ಸೈನ್ಯಕ್ಕೆ ಮಹಿಳೆಯರ ಸೇರ್ಪಡೆ : ಸಮಾಜದಲ್ಲಿ ಸಮಾನತೆಯ ಪ್ರತೀಕ-ಅಮರೇಶ್ವರ ದೇವರು

ಸೈನ್ಯಕ್ಕೆ ಮಹಿಳೆಯರ ಸೇರ್ಪಡೆ : ಸಮಾಜದಲ್ಲಿ ಸಮಾನತೆಯ ಪ್ರತೀಕ-ಅಮರೇಶ್ವರ ದೇವರು

ಮುದ್ದೇಬಿಹಾಳ : ಗಡಿಯಲ್ಲಿ ಸೇವೆ ಸಲ್ಲಿಸುವ ಸೇವೆ ಪುರುಷರಿಗಷ್ಟೇ ಸೀಮಿತವಾಗಿದ್ದ ಕಾಲಘಟ್ಟ ಬದಲಾಗಿದ್ದು ಇದೀಗ ಮಹಿಳೆಯರು ದೇಶದ ಗಡಿಯಲ್ಲಿ ನಿಂತು ಹೋರಾಟ ನಡೆಸಲು ಸನ್ನದ್ದರು ಎಂಬುದಕ್ಕೆ ಬಿಎಸ್‌ಎಫ್‌ಗೆ ಆಯ್ಕೆಯಾಗಿರುವ ಸಹೋದರಿ ಆಯೇಷಾ ವಾಲೀಕಾರ ಅವರ ಸಾಧನೆಯೇ ನಿದರ್ಶನ ಎಂದು ಕಿಲ್ಲಾ ಹೊಸಮಠದ ಅಮರೇಶ್ವರ ದೇವರು ಹೇಳಿದರು.

ಬಿ.ಎಸ್.ಎಫ್‌ಗೆ ಆಯ್ಕೆಯಾಗಿರುವ ತಾಲ್ಲೂಕಿನ ಸಿದ್ದಾಪೂರ ಪಿ.ಟಿ ಗ್ರಾಮದ ಆಯೇಷಾ ವಾಲೀಕಾರ ಅವರಿಗೆ ಪಟ್ಟಣದ ಸೈನಿಕ ಮೈದಾನದಲ್ಲಿ ಗುರುವಾರ ಕಾರ್ಗಿಲ್ ವೀರಯೋಧರ ಸ್ಮಾರಕ ಸಮೀತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಗಿಲ್ ವೀರಯೋಧರ ಸ್ಮಾರಕ ಸಮಿತಿ ಹಿರಿಯ ಸದಸ್ಯ ಬಸವರಾಜ ನಂದಿಕೇಶ್ವರಮಠ ಮಾತನಾಡಿ, ಹಿಂದಿನ ಕಾಲದಲ್ಲಿ ಸೇನೆಯಲ್ಲಿ ಮಹಿಳೆಯರಿಗೆ ಆದ್ಯತೆ ಕೊಟ್ಟಿದ್ದು ಝಾನ್ಸಿರಾಣಿ ಲಕ್ಷ್ಮೀಬಾಯಿ. ಅದೇ ರೀತಿ ಮುದ್ದೇಬಿಹಾಳ ತಾಲ್ಲೂಕಿನ ಪ್ರಥಮ ಮಹಿಳೆಯಾಗಿ ಬಿಎಸ್‌ಎಫ್‌ಗೆ ಸೇರ್ಪಡೆಯಾಗಿರುವ ಆಯೇಷಾ ವಾಲೀಕಾರ ಸಾಧನೆ ನಮಗೆಲ್ಲ ಮಾದರಿಯಾಗಿದೆ.ಕಾರ್ಗಿಲ್ ಸ್ಮಾರಕದ ಮೈದಾನದಲ್ಲಿ ಹುತಾತ್ಮರಾದವರು,ಸೇವೆ ಮುಗಿಸಿಕೊಂಡು ವಾಪಸ್ ಆದವರನ್ನು ಗೌರವಿಸುವ ಸಂಪ್ರದಾಯದ ಜೊತೆಗೆ ಈಗ ಬಿಎಸ್‌ಎಫ್‌ಗೆ ಸೇರ್ಪಡೆಯಾಗಿರುವ ಮಹಿಳೆಯನ್ನು ಗೌರವಿಸುವ ಸಂಪ್ರದಾಯ ಆರಂಭವಾಗಿರುವುದು ಖುಷಿಯ ಸಂಗತಿ ಎಂದರು.

