ಎರಡು ವರ್ಷ ಕರ್ತವ್ಯ ನಿರ್ವಹಿಸಿದ್ದು ನನ್ನ ಭಾಗ್ಯ: ಸಿಪಿಐ ಸುನೀಲ್ ಸವದಿ

ಎರಡು ವರ್ಷ ಕರ್ತವ್ಯ ನಿರ್ವಹಿಸಿದ್ದು ನನ್ನ ಭಾಗ್ಯ: ಸಿಪಿಐ ಸುನೀಲ್ ಸವದಿ

ಹುನಗುಂದ: ಜಗಜ್ಯೋತಿ ಅಣ್ಣ ಬಸವಣ್ಣನವರು ನಡೆದಾಡಿದ ಮತ್ತು ಚಾಲುಕ್ಯರ  ಸಾಮ್ರಾಜ್ಯದ ವೀರ ಪುಲಕೇಶಿಯ ಅವರ ಪುಣ್ಯಭೂಮಿಯಲ್ಲಿ ಯಶಸ್ವಿಯಾಗಿ ಎರಡು ವರ್ಷ ಕರ್ತವ್ಯ ನಿರ್ವಹಿಸಿದ್ದು ಭಾಗ್ಯ ನಮ್ಮದು ಎಂದು ಹುನಗುಂದ ಸಿಪಿಐ ಸುನೀಲ್ ಸವದಿ ಹೇಳಿದರು.

ಪಟ್ಟಣದ ಗುರು ಭವನದ ನಡೆದ ಗುರವಾರ   ಹುನಗುಂದ ಡಿವೈಎಸ್ಪಿ  ಹಾಗೂ ಸಿಪಿಐ  ಅವರನ್ನು  ಬೀಳ್ಕೋಡಿಗೆ ಸಮಾರಂಭ ಹಾಗೂ ನೂತನ ಡಿವೃಎಸ್ಪಿ ಸ್ವಾಗತ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು   ಪೋಲೀಸ್ ಇಲಾಖೆಯು ಇದೀಗ ಪೂರ್ತಿಯಾಗಿ ಜನಸ್ನೇಹಿ ಪೋಲಿಸ್ಆಗಿದೆ. ಸಂವಿಧಾನದ ಹಾಗೂ ಕಾನೂನುನಿನ ನಿಯಮಾವಳಿಯ ಚೌಕಟ್ಟಿನಲ್ಲಿ ನಾವು ಕರ್ತವ್ಯ ನಿರ್ವಹಿಸಬೇಕು.ನಮಗೆ ನಮ್ಮ ಇಲಾಖೆಯ ಮೇಲೆ ಜವಾಬ್ದಾರಿ ಬಹಳಷ್ಟು ಇರುತ್ತದೆ. ಪೋಲಿಸ್ ರು ನೊಂದವರ, ಬಡವರಿಗೆ ನ್ಯಾಯ ಕೊಡುಸುವ ಕೆಲಸ ಮಾಡಬೇಕು ಎಂದರು.


ಹೆಂಡತಿ- ಮಕ್ಕಳ ಹೊಟ್ಟೆಗಾಗಿ ಹಾಗೂ ಕುಟುಂಭದ ಉದ್ದಾರದ ಭಾವನೆಯಿಂದ ಕೆಲಸ ಮಾಡುತ್ತಿದ್ದರೆ ಅದು ವ್ಯರ್ಥ, ನಮಗಿರುವ ಶಕ್ತಿಯನ್ನು ವ್ಯಯಕ್ತಿಕ ಬಳಸಿಕೊಳ್ಳದೆ. ಸಮಾಜ ಶಾಂತಿ ಸುವ್ಯವಸ್ಥೆ ಗೆ ಬಳಕೆ ಮಾಡಿದರೆ ಈ ಹುದ್ದೆಗೆ ಸೇರಿದ್ದು ಸಾರ್ಥಕ ವಾಗುತ್ತದೆ .ಸೇವೆಗೆ ಅವಕಾಶ ನೀಡಿದ ಹುನಗುಂದ ಇಲಕಲ್ಲ, ಅಮೀನಗಡದ ಭಾಗದ ಎಲ್ಲ ಸಾರ್ವಜನರಿಗೆ ನಮ್ಮ ಸಿಬ್ಬಂದಿಗಳಿಗೆ ಧನ್ಯವಾದಗಳು ಎಂದು ತಿಳಿಸಿದರು.

