ಮುದ್ದೇಬಿಹಾಳ : ಸೌರಮಂಡಲದಲ್ಲಿ ಲಕ್ಷಾಂತರ ಗೃಹಗಳು, ನಕ್ಷತ್ರಗಳಿದ್ದರೂ ಮನುಷ್ಯ ವಾಸವಿರುವ ಭೂಮಿ ಇದೊಂದೇ, ಇದನ್ನು ನಾವೇ ನಮ್ಮ ಕೈಯಾರೆ ಸ್ವಯಂಕೃತ ತಪ್ಪುಗಳಿಂದ ಹಾಳು ಮಾಡುವುದು ಬೇಡ ಎಂದು ಸಂತ ಕನಕದಾಸ ಶಾಲೆಯ ಕಾರ್ಯದರ್ಶಿ ಬಿ.ಎಸ್.ಮೇಟಿ ಹೇಳಿದರು.
ಪಟ್ಟಣದ ಸಂತ ಕನಕದಾಸ ಶಾಲೆಯಲ್ಲಿ ಶನಿವಾರ ಹಸಿರು ತೋರಣ ಗೆಳೆಯರ ಬಳಗ ಹಮ್ಮಿಕೊಂಡಿದ್ದ “ಪಟಾಕಿ ಬೇಡ, ದೀಪ ಬೆಳಗೋಣ” ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಳಗದ ಅಧ್ಯಕ್ಷ ಡಾ.ವೀರೇಶ ಇಟಗಿ, ದೊಡ್ಡ ಶಬ್ದ ಮಾಡುವ ಪಟಾಕಿಗಳಿಂದ ಮನುಷ್ಯನಿಗೆ, ಪ್ರಾಣಿ, ಪಕ್ಷಿಗಳಿಗೆ ಬಹಳ ತೊಂದರೆಯಾಗುತ್ತಿದೆ. ಪಟಾಕಿಗಳಿಂದ ಹೊರಹೊಮ್ಮುವ ವಿಷಾನಿಲಗಳು ಶ್ವಾಸಕೋಶದ ರೋಗಗಳು ಮತ್ತು ಕ್ಯಾನ್ಸರನಂತಹ ಗಂಭೀರ ಖಾಯಿಲೆಗಳು ಬರುತ್ತವೆ. ಜೊತೆಗೆ ಮಕ್ಕಳು ಪಟಾಕಿ ಹೊಡೆಯುವ ಸಮಯದಲ್ಲಿ ಕೈ, ಕಣ್ಣು ಸೇರಿದಂತೆ ಜೀವ ಕಳೆದುಕೊಂಡ ಘಟನೆಗಳನ್ನು ನೋಡುತ್ತಿದ್ದೇವೆ. ಇದು ತಪ್ಪಬೇಕೆಂದರೆ ಪಟಾಕಿ ಹೊಡೆಯುವ ಬಗ್ಗೆ, ಅದರ ಅಪಾಯಗಳ ಬಗ್ಗೆ ಅರಿಯಬೇಕು ಎಂದರು.
ಹಸಿರು ತೋರಣ ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿ, ಪಟಾಕಿ ಸಿಡಿಸುವುದು ಎಂದರೆ ಶ್ರಮಪಟ್ಟು ದುಡಿದ ಲಕ್ಷಾಂತರ ಹಣಕ್ಕೆ ಬೆಂಕಿ ಹಚ್ಚುವುದಕ್ಕೆ ಸಮ. ಈ ಭೂಮಿಯ ಮೇಲೆ ಬದುಕುವ ಹಕ್ಕು ನಮಗಿರುವಷ್ಟೇ ಪ್ರಾಣಿ, ಪಕ್ಷಿಗಳಿಗೂ ಇದೆ. ನಮ್ಮ ಆಶೆ ಆಕಾಂಕ್ಷೆಗಳನ್ನು ನಿಯಂತ್ರಿಸುವ ಕೆಲಸ ನಡೆಯಬೇಕು ಎಂದರು.
ತಾಲ್ಲೂಕು ಕುರುಬರ ಸಂಘದ ನಿರ್ದೇಶಕ ನಾಗಪ್ಪ ರೂಢಗಿ, ಹಸಿರು ತೋರಣ ಗೆಳೆಯರ ಬಳಗದ ಮಾಜಿ ಅಧ್ಯಕ್ಷರಾದ ನಾಗಭೂಷಣ ನಾವದಗಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಕಾರ್ಯದರ್ಶಿ ಬಿ.ಎಚ್.ಬಳಬಟ್ಟಿ, ಉಪಾಧ್ಯಕ್ಷ ಬಸವರಾಜ ಬಿಜ್ಜೂರ, ವೀರಶೈವ ಮಹಾಸಭಾ ಅಧ್ಯಕ್ಷ ವೆಂಕನಗೌಡ ಪಾಟೀಲ, ಸದಸ್ಯರಾದ ಸುರೇಶ ಕಲಾಲ, ಸೋಮಶೇಖರ ಚೀರಲದಿನ್ನಿ, ಪ್ರೌಢಶಾಲೆಯ ಮುಖ್ಯ ಗುರು ಬಿ.ಎಸ್.ಫಣೇದಕಟ್ಟಿ, ಶಿಕ್ಷಕರಾದ ಆರ್.ಜಿ.ಮೆಣಸಗಿ, ಎಸ್.ಎನ್.ಸಜ್ಜನ, ಆರ್.ವೈ.ಪಾಟೀಲ, ಆರ್.ಎಸ್.ವಾಲಿಕಾರ, ಲಕ್ಷ್ಮೀ ಗುಬಚಿ, ಲತಾ ಮೇಟಿ, ಬಸಮ್ಮ ಬರದೇನಾಳ, ಜಿ.ಎಂ.ಹುಲಗಣ್ಣಿ, ಮತ್ತಿತರರು ಇದ್ದರು. ಮಾಣಿಕ್ಯಮ್ಮ ತಡಸದ ಪ್ರಾರ್ಥಿಸಿದರು. ಮುಖ್ಯ ಗುರುಗಳಾದ ಎಂ.ಎನ್.ಯರಝರಿ ಸ್ವಾಗತಿಸಿದರು. ಎಂ.ಸಿ.ಕಬಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲ ಹೂಗಾರ ನಿರೂಪಿಸಿ, ವಂದಿಸಿದರು.
ಪಟಾಕಿ ಬೇಡ: ದೀಪಗಳನ್ನು ಬೆಳಗಿಸೋಣ:ಇರುವುದೊಂದೇ ಭೂಮಿ: ರಕ್ಷಿಸೋಣ : ಮೇಟಿ
ಪಟಾಕಿ ಬೇಡ: ದೀಪಗಳನ್ನು ಬೆಳಗಿಸೋಣ:ಇರುವುದೊಂದೇ ಭೂಮಿ: ರಕ್ಷಿಸೋಣ : ಮೇಟಿ
Latest News
ಅರ್ಜುನ ಆಸ್ಪತ್ರೆ ಸಹಯೋಗ: ನವಜಾತ ಶಿಶುಗಳ ನಿಯಮಿತ ಆರೈಕೆ ಅಗತ್ಯ-ಡಾ.ಪರಶುರಾಮ
ಮುದ್ದೇಬಿಹಾಳ : ನವಜಾತ ಶಿಶುಗಳ ನಿಯಮಿತ ಆರೈಕೆಯಿಂದ ಆರೋಗ್ಯಪೂರ್ಣವಾದ ಮಗು ಸಮಾಜದಲ್ಲಿ ಬೆಳವಣಿಗೆ ಹೊಂದಲು
ಸಿಂಗಲ್ ಟೆಂಡರ್‌ಗೆ ಅವಕಾಶ ಕೊಡುವುದಿಲ್ಲ: ಸುಳ್ಳು ಹೇಳುವುದೇ ಶಾಸಕ ನಾಡಗೌಡರ ಕಾಯಕ-ನಡಹಳ್ಳಿ
ಮುದ್ದೇಬಿಹಾಳ : ಇವತ್ತಿನ ಶಾಸಕ ಅಪ್ಪಾಜಿ ನಾಡಗೌಡರಿಗೆ ಸರಕಾರದಿಂದ ಹಣ ತರುವ ಯೋಗ್ಯತೆ ಇಲ್ಲ.
