ಹಾವು ಕಚ್ಚಿ ಮೃತಪಟ್ಟ ರೈತನ ಕುಟುಂಬಕ್ಕೆ ಶಾಸಕ ನಾಡಗೌಡ ಸಾಂತ್ವನ

ಹಾವು ಕಚ್ಚಿ ಮೃತಪಟ್ಟ ರೈತನ ಕುಟುಂಬಕ್ಕೆ ಶಾಸಕ ನಾಡಗೌಡ ಸಾಂತ್ವನ

ಮುದ್ದೇಬಿಹಾಳ : ಸಮೀಪದ ಬಿಜ್ಜೂರ ಗ್ರಾಮದಲ್ಲಿ ಫೆ.1 ರಂದು ಕೃಷಿ ಚಟುವಟಿಕೆ ಕೈಗೊಂಡಿದ್ದ ಸಂದರ್ಭದಲ್ಲಿ ಹಾವು ಕಚ್ಚಿ ಮೃತಪಟ್ಟ ರೈತ ಗಂಗಪ್ಪ ಗುರಿಕಾರ ಅವರ ಕುಟುಂಬಕ್ಕೆ ಶಾಸಕ ಸಿ.ಎಸ್.ನಾಡಗೌಡ ಗುರುವಾರ ರೈತನ ಮನೆಗೆ ತೆರಳಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ದೌರ್ಜನ್ಯ ತಡೆ ಸಮೀತಿ ನಾಮನಿರ್ದೇಶಿತ ಸದಸ್ಯ ಮಲ್ಲು ತಳವಾರ, ವಿಪತ್ತು ನಿರ್ವಹಣಾ ಕಾಯ್ದೆ 12ರ ಪ್ರಕಾರ, ವಿಪತ್ತುಗಳಿಂದ ಉಂಟಾಗುವ ಮಾನವ ನಷ್ಟಕ್ಕೆ ಪರಿಹಾರ ನೀಡುವುದು ರಾಜ್ಯದ ಕಾನೂನುಬದ್ಧ ಕರ್ತವ್ಯವಾಗಿದ್ದು ಎಸ್.ಡಿ.ಆರ್.ಎಫ್ ನಿಧಿಯಡಿ ಮೃತ ರೈತನ ಕುಟುಂಬಕ್ಕೆ ನಾಲ್ಕು ಲಕ್ಷ ರೂ.ಪರಿಹಾರ ನೀಡಬೇಕು.ಸದರಿ ರೈತನು ಅವರ ಕುಟುಂಬಕ್ಕೆ ಏಕೈಕ ಜೀವನಾಧಾರವಾಗಿದ್ದು ಅವರ ಅಕಾಲಿಕ ನಿಧನದಿಂದ ಪತ್ನಿ ಹಾಗೂ ಅವಲಂಬಿತ ಕುಟುಂಬದ ಸದಸ್ಯರು ತೀವ್ರ ಆರ್ಥಿಕ, ಸಾಮಾಜಿಕ ಮತ್ತು ಮಾನಸಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.ರಾಜ್ಯ ಸರ್ಕಾರದಿಂದ ಸಹಾನುಭೂತಿಯಿಂದ ಪರಿಹಾರ ಮಂಜೂರಿ ಮಾಡಲು ವಿನಂತಿಸಿದರು.

ಇದಕ್ಕೆ ಸ್ಪಂದಿಸಿದ ಶಾಸಕ ನಾಡಗೌಡರು, ಸಂಬAಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಮೃತ ರೈತನ ಕುಟುಂಬದವರಿಗೆ ಸಾಧ್ಯವಾಷ್ಟು ಹೆಚ್ಚಿನ ಪರಿಹಾರ ಒದಗಿಸಿಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ, ನಾಲತವಾಡ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅಶೋಕ ಕಾಂಬಳೆ, ಗ್ರಾಮದ ಮುಖಂಡರಾದ ಬಸಪ್ಪ ಕಛೇರಿ, ಯಮನಪ್ಪ ಕಮರಿ, ಶರಣಪ್ಪ ನಂದಿಹಾಳ,ಸೋಮಪ್ಪ ಚಲವಾದಿ,ಹುಲಗಪ್ಪ ಕಮರಿ,ಗದೆಪ್ಪ ಗುರಿಕಾರ, ವಿರೇಶ ಬಡಿಗೇರ,ಗಂಗಪ್ಪ ವಾಲಿಕಾರ,ಶರಣಪ್ಪ ಕಂಬಾರ, ತಾಲ್ಲೂಕು, ೆ ಇದ್ದರು.

Latest News

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ : ರಾಜ್ಯಾದ್ಯಂತ ಸೋಮವಾರದಿಂದ ಶಾಲೆಗಳು ಆರಂಭಗೊOಡಿದ್ದು ತಾಲ್ಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ಪಬ್ಲಿಕ್

ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ:             ಅಸಮರ್ಪಕ ವಿದ್ಯುತ್ ಪೂರೈಕೆ,ಟಿಸಿ ಸಮಸ್ಯೆಗೆ ರೈತರ ಆಕ್ರೋಶ

ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ: ಅಸಮರ್ಪಕ ವಿದ್ಯುತ್ ಪೂರೈಕೆ,ಟಿಸಿ ಸಮಸ್ಯೆಗೆ ರೈತರ ಆಕ್ರೋಶ

ಮುದ್ದೇಬಿಹಾಳ : ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿನಿoದ ಅಮಸರ್ಪಕ ವಿದ್ಯುತ್ ಪೂರೈಕೆ,ರೈತರಿಗೆ

ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ: ಜೂ.8 ರಂದು ಆಲಮಟ್ಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ: ಜೂ.8 ರಂದು ಆಲಮಟ್ಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಸಂಬoಧಿಸಿದoತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು

ಎಲ್ಲೆಡೆ ಶಾಲಾ ಆರಂಭೋತ್ಸವ:                                            ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಎಲ್ಲೆಡೆ ಶಾಲಾ ಆರಂಭೋತ್ಸವ: ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಮುದ್ದೇಬಿಹಾಳ : ಬೇಸಿಗೆ ರಜೆ ಕಳೆದು ಶಾಲಾ ಮಕ್ಕಳು ಇನ್ನು ಮುಂದೆ ಶೈಕ್ಷಣಿಕ ಚಟುವಟಿಕೆಗಳಲ್ಲಿ

ಮುದ್ದೇಬಿಹಾಳ : ಪರಿಸರ ರಕ್ಷಕ” ಪ್ರಶಸ್ತಿ ಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಪರಿಸರ ರಕ್ಷಕ” ಪ್ರಶಸ್ತಿ ಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಪಟ್ಟಣದ ಹಸಿರು ತೋರಣ ಗೆಳೆಯರ ಬಳಗ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ನೀಡಲಾಗುವ "ಪರಿಸರ ರಕ್ಷಕ" ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಗಿಡಗಳನ್ನು ನೆಟ್ಟು ಬೆಳೆಸಿರುವ, ಸಂರಕ್ಷಿಸಿರುವ ವ್ಯಕ್ತಿಗಳಿಗೆ, ಶಾಲೆ ಕಾಲೇಜುಗಳ ಶಿಕ್ಷಕರು, ಸಂಘ, ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮುದ್ದೇಬಿಹಾಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಪರಿಸರ ರಕ್ಷಣೆ ಮಾಡಿರುವ ಅರ್ಹರು ತಮ್ಮ ವಿವರಗಳುಳ್ಳ ಅರ್ಜಿಗಳನ್ನು ಜೂನ್ 3 ರೊಳಗೆ, ಅಧ್ಯಕ್ಷರು,

ಮುದ್ದೇಬಿಹಾಳ : ಮೇ.24 ರಂದು ಕ್ರಿಕೆಟ್ ಪಂದ್ಯಾವಳಿ ಫೈನಲ್

ಮುದ್ದೇಬಿಹಾಳ : ಮೇ.24 ರಂದು ಕ್ರಿಕೆಟ್ ಪಂದ್ಯಾವಳಿ ಫೈನಲ್

ಮುದ್ದೇಬಿಹಾಳ : ಎಂ.ಬಿ.ಎಲ್ ಗ್ರೂಪನಿಂದ ಪಟ್ಟಣದಲ್ಲಿ ಮೂರು ವಾರಗಳಿಂದ ಜರುಗುತ್ತಿದ್ದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್‌ನ ಫೈನಲ್ ಪಂದ್ಯಾವಳಿ ಮೇ.24 ರಂದು ಜರುಗಲಿದೆ ಎಂದು ಆಯೋಜಕರ ಬಳಗ ತಿಳಿಸಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಫೈನಲ್ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದ ಸಂಘಟಕರಲ್ಲೊಬ್ಬರಾದ ಕಾಮರಾಜ ಬಿರಾದಾರ, ಈಗಾಗಲೇ ನಿಡಗುಂದಿ ತಂಡವನ್ನು ಸೋಲಿಸಿ ಆಲಮಟ್ಟಿ ತಂಡ ಫೈನಲ್ ತಲುಪಿದ್ದು ಮೇ.24 ರಂದು ಜರುಗಲಿರುವ ಸೆಮಿಫೈನಲ್ ಪಂದ್ಯದಲ್ಲಿ ಮುದ್ದೇಬಿಹಾಳ ಹಾಗೂ