ಹುನಗುಂದ ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ಮಾತನಾಡಿ. ಕಳೆದ ಎರಡು ವರ್ಷ ಅವಧಿಯಲ್ಲಿ ಹುನಗುಂದ ಉಪವಿಭಾಗ ನನಗೆ ಅತ್ಯಂತ ಕುಷಿ ತಂದಿದೆ.  ಆದರೆ ನಾವು ಹೇಗೆ ಕೆಲಸ ಮಾಡುತ್ತೇವೆ ಅಧಿಕಾರ  ಬಳಸುವುದರ  ಮೂಲಕ ನಮ್ಮ ಕೆಲಸ ಮುಖ್ಯವಾಗುತ್ತದೆ.  ಸಾರ್ವಜನಿಕರು, ರಾಜಕೀಯ ಮುಖಂಡರು, ಮಾಧ್ಯಮ ಮಿತ್ರರರು ಎಲ್ಲ ಸಹಕಾರದಿಂದಲೇ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಯಿತು.ಸರ್ಕಾರಿ ಸೇವೆಯಲ್ಲಿ ಬದಲಾವಣೆಯೂ ಸಹಜ ಆದರೆ ಸರ್ಕಾರ ನಿಯಮಗಳ ಮೂಲಕ ಪೋಲಿಸ್ ಇಲಾಖೆಯೂ ಬದಲಾವಣೆ ಯಾಗುತ್ತಿದ್ದಂತೆ ಅದರಂತೆ ನಾವು ಬದಲಾವಣೆ ಆಗಬೇಕು. ಸಾರ್ವಜನಿಕ ಉತ್ತಮ ಸೇವೆ ಕೊಡಬೇಕು ಎಂದರು.

ನಮ್ಮ ಕೆಲಸವನ್ನು ಶ್ರದ್ದೆ ಯಿಂದ ಮಾಡಿದರೆ ನಮ್ಮ ಕೆಲಸ ಸಾರ್ಥಕವಾಗುತ್ತದೆ. ನಮ್ಮ ಮೇಲಾಧಿಕಾರಿಗಳು ಸಹಕಾರದಿಂದ  ಎರಡು ವರ್ಷ ಉತ್ತಮ ಕೆಲಸ ಮಾಡಿದ್ದೇವೆ. ಉತ್ತಮ‌ ಸಮಾಜ ನಿರ್ಮಾಣದಲ್ಲಿ  ಪೋಲಿಸ ಇಲಾಖೆಯ ಪಾತ್ರವು ಮಹತ್ವವಿದೆ ಎಂದು ತಿಳಿಸಿದರು.

ನೂತನ ಡಿವೈಎಸ್ಪಿ ಸಂತೋಷ ಬನ್ನಿಟ್ಟಿ ಮಾತನಾಡಿ, ಎಲ್ಲರೂ ಮೊದಲಿನಂತೆ ನಮಗೂ ಸಹಕಾರಿ ನೀಡಿ ಸಾರ್ವಜನಿಕರ ಯಾವುದೇ ಸಮಸ್ಯೆಗೆ ಪರಿಹಾರಕ್ಕೆ ನಮ್ಮ ಇಲಾಖೆಯೂ ಸ್ಪಂದಿಸುತ್ತದೆ ಎಂದು ತಿಳಿಸಿದರು.

ಕಾನಿಪ ಅಧ್ಯಕ್ಷ ಅಮರೇಶ ನಾಗೂರ, ಕಾರ್ಯದರ್ಶಿ‌ ಮಲ್ಲಿಕಾರ್ಜುನ ಹೊಸಮನಿ, ಮಾಜಿ ಸೈನಿಕ ವಿಜಯ ದಳವಾಯಿ, ಇಳಕಲ್ಲ ಪಿಎಸ್ ಐ ಎಸ್.ಆರ್.ನಾಯಕ ಮಾತನಾಡಿದರು.

ಬದಾಮಿ ಸಿಪಿಐ ಕರೆಯಪ್ಪ ಬನ್ನಿ ,ಹುನಗುಂದ ಪಿಎಸ್ಐ ಎಸ್.ಜಿ. ಆಲದಕಟ್ಟಿ , ಅಮೀನಗಡ ಪಿಎಸ್ ಐ ಜ್ಯೋತಿ ವಾಲೀಕಾರ, ಮಂಜುನಾಥ ಪಾಟೀಲ್ ಸೇರಿದಂತೆ ಇತರರು ಇದ್ದರು.

Latest News

ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ನಾಲತವಾಡ: ಸಮೀಪದ ಲೊಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತಿಯ ಕಾಂತಿ ಮಕ್ಕಳ ಮೂಲಕ

ಮಹಿಳೆಯರಿಗೆ ಋತುಚಕ್ರ ರಜೆ :ಸರ್ಕಾರದಿಂದ ಮಾನವೀಯ ಸಂವೇದನೆಯ ಆದೇಶ-ಸಂಗೀತಾ ನಾಡಗೌಡ

ಮಹಿಳೆಯರಿಗೆ ಋತುಚಕ್ರ ರಜೆ :ಸರ್ಕಾರದಿಂದ ಮಾನವೀಯ ಸಂವೇದನೆಯ ಆದೇಶ-ಸಂಗೀತಾ ನಾಡಗೌಡ

ಮುದ್ದೇಬಿಹಾಳ : ರಾಜ್ಯ ಸರ್ಕಾರ ಎರಡು ದಿನಗಳ ಹಿಂದಷ್ಟೇ ರಾಜ್ಯದ ಸರ್ಕಾರಿ,ಖಾಸಗಿ.ಗುತ್ತಿಗೆ,ಹೊರಗುತ್ತಿಗೆ ಕ್ಷೇತ್ರದಲ್ಲಿ ಸೇವೆ

ನ.16 ರಂದು ವಿಜಯಪುರದಲ್ಲಿ ಪದಗ್ರಹಣ  :       ಮುದ್ದೇಬಿಹಾಳ A.I.B.S.S ಸಂಘಕ್ಕೆ ಬಹಾದ್ದೂರ ರಾಠೋಡ ಪುನರಾಯ್ಕೆ

ನ.16 ರಂದು ವಿಜಯಪುರದಲ್ಲಿ ಪದಗ್ರಹಣ : ಮುದ್ದೇಬಿಹಾಳ A.I.B.S.S ಸಂಘಕ್ಕೆ ಬಹಾದ್ದೂರ ರಾಠೋಡ ಪುನರಾಯ್ಕೆ

ಮುದ್ದೇಬಿಹಾಳ : ಬಂಜಾರಾ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಲು, ಸಮಾಜದ ಮಕ್ಕಳು ಶೈಕ್ಷಣಿಕ,ಔದ್ಯೋಗಿಕ

ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಮುದ್ದೇಬಿಹಾಳ : ತಂಗಡಗಿ ಇಳಿಜಾರಿನಿಂದ ಶಿರೋಳ ಗ್ರಾಮದ ಬಳಿ ಹಾಯ್ದು ಹೋಗಿರುವ ಕೆಬಿಜೆಎನ್‌ಎಲ್‌ನ ಎಡದಂಡೆ

MUDDEBIHAL :  ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

MUDDEBIHAL : ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

ಮುದ್ದೇಬಿಹಾಳ ತಾಲ್ಲೂಕಿನ ಶಿರೋಳ ಗ್ರಾಮದ ಸಮೀಪದಲ್ಲಿ ಕಾಲುವೆಯಲ್ಲಿ ಕಾಲು ಜಾರಿ ಮೂವರು ಬಿದ್ದಿರುವ ಘಟನೆ ಮಂಗಳವಾರ ಮದ್ಯಾಹ್ನ ನಡೆದಿದೆ. ಈ ಘಟನೆ ಹಿನ್ನೆಲೆಯಲ್ಲಿ ಅಗ್ನಿಶಾಮಕ ಠಾಣೆ ಹಾಗೂ ಪೊಲೀಸ್ ಇಲಾಖೆಯಿಂದ ಶೋಧ ಕಾರ್ಯ ಮುಂದುವರೆದಿದೆ. ಮಹೆಬೂಬ ನಗರದ ಪಕ್ಕದಲ್ಲಿರುವ ಆಶ್ರಯ ಕಾಲನಿಯಲ್ಲಿ ವಾಸವಿದ್ದ ಸುಡಗಾಡ ಸಿದ್ಧ ಜನಾಂಗದ ಇಬ್ಬರು ಯುವಕರು, ಓರ್ವ ಯುವತಿ ಕಾಲುವೆಯಲ್ಲಿ ಮುಳುಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರಿಂದ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಬಸಮ್ಮ ಚೆನ್ನಪ್ಪ ಕೊಣ್ಣೂರ(21),

ಐದು ದಿನಗಳ ಹೋರಾಟ ಅಂತ್ಯ :                                       ಟನ್ ಕಬ್ಬಿಗೆ 3264 – ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ  ಅಧಿಕೃತ ಘೋಷಣೆ

ಐದು ದಿನಗಳ ಹೋರಾಟ ಅಂತ್ಯ : ಟನ್ ಕಬ್ಬಿಗೆ 3264 – ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅಧಿಕೃತ ಘೋಷಣೆ

ಮುದ್ದೇಬಿಹಾಳ : ಕಬ್ಬಿನ ರಿಕವರಿ ಆಧಾರದ ಮೇಲೆ ಟನ್ ಕಬ್ಬಿಗೆ 3264 ರೂ.ನೀಡುವುದಾಗಿ ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಶನಿವಾರ ಅಧಿಕೃತ ಘೋಷಣೆ ಮಾಡಿದ್ದು ಕಳೆದ ಐದು ದಿನಗಳಿಂದ ತಾಲ್ಲೂಕಿನ ಅಮರಗೋಳ ಕ್ರಾಸ್ ಬಳಿ ನಡೆಯುತ್ತಿದ್ದ ರೈತರ ಹೋರಾಟ ಅಂತ್ಯಗೊAಡಿದೆ. ತಾಲ್ಲೂಕಿನ ಅಮರಗೋಳ ಕ್ರಾಸ್ ಬಳಿ ಕಬ್ಬಿನ ವಾಹನಗಳನ್ನು ತಡೆದು ನಿಲ್ಲಿಸಿ ಕರ್ನಾಟಕ ರೈತ ಸಂಘ ಹಾಗೂ ರೈತಪರ ಸಂಘಟನೆಯ ಮುಖಂಡರು ಹೋರಾಟ ಆರಂಭಿಸಿದ್ದರು.ಇಲ್ಲಿನ