ನ.17 ರಂದು ಆಶಾ ಕಾರ್ಯಕರ್ತೆಯರಿಗೆ ನವಜಾತ ಶಿಶುಗಳ ಆರೈಕೆ ಉಚಿತ ತರಬೇತಿ ಶಿಬಿರ
ಮುದ್ದೇಬಿಹಾಳ : ತಾಲ್ಲೂಕಿನ ಮದರಿ ಗ್ರಾಮದ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್
ಕೊಣ್ಣೂರು ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ
ಮುದ್ದೇಬಿಹಾಳ : ತಾಲ್ಲೂಕಿನ ಕೊಣ್ಣೂರು ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಗೆ
ಕಬ್ಬು ತುಂಬಿದ್ದ ಟ್ರ್ಯಾಲಿ ಪಲ್ಟಿ: ಕಾರ್ಖಾನೆ ಕಾರ್ಮಿಕ ದುರ್ಮರಣ
ಮುದ್ದೇಬಿಹಾಳ : ಕಬ್ಬನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್-ಟ್ರ್ಯಾಲಿ ಕಬ್ಬಿನ ರಾಶಿ ಸಮೇತ ಮೇಲೆ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಗರಸಂಗಿ ಕ್ರಾಸ್ ಬಳಿ ನ.12ರ ಮಂಗಳವಾರ ಸಂಜೆ ಸುಮಾರು 7 ಗಂಟೆಗೆ ನಡೆದಿದೆ.ತಾಲ್ಲೂಕಿನ ಹಿರೇಮುರಾಳ ಗ್ರಾಮದ ಸಂಗಮೇಶ ಚಲವಾದಿ (35) ಮೃತಪಟ್ಟ ವ್ಯಕ್ತಿ.ಸಂಗಮೇಶ, ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ತನ್ನ ಕೆಲಸ ಮುಗಿದ ನಂತರ ಬೈಕ್ ನಲ್ಲಿ ತನ್ನೂರಿಗೆ ಹೊರಟಿದ್ದರು. ಎದುರಿಗೆ ಕಬ್ಬು
ಮುದ್ದೇಬಿಹಾಳ : ಕುಂಟೋಜಿ ಗ್ರಾ.ಪಂ ಉಪ ಚುನಾವಣೆಈ ಕಾರಣಕ್ಕೆ ಅಭ್ಯರ್ಥಿ ನಾಮಪತ್ರ ರಿಜೆಕ್ಟ್…!
ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ಆಯ್ಕೆ ಬಯಸಿ ಸಲ್ಲಿಕೆಯಾಗಿದ್ದ ಎರಡು ನಾಮಪತ್ರಗಳಲ್ಲಿ ಒಂದು ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿಯಲ್ಲಿ ಮದ್ಯಾಹ್ನ 1 ಗಂಟೆಯಿಂದ ನಾಮಪತ್ರಗಳ ಪರಿಶೀಲನೆ ಕಾರ್ಯವನ್ನು ನಾಮಪತ್ರ ಸಲ್ಲಿಸಿದ್ದ ಶಾಂತಾ ಮದರಿ ಹಾಗೂ ಕವಿತಾ ಶಿರಗುಪ್ಪಿ ಅವರ ಸಮ್ಮುಖದಲ್ಲಿ ಚುನಾವಣಾಧಿಕಾರಿಗಳು ನಡೆಸಿದರು.ಈ ವೇಳೆ ಕವಿತಾ ಶಿರಗುಪ್ಪಿ ಅವರು ಸಲ್ಲಿಸಿದ್ದ ನಾಮಪತ್ರದ ಜೊತೆಗೆ ಮೀಸಲಾತಿ