ಬೆಂಗಳೂರು: ರಸ್ತೆಯಲ್ಲಿ ದಿಢೀರನೇ ಬ್ರೇಕ್ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ನಿರ್ಲಕ್ಷಿಸಿದರು ಎಂದು ಸಿಟ್ಟಿಗೆದ್ದು ಸಾಫ್ಟ್‌ವೇರ್ ಉದ್ಯೋಗಿ ದಂಪತಿ ಕಾರನ್ನು ಅಡ್ಡಗಟ್ಟಿ ದುಂಡಾವರ್ತನೆ ತೋರಿದ ಆರೋಪದ ಮೇರೆಗೆ ಪಬ್ ಬೌನ್ಸರ್‌ನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬೆಳ್ಳಂದೂರು ನಿವಾಸಿ ನವೀನ್ ರೆಡ್ಡಿ ಬಂಧಿತನಾಗಿದ್ದು, ಸರ್ಜಾಪುರ ರಸ್ತೆಯ ಮೇಲ್ವೇತುವೆ ಬಳಿ ಸೋಮವಾರ ರಾತ್ರಿ ರೆಡ್ಡಿ ಮನೆಗೆ ಮರಳುವಾಗ ಮಾರ್ಗ ಮಧ್ಯೆ ಈ ಗಲಾಟೆ ನಡೆದಿದೆ.
Join Our Telegram: https://t.me/dcgkannada
ತಮ್ಮ ಕಾರಿನ ಮೇಲೆ ರೆಡ್ಡಿ ಹಲ್ಲೆ ನಡೆಸಿದ್ದ ವಿಡಿಯೋ ವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿ ನಗರ ಪೊಲೀಸ್ ಆಯುಕ್ತರಿಗೆ ಸಾಫ್ಟ್‌ವೇರ್ ಉದ್ಯೋಗಿ ಜಿತಿನ್ ದೂರು ನೀಡಿದ್ದರು. ಈ ಗಲಾಟೆ ವಿಡಿಯೋ ವೈರಲ್ ಆಗಿ ತಪ್ಪಿತಸ್ಥನ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆಯ ವಿವರ:
ಸರ್ಜಾಪುರ ಮೇಲ್ಲೇತುವೆ ಇಳಿಯುವಾಗ ದಿಢೀರನೇ ತಮ್ಮ ಕಾರಿಗೆ ಜಿತಿನ್ ರಾಜ್ ಬ್ರೇಕ್ ಹಾಕಿದ್ದಾರೆ. ಆ ವೇಳೆ ಕಾರಿನ ಹಿಂದೆ ಬರುತ್ತಿದ್ದ ಕಂಗಾಲಾಗಿ ನವೀನ್ ರೆಡ್ಡಿ, ಟೆಕ್ಕಿ ಕಾರಿಗೆ ಬೈಕ್ ಗುದ್ದಿಸಿ ಕೆಳಗೆ ಬಿದ್ದಿದ್ದಾನೆ. ಆದರೆ ಕೆಳಗೆ ಬಿದ್ದರು ವಿಚಾರಿಸದೆ ಜಿತಿನ್ ಮುಂದು ವರೆದಿದ್ದಾರೆ.
ಈ ವೇಳೆ ಬೈಕ್ ಅನ್ನು ಓಡಿಸಿಕೊಂಡು ಕಾರಿನ ಮುಂದೆ ಬಂದ ನವೀನ್, ಕಾರು ನಿಲ್ಲಿಸುವಂತೆ ಸೂಚಿಸಿದ್ದಾನೆ. ಆದರೆ ಈ ಮಾತಿಗೆ ಕ್ಯಾರೇ ಎನ್ನದೆ ಕಾರು ಚಾಲಾಯಿ ಸಲು ಜಿತಿನ್ ಮುಂದಾಗಿದ್ದಾರೆ. ಈ ನಿರ್ಲಕ್ಷ್ಯತನ ವರ್ತನೆಯಿಂದ ಕೆರಳಿದ ನವೀನ್, ತಕ್ಷಣವೇ ಕಾರಿನ ವೈಫರ್ ಕಿತ್ತು ಹಾಕಿ ಗಲಾಟೆ ಮಾಡಿದ್ದಾನೆ.
ಈ ದುಂಡಾವರ್ತನೆಗೆ ಭಯ ಗೊಂಡ ಜಿತಿನ್ ರಾಜ್ ದಂಪತಿ, ಕಾರಿನಲ್ಲಿ ಮಗುವಿದೆ ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಕೊನೆಗೆ ಸಾರ್ವಜನಿಕರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಈ ವಿಡಿಯೋವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡು ನಗರ ಪೊಲೀಸ್ ಆಯುಕ್ತರಿಗೆ ಜಿತಿನ್ ದೂರು ಕೊಟ್ಟಿದ್ದರು. ಆರೋಪಿ ಕೋರಮಂಗಲದ ಪಬ್‌ನಲ್ಲಿ ಬೌನ್ಸರ್‌ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.