FIR on director yogaraja bhath

ಯೋಗರಾಜ ಭಟ್ ವಿರುದ್ಧ FIR ದಾಖಲು

ಯೋಗರಾಜ ಭಟ್ ವಿರುದ್ಧ FIR ದಾಖಲು

ಬೆಂಗಳೂರು: ಸಿನಿಮಾ ಚಿತ್ರೀಕರಣದ ವೇಳೆ 30 ಅಡಿ ಎತ್ತರದ ಏಣಿಯಿಂದ ಬಿದ್ದು ಲೈಟ್ ಬಾಯ್ ಮೃತಪಟ್ಟ ಹಿನ್ನೆಲೆ ನಿರ್ದೇಶಕ ಯೋಗರಾಜ ಭಟ್ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ ಎಂದು ತಿಳಿದುಬಂದಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada

ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ಮೋಹನ್ ಕುಮಾರ್ (30) ಮೃತ ಲೈಟ್ ಬಾಯ್ ಎಂದು ಗುರುತಿಸಲಾಗಿದೆ.

ಸೆ.3ರಂದು ಮಾದನಾಯಕನಹಳ್ಳಿ ಸಮೀಪದ ವಿಆರ್‌ಎಲ್ ಅರೇನಾ ಬಳಿ ಚಿತ್ರವೊಂದರ ಚಿತ್ರಿಕರಣ ನಡೆಯುತ್ತಿದ್ದಾಗ ಅವಘಡ ಸಂಭವಿಸಿದೆ.

ಮೃತ ಮೋಹನ್ ಹಾಗೂ ಅವರ ಸಹೋದರ ಬೆಂಗಳೂರು ನಗರದ ಬಡಾವಣೆಯೊಂದರಲ್ಲಿ ನೆಲೆಸಿದ್ದರು. ಚಿತ್ರರಂಗದಲ್ಲಿ ಇಬ್ಬರೂ ಲೈಟ್ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದರು.

ಸೆ.3ರಂದು ಚಿತ್ರೀಕರಣದ ವೇಳೆ ಮೋಹನ್ 30 ಅಡಿ ಎತ್ತರದ ಏಣಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. ಅವನನ್ನು ಗೊರಗುಂಟೆ ಪಾಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾನೆ.

ಚಿತ್ರೀಕರಣದ ವೇಳೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ ಆರೋಪ ಅಡಿ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಹಾಗೂ ವ್ಯವಸ್ಥಾಪಕ ಸುರೇಶ್ ಸೇರಿ ಮೂವರ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಭೀಕರ ಬೈಕ್ ಅಪಘಾತ: ನಾಲ್ವರ ದುರ್ಮರಣ

ಈ ಘಟನೆ ಕುರಿತು ಬೆಂಗಳೂರಿನ ಮಾದನಾಯಕನ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

Latest News

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ಮುದ್ದೇಬಿಹಾಳ : ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಅರಿತುಕೊಂಡು ಅವುಗಳನ್ನು ಪಾಲಿಸಬೇಕು ಎಂದು ಪಿಎಸ್‌ಐ ಸಂಜಯ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ತಾಲ್ಲೂಕಿನ ಮದರಿ ಗ್ರಾಮದಿಂದ ಘಾಳಪೂಜಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಆಂಧ್ರಪ್ರದೇಶದಿAದ

ಗ್ರಾಪಂ ಮಟ್ಟದ ಸೇವೆ ಅಸ್ತವ್ಯಸ್ತ ಸಾಧ್ಯತೆ:ಗ್ರಾ.ಪಂ ನೌಕರರನ್ನು ಸಮೀಕ್ಷೆಯಿಂದ ಕೈಬಿಡಲು ಒತ್ತಾಯ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ

BREAKING : ಕ್ರಿಸ್ ಮಸ್ ದಿನವೇ ರಾಜ್ಯದಲ್ಲಿ ಘೋರ ದುರಂತ : ಭೀಕರ ಅಪಘಾತದಲ್ಲಿ 17 ಕ್ಕೂ ಹೆಚ್ಚು ಮಂದಿ ದುರ್ಮರಣ

ಚಿತ್ರದುರ್ಗ : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 17 ಕ್ಕೂ ಹೆಚ್ಚು

ಬ್ರಿಲಿಯಂಟ್ ಕಲಾವೈಭವದಲ್ಲಿ ಗಮನ ಸೆಳೆದ ಭವ್ಯ ವೇದಿಕೆ; ಮನಸ್ಸಿಗೆ ಮುದ ನೀಡಿದ ಮಕ್ಕಳ ಸಾಂಸ್ಕೃತಿಕ ವೈಭವ

ಬ್ರಿಲಿಯಂಟ್ ಕಲಾವೈಭವದಲ್ಲಿ ಗಮನ ಸೆಳೆದ ಭವ್ಯ ವೇದಿಕೆ; ಮನಸ್ಸಿಗೆ ಮುದ ನೀಡಿದ ಮಕ್ಕಳ ಸಾಂಸ್ಕೃತಿಕ ವೈಭವ

ತಾಳಿಕೋಟಿ : ತಾಲ್ಲೂಕಿನ ಮೈಲೇಶ್ವರ ಬ್ರಿಲಿಯಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ,ಪ್ರೌಢಶಾಲೆಯಲ್ಲಿ ಶುಕ್ರವಾರದಿಂದ ಶಾಲೆಯಲ್ಲಿ ಎರಡು ದಿನಗಳ ಕಲಾ ವೈಭವ-2026ರ ಮೊದಲ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನ ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಬ್ರಿಲಿಯಂಟ್ ಶಾಲೆಯ 2026 ನೇ ಸಾಲಿನ ಕಲಾ ವೈಭವಕ್ಕೆಂದು ಸಿದ್ಧಪಡಿಸಿದ್ದ ಭವ್ಯ ವೇದಿಕೆ ಸಾರ್ವಜನಿಕರ,ಪಾಲಕರು,ವಿದ್ಯಾರ್ಥಿಗಳು ,ಅಧಿಕಾರಿಗಳ ಗಮನ ಸೆಳೆಯುವಂತಿತ್ತು.ಸಾಮಾನ್ಯವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆ,ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ಸರಕಾರಿ

ಮೈಲೇಶ್ವರದ ಬ್ರಿಲಿಯಂಟ್ ನಲ್ಲಿ ಕಲಾ ವೈಭವ:                  ಮಕ್ಕಳಲ್ಲಿ ಸಂಸ್ಕಾರ ವೃದ್ಧಿಸುವ ಕಾರ್ಯವಾಗಲಿ-ಬಿ.ಎಸ್.ಸಾವಳಗಿ

ಮೈಲೇಶ್ವರದ ಬ್ರಿಲಿಯಂಟ್ ನಲ್ಲಿ ಕಲಾ ವೈಭವ: ಮಕ್ಕಳಲ್ಲಿ ಸಂಸ್ಕಾರ ವೃದ್ಧಿಸುವ ಕಾರ್ಯವಾಗಲಿ-ಬಿ.ಎಸ್.ಸಾವಳಗಿ

ತಾಳಿಕೋಟೆ : ಮಕ್ಕಳಲ್ಲಿ ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಅರಿವು ಮೂಡಿಸುವ ಕಾರ್ಯ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು. ತಾಲ್ಲೂಕಿನ ಮೈಲೇಶ್ವರದ ಮಾರುತಿ ಶಿಕ್ಷಣ ಸಂಸ್ಥೆಯ ಬ್ರಿಲಿಯಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ,ಪ್ರೌಢಶಾಲೆಯಲ್ಲಿ ಶುಕ್ರವಾರದಿಂದ ಆರಂಭಗೊAಡ ಎರಡು ದಿನಗಳ ಬ್ರಿಲಿಯಂಟ್ ಕಲಾ ವೈಭವ-2026 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಬ್ರಿಲಿಯಂಟ್ ಶಾಲೆ ನಮ್ಮ ಶೈಕ್ಷಣಿಕ ವಲಯದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಅತ್ಯುತ್ತಮ ಸಾಧನೆ ತೋರುತ್ತಿದೆ.