Green gram The purchase of green gram will start from today

Green gram: ಇಂದಿನಿಂದ ಹೆಸರು ಕಾಳು ಖರೀದಿ ಆರಂಭ

Green gram: ಇಂದಿನಿಂದ ಹೆಸರು ಕಾಳು ಖರೀದಿ ಆರಂಭ

ಕುಂದಗೋಳ: ಪಟ್ಟಣದ ಎಪಿಎಂಸಿ ಆವರಣ ಹಾಗೂ ಯಲಿವಾಳದ ಪಿಕೆಪಿಎಸ್ ಆವರಣದಲ್ಲಿ ಆ.30ರಿಂದ ಹೆಸರು ಕಾಳು (Green gram) ಖರೀದಿಸಲಾಗುತ್ತದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಹಸೀಲ್ದಾ‌ರ್ ರಾಜು ಮಾವರಕರ ತಿಳಿಸಿದರು.

Join Out Telegram: https://t.me/dcgkannada

ಪಟ್ಟಣದ ತಹಸೀಲ್ದಾ‌ರ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

2024- 25ನೇ ಸಾಲಿನ ಎಫ್‌ಎಕ್ಕೂ ಗುಣಮಟ್ಟದ ಹೆಸರು ಕಾಳು (Green gram) ಖರೀದಿಸಲಾಗುತ್ತದೆ. ಪ್ರತಿ ಕ್ವಿಂಟಾಲ್‌ 8582 ರೂಪಾಯಿ ಹಾಗೂ ಒಬ್ಬ ರೈತನಿಂದ ಗರಿಷ್ಠ 10 ಕ್ವಿಂಟಾಲ್ (ಪ್ರತಿ ಎಕರೆಗೆ 2 ಕ್ವಿಂಟಾಲ್) ಮಾತ್ರ ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ರೈತರು ಏನು ಮಾಡಬೇಕು?

ರೈತರು ಆಧಾರ್ ಕಾರ್ಡ್, ಆರ್‌ಟಿಸಿ ಎಫ್‌ಐಡಿ ಸಂಖ್ಯೆ, ಬ್ಯಾಂಕ್ ಪಾಸ್‌ಬುಕ್‌ಗಳ ಜೆರಾಕ್ಸ್ ಪ್ರತಿಗಳನ್ನು ಸಂಬಂಧಿಸಿದ ಹೆಸರು ಕೇಂದ್ರದಲ್ಲಿ ನೀಡಿ ಹೆಸರು ನೋಂದಾಯಿಸಿಕೊಂಡ ನಂತರ 3-4 ದಿನಗಳಲ್ಲಿ ಹೆಸರು ಕಾಳು ಖರೀದಿಸಲಾಗುತ್ತದೆ ಎಂದು ತಿಳಿಸಿದರು.

ಕುಂದಗೋಳ ತಹಸೀಲ್ದಾ‌ರ್ ಕಚೇರಿಯಲ್ಲಿ ತಹಸೀಲ್ದಾರ್ ರಾಜು ಮಾವರಕರ ನೇತೃತ್ವದಲ್ಲಿ ಗುರುವಾರ ಸಭೆ ನಡೆಯಿತು.

20 ಕ್ವಿಂಟಾಲ್ ಖರೀದಿಗೆ ಒತ್ತಾಯ:

ಇದೇ ಸಂದರ್ಭದಲ್ಲಿ ರೈತ ಮುಖಂಡರು ತಾಲೂಕಿನ ಸಂತಿಗ್ರಾಮದಲ್ಲಿ ಹೆಸರು ಖರೀದಿ ಕೇಂದ್ರ ಪ್ರಾರಂಭಿಸಬೇಕು. ಪ್ರತಿ ರೈತರಿಂದ 20 ಕ್ವಿಂಟಾಲ್ ಹೆಸರು ಖರೀದಿಸಬೇಕು ಎಂದು ತಹಸೀಲ್ದಾರ್‌ಗೆ ಮನವಿಯನ್ನೂ ಸಲ್ಲಿಸಿದರು.

ಇದನ್ನೂ ಓದಿ: Hunagund: ಇದುವೇ ಯಶಸ್ಸಿನ ಜೀವಾಳ: ಶಾಸಕ ಕಾಶಪ್ಪನವರ

ಕೃಷಿ ಸಹಾಯಕ ನಿರ್ದೇಶಕಿ ಭಾರತಿ ಮೆಣಸಿನಕಾಯಿ, ಅರವಿದಪ್ಪ ಕಟಗಿ, ಸೋಮರಾವ ದೇಸಾಯಿ, ರಮೇಶ ಕೊಪ್ಪದ, ವೈ.ಜಿ. ಪಾಟೀಲ, ಮಲ್ಲಿಕಾರ್ಜುನ ಕುನ್ನೂರ, ಮಾಣಿಕ್ಯ ಚಿಲ್ಲೂರ, ಮಾರುದ್ರಪ್ಪ ಮೂಲಿಮನಿ, ಶೇಖಪ್ಪ ಕಂಬಳಿ, ಶಂಕರಗೌಡ ದೊಡ್ಡಮನಿ, ಬಸವರಾಜ ಯೋಗಪ್ಪನವರ, ಬಾಬಾಜಾನ ಮುಲ್ಲಾ ಇತರರಿದ್ದರು.

Latest News

ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ವೈದ್ಯರ ಸೂಚನೆ : ಉಲ್ಬಣಗೊಂಡ ನೆಗಡಿ,ಕೆಮ್ಮು,ಜ್ವರ : ದಿನಕ್ಕೆ 600 ಜನರ ತಪಾಸಣೆ

ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ವೈದ್ಯರ ಸೂಚನೆ : ಉಲ್ಬಣಗೊಂಡ ನೆಗಡಿ,ಕೆಮ್ಮು,ಜ್ವರ : ದಿನಕ್ಕೆ 600 ಜನರ ತಪಾಸಣೆ

ಮುದ್ದೇಬಿಹಾಳ : ಹೆಚ್ಚುತ್ತಿರುವ ಶೀತಗಾಳಿ,ಜ್ವರದಿಂದ ಮಕ್ಕಳು,ವೃದ್ಧರು,ಮಹಿಳೆಯರಲ್ಲಿ ನೆಗಡಿ,ಕೆಮ್ಮು,ಜ್ವರ ಉಲ್ಬಣಗೊಂಡಿದ್ದು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಳ್ಳಲು

ಇಂದು ವಿಜಯಪುರ ನಗರಕ್ಕೆ  ಸಿಎಂ, ಡಿಸಿಎಂ ಭೇಟಿ:

ಇಂದು ವಿಜಯಪುರ ನಗರಕ್ಕೆ  ಸಿಎಂ, ಡಿಸಿಎಂ ಭೇಟಿ:

ಮುಖ್ಯಮಂತ್ರಿ,  ಉಪ ಮುಖ್ಯಮಂತ್ರಿಗಳಿಂದ ಹಲವು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ವಿಜಯಪುರ : ಬಸ್ ನಿಲ್ದಾಣದ

ಪಿಪಿಪಿ ಮೆಡಿಕಲ್ ಕಾಲೇಜು ವಿರೋಧಿಸಿದ್ದವರ ಬಂಧನ-ಬಿಡುಗಡೆಗೆ ಆಗ್ರಹ

ಪಿಪಿಪಿ ಮೆಡಿಕಲ್ ಕಾಲೇಜು ವಿರೋಧಿಸಿದ್ದವರ ಬಂಧನ-ಬಿಡುಗಡೆಗೆ ಆಗ್ರಹ

ಮುದ್ದೇಬಿಹಾಳ : ಜಿಲ್ಲೆಯಲ್ಲಿ ಖಾಸಗಿ ಸ್ವಾಮ್ಯದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸದೇ ಸರ್ಕಾರಿ ಸ್ವಾಮ್ಯದಲ್ಲಿ ಮೆಡಿಕಲ್

ಮಹಿಳೆಯರು ಹಿಂದೂ ಸಮ್ಮೇಳನ ಯಶಸ್ವಿಗೊಳಿಸಿ-ಕಾಶೀಬಾಯಿ ರಾಂಪೂರ

ಮಹಿಳೆಯರು ಹಿಂದೂ ಸಮ್ಮೇಳನ ಯಶಸ್ವಿಗೊಳಿಸಿ-ಕಾಶೀಬಾಯಿ ರಾಂಪೂರ

ಮುದ್ದೇಬಿಹಾಳ : ಪಟ್ಟಣದಲ್ಲಿ ಜ.11 ರಂದು ನಡೆಯಲಿರುವ ಹಿಂದೂ ಮಹಾ ಸಮ್ಮೇಳನ ಯಶಸ್ವಿಗೊಳಿಸುವಂತೆ ವೀರಶೈವ

ಪ್ರಥಮ ಬಾರಿಗೆ ಲಿಂಗಸ್ಗೂರಿನಲ್ಲಿ ಆಯೋಜನೆ:                       ಜ.11 ರಂದು ಆಕ್ಸಫರ್ಡ್ ಪಾಟೀಲ್ಸ್ ಮಾಸ್ಟರ್ ಮೈಂಡ್ ಅವಾರ್ಡ್

ಪ್ರಥಮ ಬಾರಿಗೆ ಲಿಂಗಸ್ಗೂರಿನಲ್ಲಿ ಆಯೋಜನೆ: ಜ.11 ರಂದು ಆಕ್ಸಫರ್ಡ್ ಪಾಟೀಲ್ಸ್ ಮಾಸ್ಟರ್ ಮೈಂಡ್ ಅವಾರ್ಡ್

ಮುದ್ದೇಬಿಹಾಳ : ಇದೇ ಪ್ರಥಮ ಬಾರಿಗೆ ಲಿಂಗಸುಗೂರಿನಲ್ಲಿ ಜ.11 ರಂದು ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಕಾಲೇಜಿನಿಂದ ಮಾಸ್ಟರ್ ಮೈಂಡ್ ಆವಾರ್ಡ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಎಂ.ಪಾಟೀಲ ತಿಳಿಸಿದ್ದಾರೆ. ಪರೀಕ್ಷೆಯನ್ನು 10ನೇ ತರಗತಿ ಸ್ಟೇಟ್ ಬೋರ್ಡ್,ಐಸಿಎಸ್‌ಇ,ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪರೀಕ್ಷೆ ತಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವ ವಿದ್ಯಾರ್ಥಿಗೆ 50 ಸಾವಿರ,ದ್ವಿತೀಯ ಸ್ಥಾನ 40 ಸಾವಿರ, ಮೂರನೇ ಸ್ಥಾನ

ಕೃಷಿ ಭಾಗ್ಯ ಯೋಜನೆ : ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನ

ಕೃಷಿ ಭಾಗ್ಯ ಯೋಜನೆ : ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನ

ಮುದ್ದೇಬಿಹಾಳ : ಸನ್ 2025-26ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ರೈತರು ಹೊಲಗಳಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಕೃಷಿ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಡಿ.ಭಾವಿಕಟ್ಟಿ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು,ಮುದ್ದೇಬಿಹಾಳ,ನಾಲತವಾಡ,ಢವಳಗಿ ಹಾಗೂ ತಾಳಿಕೋಟಿ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.