Viral news: ಬರೋಬ್ಬರಿ 71 ವರ್ಷದ ಡೊಮಿನಿಕ್ ಪೆಲ್ಲಿಕಾಟ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಆತನ ಫೋನ್ ಮತ್ತು ಗ್ಯಾಜೆಟ್ ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ ಹೇಯ ಕೃತ್ಯಯೊಂದು ಬಯಲಾಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಆತನ ಮೊಬೈಲ್ ನಲ್ಲಿದ್ದ ಮಹಿಳೆಯ ಪ್ರಜ್ಞಾಹೀನ ಸ್ಥಿತಿಯ ಫೊಟೋ ಪೊಲೀಸರಿಗೆ ಅನುಮಾನ ತರಿಸಿತ್ತು. ಈ ಕುರಿತು ವಿಚಾರಿಸಿದಾಗ ಶಾಕಿಂಗ್ ವಿಚಾರ ಬಾಯಿಬಿಟ್ಟಿದ್ದಾನೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆ ಅವನ ಹೆಂಡತಿ. ಆಕೆ ಅತ್ಯಾಚಾರಕ್ಕೆ ತುತ್ತಾಗಿದ್ದಾಳೆ. ಈ ಘಟನೆ ತುಂಬಾ ವಿಚಿತ್ರವಾಗಿ ಕಂಡು ಬಂದ ಹಿನ್ನೆಲೆ ಪೊಲೀಸರು ಆಳವಾಗಿ ತನಿಖೆ ನಡೆಸಿದಾಗ ಅಚ್ಚರಿ ಸಂಗತಿಗಳು ಬಹಿರಂಗಗೊಂಡಿವೆ.
ಫ್ರಾನ್ಸ್‌ನ ಡೊಮಿನಿಕ್ ಪೆಲ್ಲಿಕಾಟ್ ಫ್ರಾನ್ಸ್‌ನ ವಿದ್ಯುತ್ ಇಲಾಖೆಯಿಂದ ನಿವೃತ್ತರಾದರು. ಐವತ್ತು ವರ್ಷಗಳಿಂದ ತನ್ನ ಹೆಂಡತಿಯೊಂದಿಗೆ ಮನೆಯಲ್ಲಿದ್ದಾರೆ. ಅವಳಿಗೆ 70 ವರ್ಷ ವಯಸ್ಸು. ಕಳೆದ ಹದಿನಾಲ್ಕು ವರ್ಷಗಳಿಂದ ತನ್ನ ಪತ್ನಿಗೆ ಡ್ರಗ್ಸ್ ನೀಡಿ ಪ್ರಜ್ಞೆ ತಪ್ಪಿಸಿದ್ದ. ಅಷ್ಟೇ ಅಲ್ಲ, ಅಪರಿಚಿತರನ್ನು ಕರೆಸಿ ಅತ್ಯಾಚಾರ ಮಾಡಿಸಿದ್ದಾನೆ.
ಇದುವರೆಗೆ 72 ಜನರು ಆ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಅವರಲ್ಲಿ ಕೆಲವರು ಎರಡು ಬಾರಿ ಬಂದವರೂ ಇದ್ದಾರೆ. ಅತ್ಯಾಚಾರ ಎಸಗಿದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆದರೆ, ಇದೆಲ್ಲವೂ ಪರಸ್ಪರ ಒಪ್ಪಿಗೆಯಿಂದ ನಡೆಯುತ್ತಿದೆ ಅಂತ ಅವರು ಭಾವಿಸಿದ್ದರು. ಇದು ಫ್ಯಾಂಟಸಿ ಅಂತ ತಿಳಿದ್ದರಂತೆ. ಅತ್ಯಾಚಾರ ಮಾಡಿಲ್ಲ ಎಂದು ಆರೋಪಿಗಳು ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ: Accident: ಕಾರುಗಳ ಮುಖಾಮುಖಿ ಡಿಕ್ಕಿ, ಎಂಟು ವರ್ಷದ ಮಗು ಸೇರಿ ಐವರ ದುರ್ಮರಣ
ಒಟ್ಟಿನಲ್ಲಿ, ಪತ್ನಿಯ ಮೇಲೆ ಮುದುಕ ಗಂಡನ ಅರಾಜಕತೆ ಇದೀಗ ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದೆ.