Muddebihal: Take up sports as a hobby - enjoy them

Muddebihal: ಕ್ರೀಡೆಗಳನ್ನು ಹವ್ಯಾಸವಾಗಿ ಸ್ವೀಕರಿಸಿ-ಸಾವಳಗಿ

Muddebihal: ಕ್ರೀಡೆಗಳನ್ನು ಹವ್ಯಾಸವಾಗಿ ಸ್ವೀಕರಿಸಿ-ಸಾವಳಗಿ

ಮುದ್ದೇಬಿಹಾಳ : ವಿದ್ಯಾರ್ಥಿಗಳು ಆಟಗಳನ್ನು ಹವ್ಯಾಸವಾಗಿ ಸ್ವೀಕರಿಸಿ ಆಡಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

ಪಟ್ಟಣದ ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜಿನಲ್ಲಿ ಈಚೇಗೆ ಸನ್ 2024-25 ಸಾಲಿನ ಮುದ್ದೇಬಿಹಾಳ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜಗಳ ಗುಂಪು ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಪಿಎಂಸಿ ಸದಸ್ಯರಾದ ವಾಯ್. ಎಚ್. ವಿಜಯಕರ್,ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜಿನ ಅಧ್ಯಕ್ಷ ಎಸ್.ಎಂ.ನೆರಬೆಂಚಿ ಮಾತನಾಡಿ, ಕ್ರೀಡಾಪಟುಗಳು ಸ್ಪರ್ಧಾಮನೋಭಾವದಿಂದ ಆಟಗಳನ್ನು ಆಡಬೇಕೆಂದರು.

ಕ್ರೀಡಾ ಧ್ವಜವನ್ನು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ಬಿ.ಕೆ.ಬಿರಾದಾರ ಸ್ವೀಕರಿಸಿದರು. ದೈಹಿಕ ಉಪನ್ಯಾಸಕ ಯು.ಸಿ. ಕೋನರೆಡ್ಡಿ ಕ್ರೀಡಾಧ್ವಜಾರೋಹಣ ನಡೆಸಿಕೊಟ್ಟರು. ದೈಹಿಕ ಉಪನ್ಯಾಸಕರಾದ ಬಿ. ಟಿ ಭಜಂತ್ರಿ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಮುಖ್ಯ ಅತಿಥಿಗಳಾಗಿ ಸರ್ಕಾರಿ ಪಿಯು ಕಾಲೇಜ ಪ್ರಾಂಶುಪಾಲ ಎಸ್.ಎಸ್.ಅಂಗಡಿ, ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್.ಮದರಿ, ಎಸ್.ಡಿ.ಆರ್ ಸಂಸ್ಥೆಯ ಅಧ್ಯಕ್ಷ ವೆಂಕನಗೌಡ ಪಾಟೀಲ, ಸೇವಾಲಾಲ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಎನ್. ನಾಯಕ,ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ ನಾಯಕ, ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಆರ್.ಬಿ.ರೂಡಗಿ ಇದ್ದರು.

ಎಂಜಿಎಂಕೆ ಪ್ರಾಂಶುಪಾಲ ಎಸ್.ಕೆ. ಹರನಾಳರವರು ಸ್ವಾಗತ ಭಾಷಣ ಮಾಡಿದರು. ಉಪನ್ಯಾಸಕ ಬಿ.ಆರ್ ಬೆಳ್ಳಿಕಟ್ಟಿ ನಿರೂಪಿಸಿದರು.

ಕ್ರೀಡಾಕೂಟಗಳ ಫಲಿತಾಂಶ ಇಂತಿದೆ:

ಬಾಲಕರ ವಿಭಾಗದಲ್ಲಿ ಖೋ ಖೋ: ಪ್ರಥಮ-ಎಂಜಿವಿಸಿ ಪಿಯು ಕಾಲೇಜ, ಮುದ್ದೇಬಿಹಾಳ, ದ್ವಿತೀಯ-ಎಸ್.ಎಸ್. ಪಿಯು ಕಾಲೇಜ ಮುದ್ದೇಬಿಹಾಳ, ಕಬಡ್ಡಿ: ಪ್ರಥಮ-ಎಸ್.ಎಸ್.ಪಿಯು ಕಾಲೇಜ ಮುದ್ದೇಬಿಹಾಳ, ದ್ವಿತೀಯ- ಸರ್ಕಾರಿ ಪಿಯು ಕಾಲೇಜ ರಕ್ಕಸಗಿ, ವ್ಹಾಲಿಬಾಲ್: ಪ್ರಥಮ-ಎಸ್.ಎಸ್. ಪಿಯು ಕಾಲೇಜ ಮುದ್ದೇಬಿಹಾಳ, ದ್ವಿತೀಯ-ಎಕ್ಷಫರ್ಟ್ ಪಿಯು ಕಾಲೇಜ, ನಾಗರಬೆಟ್ಟ, ಬಾಲಕಿಯರ ವಿಭಾಗದಲ್ಲಿ ಖೋ ಖೋ ಪ್ರಥಮ: ಎಂಜಿವಿಸಿ ಪಿಯು ಕಾಲೇಜ, ಮುದ್ದೇಬಿಹಾಳ, ದ್ವಿತೀಯ: ಶ್ರೀ ವಿರೇಶ್ವರ ಪಿಯು ಕಾಲೇಜ, ನಾಲತವಾಡ, ಕಬಡ್ಡಿ: ಪ್ರಥಮ- ಎಸ್.ಎಸ್. ಪಿಯು ಕಾಲೇಜ ಮುದ್ದೇಬಿಹಾಳ, ದ್ವಿತೀಯ: ಸರ್ಕಾರಿ ಪಿಯು ಕಾಲೇಜ, ಮುದ್ದೇಬಿಹಾಳ, ವ್ಹಾಲಿಬಾಲ್: ಪ್ರಥಮ- ಎಸ್.ಎಸ್. ಪಿಯು ಕಾಲೇಜ ಮುದ್ದೇಬಿಹಾಳ, ದ್ವಿತೀಯ- ಸರ್ಕಾರಿ ಪಿಯು ಕಾಲೇಜ, ಬಸರಕೊಡ.

Latest News

ಬಸರಕೋಡದಲ್ಲಿ ಹಬ್ಬದ ಸಂಭ್ರಮ:                                         ಪವಾಡ ಬಸವೇಶ್ವರರ ನೂತನ ಮೂರ್ತಿ ಪ್ರತಿಷ್ಠಾಪನೆ

ಬಸರಕೋಡದಲ್ಲಿ ಹಬ್ಬದ ಸಂಭ್ರಮ: ಪವಾಡ ಬಸವೇಶ್ವರರ ನೂತನ ಮೂರ್ತಿ ಪ್ರತಿಷ್ಠಾಪನೆ

ಮುದ್ದೇಬಿಹಾಳ : ತಾಲ್ಲೂಕಿನ ಐತಿಹಾಸಿಕ ಸುಕ್ಷೇತ್ರ ಬಸರಕೋಡ ಗ್ರಾಮದಲ್ಲಿ ಮಂಗಳವಾರ ಗೌರಿ ಹುಣ್ಣಿಮೆಯ ದಿನದಂದು

ರವಿ ಹಂಜ್ ಚಿತ್ರಕ್ಕೆ ಬೆಂಕಿ:                                                                ಬಸವ ಪರಂಪರೆ ವಿನಾಶಕ್ಕೆ ಷಡ್ಯಂತ್ರ ನಡೆದಿದೆ-ಬಿದರಕುಂದಿ

ರವಿ ಹಂಜ್ ಚಿತ್ರಕ್ಕೆ ಬೆಂಕಿ: ಬಸವ ಪರಂಪರೆ ವಿನಾಶಕ್ಕೆ ಷಡ್ಯಂತ್ರ ನಡೆದಿದೆ-ಬಿದರಕುಂದಿ

ಮುದ್ದೇಬಿಹಾಳ : ವೀರಶೈವ ಲಿಂಗಾಯತರ ಹೆಗಲ ಮೇಲೆ ಬಂದೂಕು ಇಟ್ಟು ಬಸವ ಪರಂಪರೆಯನ್ನು ಹಾಳು

ತನಿಖೆಗೆ ಶಾಸಕ ಸಿ.ಎಸ್.ನಾಡಗೌಡರ ಸೂಚನೆ:                       ನಾಗರಬೆಟ್ಟ ಏತ ನೀರಾವರಿ ಯೋಜನೆ ಪೈಪಲೈನ್ ಕಾಮಗಾರಿ ಕಳಪೆ

ತನಿಖೆಗೆ ಶಾಸಕ ಸಿ.ಎಸ್.ನಾಡಗೌಡರ ಸೂಚನೆ: ನಾಗರಬೆಟ್ಟ ಏತ ನೀರಾವರಿ ಯೋಜನೆ ಪೈಪಲೈನ್ ಕಾಮಗಾರಿ ಕಳಪೆ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಯಡಿ ಅಳಡಿಸಿರುವ ಪೈಪಲೈನ್ ಕಳಪೆ ಗುಣಮಟ್ಟದ್ದಾಗಿದೆ ಎಂಬ

ಮುದ್ದೇಬಿಹಾಳ : ನ.25 ರಂದು ಬೃಹತ್ ರಕ್ತದಾನ ಶಿಬಿರ

ಮುದ್ದೇಬಿಹಾಳ : ನ.25 ರಂದು ಬೃಹತ್ ರಕ್ತದಾನ ಶಿಬಿರ

ಮುದ್ದೇಬಿಹಾಳ : ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆಯ ಅಂಗವಾಗಿ ನ.25ರಂದು ಬೆಳಿಗ್ಗೆ 9:30 ಗಂಟೆಗೆ

ಸಹಕಾರ ಸಪ್ತಾಹ ಸಮಾರೋಪ:                                                   ಸಹಕಾರ ತತ್ವದಿಂದ ಗ್ರಾಮೀಣರ ಆರ್ಥಿಕಾಭಿವೃದ್ಧಿ-ಬಿರಾದಾರ

ಸಹಕಾರ ಸಪ್ತಾಹ ಸಮಾರೋಪ: ಸಹಕಾರ ತತ್ವದಿಂದ ಗ್ರಾಮೀಣರ ಆರ್ಥಿಕಾಭಿವೃದ್ಧಿ-ಬಿರಾದಾರ

ಮುದ್ದೇಬಿಹಾಳ : ಸಹಕಾರ ಚಳುವಳಿಯಿಂದ ಗ್ರಾಮೀಣ ಪ್ರದೇಶದಲ್ಲಿ ರೈತರು,ದುರ್ಬಲ ವರ್ಗದವರ ಏಳ್ಗೆಗೆ ಆಸರೆಯಾಗಿದೆ ಎಂದು ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸೋಮನಗೌಡ ಬಿರಾದಾರ ಹೇಳಿದರು. ತಾಲ್ಲೂಕಿನ ಹಡಲಗೇರಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳ ನಿಯಮಿತ,ಜಿಲ್ಲಾ ಸಹಕಾರಿ ಯೂನಿಯನ್ ವಿಜಯಪುರ,ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘ ಹಡಲಗೇರಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸಹಕಾರ ಚಳವಳಿಯನ್ನು ಮುಂಚೂಣಿಗೆ

ಬಸವಣ್ಣನವರ ಅವಹೇಳನ : ಬಸವಾಭಿಮಾನಿಗಳ ಆಕ್ರೋಶ

ಬಸವಣ್ಣನವರ ಅವಹೇಳನ : ಬಸವಾಭಿಮಾನಿಗಳ ಆಕ್ರೋಶ

ಮುದ್ದೇಬಿಹಾಳ : ಬಸವಣ್ಣನವರ ಬಗ್ಗೆ ಬಂದಿರುವಷ್ಟು ಸಾಹಿತ್ಯ ಬೇರೆಯವರ ಬಗ್ಗೆ ಬಂದಿಲ್ಲ.ಆದರೆ ಕೆಲವು ಕುತ್ಸಿತ ಮನೋಭಾವದವರು ಸಮಾಜದಲ್ಲಿ ಸಮಾನತೆಯ ವ್ಯವಸ್ಥೆಯನ್ನು ಉರುಳಿಸಬೇಕು ಎನ್ನುವ ಹುನ್ನಾರದಿಂದ ಬಸವಣ್ಣನವರ ಅವಹೇಳನಕ್ಕೆ ಮುಂದಾಗಿರುವುದನ್ನು ಬಸವಾಭಿಮಾನಿಗಳು ಪ್ರಬಲವಾಗಿ ಖಂಡಿಸುವುದಾಗಿ ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಪುಸ್ತಕ ಬರೆಯಲು ಪ್ರೇರೇಪಣೆ ನೀಡಿದವರನ್ನು ಸಿಎಂ ಪಕ್ಕದಲ್ಲಿ ಕೂಡುತ್ತಾರೆ.ಬಸವಣ್ಣನವರ ಅನುಯಾಯಿಗಳ ಮೌನ,ನಿರ್ಲಕ್ಷ್ಯ ಭಾವನೆಯಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು