಪಳ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿಯಿದ್ದು, ಇಲ್ಲಿನ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿದ್ದೇನೆ ಎಂದರು.

ಬೆಂಬಲ ಬೆಲೆ ಕುರಿತಂತೆ ಕೇಂದ್ರಕ್ಕೆ ಪತ್ರ:

ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಬಗ್ಗೆ ಮಾತನಾಡಿ, ಹೆಸರುಕಾಳು ಬೆಳೆಗೆ ಬೆಂಬಲ ಬೆಲೆ ನೀಡುವ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದರು.

ಬೈಕ್‌ಗೆ ಕಾರು ತಾಗಿದ್ದಕ್ಕೆ ಪಬ್ ಬೌನ್ಸರ್‌ನಿಂದ ರಂಪಾಟ.. ಪೊಲೀಸರು ಟ್ವಿಟ್ ಮಾಡಿದ ವಿಡಿಯೋ ವೈರಲ್..!

Latest News

ಸಾರ್ವಜನಿಕರು,ವ್ಯಾಪಾರಿಗಳಿಗೆ ನಿತ್ಯ ಕಿರಿಕಿರಿ; ಮಂಗಗಳ ಹಾವಳಿಗೆ ಜನ ಹೈರಾಣು..!

ನಾಲತವಾಡ : ಪಟ್ಟಣದ ಹೃದಯಭಾಗವಾಗಿರುವ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಆಲದ ಮರದಲ್ಲಿ ಬಿಡಾರ ಹೂಡಿರುವ

ಸಮಾಜ ಸೇವಕ ಪ್ರಭು ಭೈರಿ ಕಾರ್ಯ ಶ್ಲಾಘನೀಯ: ಮುಖಂಡ ಭೋವಿ.

ತಾಳಿಕೋಟಿ: ಸಮಾಜ ಸೇವೆಯ ಹೆಸರಿನಲ್ಲಿ ಕೇವಲ ತಮ್ಮ ಸ್ವಾರ್ಥವನ್ನೇ ಈಡೇರಿಸಿಕೊಳ್ಳುವ ಇಂದಿನ ದಿನಮಾನದಲ್ಲಿ ತಾನು

ಪ್ರಥಮ ಬಾರಿಗೆ ಲಿಂಗಸ್ಗೂರಿನಲ್ಲಿ ಆಯೋಜನೆ:                       ಜ.11 ರಂದು ಆಕ್ಸಫರ್ಡ್ ಪಾಟೀಲ್ಸ್ ಮಾಸ್ಟರ್ ಮೈಂಡ್ ಅವಾರ್ಡ್

ಪ್ರಥಮ ಬಾರಿಗೆ ಲಿಂಗಸ್ಗೂರಿನಲ್ಲಿ ಆಯೋಜನೆ: ಜ.11 ರಂದು ಆಕ್ಸಫರ್ಡ್ ಪಾಟೀಲ್ಸ್ ಮಾಸ್ಟರ್ ಮೈಂಡ್ ಅವಾರ್ಡ್

ಮುದ್ದೇಬಿಹಾಳ : ಇದೇ ಪ್ರಥಮ ಬಾರಿಗೆ ಲಿಂಗಸುಗೂರಿನಲ್ಲಿ ಜ.11 ರಂದು ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್

ಕೃಷಿ ಭಾಗ್ಯ ಯೋಜನೆ : ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನ

ಕೃಷಿ ಭಾಗ್ಯ ಯೋಜನೆ : ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನ

ಮುದ್ದೇಬಿಹಾಳ : ಸನ್ 2025-26ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ರೈತರು ಹೊಲಗಳಲ್ಲಿ ಕೃಷಿ

ಹರಿಹರ ತಾಲ್ಲೂಕು ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟಸಭೆ : ಅಶ್ವತ ಟಿ ಮರೀಗೌಡ್ರು.

ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟ, ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ಈ ಸಭೆಯನ್ನು ಹರಿಹರ ತಾಲ್ಲೂಕಿನ ಹೊಸಪೇಟೆ ಬೀದಿ ಶ್ರೀ ಮುರುಘಾರಾಜೇಂದ್ರ ಕಲ್ಯಾಣ ಮಂಟಪ ಎದುರು ಶ್ರೀ ಹರಿಹರೇಶ್ವರ ಕಟ್ಟಡ ಕಾರ್ಮಿಕರ ಸಂಘ ಕಛೇರಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು. ಅಶ್ವತ ಟಿ ಮರೀಗೌಡ್ರು, ಶಿವಕುಮಾರ್ ಗೌಡ, ರಮೇಶ್, ಲೋಕೇಶ್ ನಾಯಕ, ಹಾಲೇಶ್, ಭೀಮಣ್ಣ, ಶಶಿನಾಯ್ಕ್ , ಶಿವಣ್ಣ, ಪರಶುರಾಮ, ನಾಗರಾಜು,

ವಿದ್ಯುತ್ ಶಾರ್ಟ್ ಸರ್ಕಿಟ್: ಅಪಾರ ಹಾನಿ

ವಿದ್ಯುತ್ ಶಾರ್ಟ್ ಸರ್ಕಿಟ್: ಅಪಾರ ಹಾನಿ

ಮುದ್ದೇಬಿಹಾಳ : ಪಟ್ಟಣದ ವಿಜಯಪುರ ರಸ್ತೆಯ ಸಾಯಿ ಬಡಾವಣೆಯಲ್ಲಿ ಶುಕ್ರವಾರ ಮಧ್ಯರಾತ್ರಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಮನೆ ಬಳಕೆ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಅಪಾರ ಹಾನಿ ಸಂಭವಿಸಿದ ಘಟನೆ ನಡೆದಿದೆ. ಸಾಯಿ ಬಡಾವಣೆ ನಿವಾಸಿ ಮಹಿಬೂಬ ಕುಮಸಿ ಅವರ ಮನೆಯಲ್ಲಿದ್ದ ಫ್ರಿಜ್, ಫ್ಯಾನ್ ಸೇರಿದಂತೆ ಮನೆ ಬಳಕೆ ವಸ್ತುಗಳು ಹಾನಿಯಾಗಿವೆ ಎಂದು ತಿಳಿದು ಬಂದಿದೆ.ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ.ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಠಾಣಾಧಿಕಾರಿ ನಾಗೇಶ ರಾಠೋಡ ನೇತೃತ್ವದಲ್ಲಿ ಬೆಂಕಿ ನಂದಿಸಲಾಯಿತು.