ಎಎಸ್‌ಐ ಕೆ.ಎಸ್.ಅಸ್ಕಿ ಮಾತನಾಡಿ, ನಮ್ಮೂರಿನ ಯುವತಿಯೊಬ್ಬಳು ಇಡೀ ಜಿಲ್ಲೆಯೇ ಮೆಚ್ಚುವ ಸಾಧನೆ ತೋರಿರುವುದು ಖುಷಿಯ ಸಂಗತಿ.ಬಡತನವನ್ನು ಮೆಟ್ಟಿ ನಿಂತು ಸೇನೆಗೆ ಸೇರಿರುವುದು ಸಣ್ಣ ಮಾತಲ್ಲ.ಅವರಿಗೆ ಇಲಾಖೆಯಿಂದ ಅಭಿನಂದಿಸುವೆ ಎಂದರು.

ಬಿಎಸ್‌ಎಫ್‌ಗೆ ಆಯ್ಕೆಯಾಗಿರುವ ಆಯೇಷಾ ವಾಲೀಕಾರ ಮಾತನಾಡಿ, ಈ ಸಾಧನೆ,ಮೆರವಣಿಗೆ ನನ್ನ ತಂದೆ,ತಾಯಿ ಹಾಗೂ ಸಹೋದರನಿಗೆ ಸಲ್ಲಬೇಕು.ಬಡತನಕ್ಕೆ ಈ ಗೌರವ ದೊರೆಯುತ್ತಿದೆ.ಬಡತನ ಇದೆ ಎಂದು ದೊಡ್ಡ ಕನಸು ಕಾಣುವುದನ್ನು ಬಿಡಬೇಡಿ.ಉನ್ನತ ಕನಸುಗಳನ್ನಿಟ್ಟು ಕಷ್ಟಪಟ್ಟು ಓದಿ ನಿಶ್ಚಿತವಾಗಿಯೂ ಗುರಿ ಸಾಧನೆ ಸಾಧ್ಯವಾಗುತ್ತದೆ ಎಂದರು.

ಆಯೇಷಾ ಅವರ ತಂದೆ ಬಂದಗೀಸಾ ವಾಲೀಕಾರ, ತಾಯಿ ಶಾಕೀರಾ ವಾಲೀಕಾರ ಅವರನ್ನು ಸಮೀತಿಯ ಪದಾಧಿಕಾರಿಗಳು ತವರಿನ ಗೌರವದ ಸಂಕೇತವಾಗಿ ಸೀರೆ,ಬಳೆ,ಹೂವು ನೀಡಿ ಸನ್ಮಾನಿಸಿ ಅಭಿನಂದಿಸಿದರು.ನಿವೃತ್ತ ಸೈನಿಕ ಚಿದಾನಂದ ಬಿರಾದಾರ,ಮಾಜಿ ಸೈನಿಕ ಸೋಮಶೇಖರ ಚಿರಲದಿನ್ನಿ,ಸಮೀತಿಯ ಅಧ್ಯಕ್ಷ ಶ್ರೀಕಾಂತ ಹಿರೇಮಠ ಇದ್ದರು.ಚಂದ್ರಶೇಖರ ಕಲಾಲ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ,ಅಮಾನತ ಅಲ್ಪಸಂಖ್ಯಾತರ ಕೋ ಆಪರೇಟಿವ್ ಸೊಸೈಟಿ, ನದಾಫ-ಪಿಂಜಾರ್ ಸೇವಾ

ಸಂಘ,ಗoಗಾಮಾತಾ ಪತ್ತಿನ ಸಹಕಾರಿ ಸಂಘ ಹಾಗೂ ಮುಖಂಡರು,ಗಣ್ಯರು ಸನ್ಮಾನಿಸಲಾಯಿತು.
ಕಾರ್ಗಿಲ್ ವೀರಯೋಧರ ಸ್ಮಾರಕ ಸಮೀತಿ ಪದಾಧಿಕಾರಿಗಳು, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಇದ್ದರು.
ಪಟ್ಟಣದ ಬಜಾರ್ ಹನುಮಾನ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ತೆರೆದ ಜೀಪಿನಲ್ಲಿ ಆಯೇಷಾ ವಾಲೀಕಾರ ಅವರನ್ನು ಮೆರವಣಿಗೆ ನಡೆಸಲಾಯಿತು.

Latest News

ವಿದ್ಯಾಸ್ಪೂರ್ತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ:      ಸ್ವಾತಂತ್ರ್ಯದ ಉಳಿವಿಗೆ ಶ್ರಮಿಸೋಣ-ರಾಜೇಶ್ವರಿ ಪಾಟೀಲ್

ವಿದ್ಯಾಸ್ಪೂರ್ತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ: ಸ್ವಾತಂತ್ರ್ಯದ ಉಳಿವಿಗೆ ಶ್ರಮಿಸೋಣ-ರಾಜೇಶ್ವರಿ ಪಾಟೀಲ್

ಮುದ್ದೇಬಿಹಾಳ : ಲಕ್ಷಾಂತರ ಜನ ಹಿರಿಯರು,ಯುವಕರ ತ್ಯಾಗ,ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು ಅದನ್ನು

ತಂಗಡಗಿಯಲ್ಲಿ ಧ್ವಜಾರೋಹಣ: ಪೊಲೀಸರಿಗೆ ಸನ್ಮಾನ

ತಂಗಡಗಿಯಲ್ಲಿ ಧ್ವಜಾರೋಹಣ: ಪೊಲೀಸರಿಗೆ ಸನ್ಮಾನ

ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಗ್ರಾಮದ ಸ್ನೇಹಸಿರಿ ಸೇವಾ ಸಂಘದಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಮುದ್ದೇಬಿಹಾಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ; ಬರಗಾಲದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ; ಬರಗಾಲದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಈ ವರ್ಷ ಹಿಂದೆoದಿಗಿoತಲೂ ಅಧಿಕ ಪ್ರಮಾಣದಲ್ಲಿ ಬರಗಾಲ ಕಾಡುತ್ತಿದೆ.ಆದರೆ ಕೆಲವರು ಬರಗಾಲವನ್ನು

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ;              ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ; ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಮುದ್ದೇಬಿಹಾಳ / ನಾಲತವಾಡ : ಗ್ರಾಹಕರ ಉತ್ತಮ ಸಹಕಾರ ಹಾಗೂ ಶೇರುದಾರರ ಬೆಂಬಲ,ಆಡಳಿತ ಮಂಡಳಿಯ

ಆ.11,12 ರಂದು ಶಾಸಕ ನಾಡಗೌಡರಿಂದ ಬರ ಪರಿಸ್ಥಿತಿ ವೀಕ್ಷಣೆ

ಆ.11,12 ರಂದು ಶಾಸಕ ನಾಡಗೌಡರಿಂದ ಬರ ಪರಿಸ್ಥಿತಿ ವೀಕ್ಷಣೆ

ಮುದ್ದೇಬಿಹಾಳ : ಕೆಎಸ್‌ಡಿಎಲ್ ಅಧ್ಯಕ್ಷ,ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಬರ ಪರಿಸ್ಥಿತಿ ಕುರಿತು ಆ.11,12 ರಂದು ಅವಲೋಕನ ನಡೆಸಿ ಬೆಳೆ ವೀಕ್ಷಣೆ ಮಾಡಲಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ. ಆ.11 ರದು ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬರ ಪರಿಸ್ಥಿತಿ ಕುರಿತು ಚರ್ಚೆ, ಮದ್ಯಾಹ್ನ 2.30ಕ್ಕೆ ಬರಪೀಡಿತ ಪ್ರದೇಶಗಳಾದ ಹರಿಂದ್ರಾಳ,ಹಡಲಗೇರಿ ಗ್ರಾಮಗಳಲ್ಲಿ ಹತ್ತಿ,ತೊಗರಿ,ಸಜ್ಜೆ ಬೆಳೆಗಳ ವೀಕ್ಷಣೆ,ಸಂಜೆ 4ಕ್ಕೆ ಢವಳಗಿ ಹೋಬಳಿಯ ಹತ್ತಿ ತೊಗರಿ ಬೆಳೆಗಳ ವೀಕ್ಷಣೆ

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಮುದ್ದೇಬಿಹಾಳ : ಹಣ, ಆಸ್ತಿ, ಅಂತಸ್ತು, ಐಶ್ವರ್ಯ, ಉದ್ಯೋಗ ಮುಂತಾದವುಗಳ ಕೊರತೆಯಿಂದ ಮನುಷ್ಯ ಬಡವನಾಗುವುದಿಲ್ಲ ಬದಲಿಗೆ ಪರಸ್ಪರ ಮಾತನಾಡದಿರುವುದರಿಂದ, ಮುಖ ಗಂಟು ಹಾಕಿರುವುದರಿಂದ ಬಡವನಾಗಿ ಕಾಣುತ್ತಾನೆ. ಮನುಷ್ಯ ಬದುಕಿನಲ್ಲಿ ನೂರು ಕಾಲ ಬದುಕಿರುವಷ್ಟು ನಗು ಸಂಗ್ರಹಿಸಬೇಕು. ಗೆಳೆಯರ ನಡುವೆ ಸರಿ, ತಪ್ಪುಗಳ ಆರೋಗ್ಯಕರ ಚರ್ಚೆ ನಡೆಯಬೇಕು ಎಂದು ಹಿರೂರು ಜಯಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಹಡಲಗೇರಿ ರಸ್ತೆ ಪಕ್ಕದಲ್ಲಿರುವ ಶ್ರೀ ಪದ್ಮಾವತಿ ದೇವಸ್ಥಾನದ ಸಮುದಾಯ ಭವನದಲ್ಲಿ ವಿಬಿಸಿ ಪ್ರೌಢಶಾಲೆಯ 1985-86ನೇ