Murder Case Image of murder symbol

Koppal: ಮಕ್ಕಳಾಗದ ಕಾರಣಕ್ಕೆ ಪತಿಯಿಂದಲೇ ಪತ್ನಿಯ ಕೊಲೆ?

Koppal: ಮಕ್ಕಳಾಗದ ಕಾರಣಕ್ಕೆ ಪತಿಯಿಂದಲೇ ಪತ್ನಿಯ ಕೊಲೆ?

ಕೊಪ್ಪಳ: ಮಕ್ಕಳಾಗಲಿಲ್ಲ ಎನ್ನುವ ಕಾರಣಕ್ಕೆ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಕುಕನೂರು ತಾಲ್ಲೂಕಿನ ಅರಕೇರಿ ಗ್ರಾಮದಲ್ಲಿ ನಡೆದಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

ವಿವಾಹ ಪೂರ್ವದಿಂದಲೂ ಸಂಬಂಧಿಕರೇ ಆಗಿದ್ದ ಕೊಲೆ ಆರೋಪಿ ಅರಕೇರಿ ಗ್ರಾಮದ ದೇವರಡ್ಡೆಪ್ಪ ಭಾವಿಕಟ್ಟಿ ಹಾಗೂ ಗೀತಾ (25) ಆರು ವರ್ಷಗಳ ಹಿಂದೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದರು.

ಮಕ್ಕಳಾಗದ ಕಾರಣಕ್ಕೆ ಅವರ ನಡುವೆ ಹಲವು ಬಾರಿ ವಾದ, ಸಂಘರ್ಷ. ಆಗಿತ್ತು. ಇದೇ ರೀತಿ ಸೆ. 7ರಂದು ತಡರಾತ್ರಿ ತಮ್ಮ ಮನೆಯಲ್ಲಿ ಸಂಘರ್ಷ ಶುರುವಾಗಿದ್ದು, ಪತ್ನಿಗೆ ಕಟ್ಟಿಗೆಯಿಂದ ಮುಖಕ್ಕೆ ಹೊಡೆದು ಪತಿ ಗಾಯಗೊಳಿಸಿ ಕೊಲೆ ಮಾಡಿದ್ದಾನೆ ಎಂದು ಮೃತ ಗೀತಾ ಅವರ ಸಹೋದರ ಸಿದ್ದರೆಡ್ಡಿ ಗಿರಡ್ಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಎಫ್‌ಐಆರ್‌ ದಾಖಲಾಗಿದೆ.

ಆರೋಪಿ, ಅವರ ತಂದೆ ಮಲ್ಲಾರಡ್ಡೆಪ್ಪ ಭಾವಿಕಟ್ಟಿ ಹಾಗೂ ಇತರರು ಗೀತಾ ಅವರ ಪೋಷಕರಿಗೆ ಸುಳ್ಳುಹೇಳಿ ಅವಸರದಿಂದಲೇ ಮೃತದೇಹವನ್ನು ಸುಟ್ಟು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಯಿಂದಾಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.

ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೀತಾ ಅವರ ತಂದೆ ಈಶಪ್ಪ ‘ಮಾವನ ಮಗನಿಗೇ ಮಗಳನ್ನು ಕೊಟ್ಟಿದ್ದೆ. ಎರಡು ದಿನಗಳ ಹಿಂದೆ ರಾತ್ರಿ ನಮ್ಮ ಮನೆಗೆ ಬಂದು ಊಟ ಮಾಡಿ ಗಂಡನ ಮನೆಗೆ ಹೋಗಿದ್ದಳು. ರಾತ್ರಿ ವೇಳೆ ಕುಡಿದು ಬಂದ ಗಂಡ ಆಕೆಯನ್ನು ಹೊಡೆದು ಕೊಂದಿದ್ದಾನೆ. ಆಕೆಗೆ ಮಕ್ಕಳಾಗಿಲ್ಲ ಎನ್ನುವ ಒಂದು ಕಾರಣಕ್ಕೆ ಆಕೆಯನ್ನು ಕೊಂದಿದ್ದಾನೆ’ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Viral news: ಪತ್ನಿಗೆ ಡ್ರಗ್ಸ್ ನೀಡಿ 73 ಜನರಿಂದ ಅತ್ಯಾಚಾರ ಮಾಡಿಸಿದ ಪಾಪಿ ಪತಿ..!

ಘಟನೆ ಸಂಬಂಧ ಅಪ್ಪ ಹಾಗೂ ಮಗನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Latest News

ಗುಡಿಮನಿಗೆ ಕರ್ನಾಟಕ ವಾಲ್ಮೀಕಿ ರತ್ನ ಪ್ರಶಸ್ತಿ

ಗುಡಿಮನಿಗೆ ಕರ್ನಾಟಕ ವಾಲ್ಮೀಕಿ ರತ್ನ ಪ್ರಶಸ್ತಿ

ಮುದ್ದೇಬಿಹಾಳ : ತಾಲ್ಲೂಕಿನ ಢವಳಗಿ ಗ್ರಾಮ ಪಂಚಾಯಿತಿ ನೌಕರ ಎಂ.ಕೆ.ಗುಡಿಮನಿ ಅವರಿಗೆ 2025ನೇ ಸಾಲಿನ

ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನಲ್ಲಿ ಸನ್ಮಾನ ಕಾರ್ಯಕ್ರಮ: 2026ಕ್ಕೆ  200 ಮೆಡಿಕಲ್ ಸೀಟು ಆಯ್ಕೆಯ ಗುರಿ-ಅಮೀತಗೌಡ ಪಾಟೀಲ್

ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನಲ್ಲಿ ಸನ್ಮಾನ ಕಾರ್ಯಕ್ರಮ: 2026ಕ್ಕೆ 200 ಮೆಡಿಕಲ್ ಸೀಟು ಆಯ್ಕೆಯ ಗುರಿ-ಅಮೀತಗೌಡ ಪಾಟೀಲ್

ಮುದ್ದೇಬಿಹಾಳ : ಉತ್ತರ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಮೆಡಿಕಲ್ ಸೀಟುಗಳನ್ನು ಪಡೆದುಕೊಳ್ಳುವಲ್ಲಿ ಹಿರಿಮೆ

ಘತ್ತರಗಿ ಭಾಗ್ಯವಂತಿಯ 23ನೇ ವರ್ಷದ ಪಾದಯಾತ್ರೆ ಆರಂಭ

ಘತ್ತರಗಿ ಭಾಗ್ಯವಂತಿಯ 23ನೇ ವರ್ಷದ ಪಾದಯಾತ್ರೆ ಆರಂಭ

ಮಾರನಾಳ : ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮಾರನಾಳದಿಂದ ಶ್ರೀ ಘತ್ತರಗಿ ಭಾಗ್ಯವಂತಿಯವರೆಗೆ ಪಾದಯಾತ್ರೆಯನ್ನು

ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಪ್ರದೀಪನ

ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಪ್ರದೀಪನ

ಮುದ್ದೇಬಿಹಾಳ : ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಶುಕ್ರವಾರ ಬಾಯ್ಲರ್ ಪ್ರದೀಪನ

ಕಾರ್ಮಿಕರ ಕಿಟ್ ವಿತರಣೆಗೆ ಅರ್ಜಿ ಆಹ್ವಾನ

ಕಾರ್ಮಿಕರ ಕಿಟ್ ವಿತರಣೆಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸುರಕ್ಷಾ ಕಿಟ್ (ಗೌಂಡಿ, ಎಲೆಕ್ಟ್ರಿಷಿಯನ್, ಕಾರಪೇಂಟರ್ ವೆಲ್ಡಿಂಗ್, ಪ್ಲಂಬರ್, ಪೇಂಟರ್) ವಿತರಿಸಲು ಕಾರ್ಮಿಕ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಯಿಂದ ನೋಂದಣಿಯಾದ ಫಲಾನುಭವಿಗಳಿಗೆ ಸುರಕ್ಷಾ ಕಿಟ್ ವಿತರಿಸಲಾಗುವುದು. ಫಲಾನುಭವಿಗಳು ಚಾಲ್ತಿಯಲ್ಲಿರುವ ಕಾರ್ಮಿಕ ಗುರುತಿನ ಚೀಟಿ, ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಪುಸ್ತಕ, ಫಲಾನುಭವಿಯ ಎರಡು ಭಾವಚಿತ್ರ ಹಾಗೂ ದ್ವಿಪ್ರತಿಗಳಲ್ಲಿ ಅ.24ರೊಳಗೆ

ಋತುಚಕ್ರ ರಜೆ ನೀತಿ: ಕಾನೂನು ಆಯೋಗದ ಅಧ್ಯಕ್ಷರೊಂದಿಗೆ ಸಚಿವ ಸಂತೋಷ್‌ ಲಾಡ್‌ ಚರ್ಚೆ

ಋತುಚಕ್ರ ರಜೆ ನೀತಿ: ಕಾನೂನು ಆಯೋಗದ ಅಧ್ಯಕ್ಷರೊಂದಿಗೆ ಸಚಿವ ಸಂತೋಷ್‌ ಲಾಡ್‌ ಚರ್ಚೆ

ಬೆಂಗಳೂರು: ಋತುಚಕ್ರ ರಜೆ ನೀತಿ ಕುರಿತು, ಕಾರ್ಮಿಕ ಸಚಿವರಾದ ಸಂತೋಷ್‌ ಎಸ್‌ ಲಾಡ್‌ ಅವರು, ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರಾದ ಅಶೋಕ್‌ ಬಿ ಹಿಂಚಿಗೇರಿ ಅವರೊಂದಿಗೆ, ಚರ್ಚೆ ನಡೆಸಿದರು. ಸಚಿವರ ಬೆಂಗಳೂರಿನ ಅಧಿಕೃತ ನಿವಾಸದಲ್ಲಿ ಈ ಭೇಟಿ ಮಾಡಲಾಯಿತು. ಋತುಚಕ್ರ ರಜೆ ನೀತಿಗೆ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ನೀತಿಯನ್ವಯ ಖಾಸಗಿ ಮತ್ತು ಸರ್ಕಾರ ವಲಯಗಳಲ್ಲಿ ದುಡಿಯುವ ಉದ್ಯೋಗಸ್ಥ ಮಹಿಳೆಯರು ತಿಂಗಳಲ್ಲಿ ಒಂದು ದಿನ