Accident news Accident board on road

Accident: ಅಪಘಾತದಲ್ಲಿ ನಾಲ್ವರ ದುರ್ಮರಣ

Accident: ಅಪಘಾತದಲ್ಲಿ ನಾಲ್ವರ ದುರ್ಮರಣ

ಕಲಬುರಗಿ : ಮಹಿಂದ್ರಾ ಪಿಕಪ್ ಗೂಡ್ಸ್ – ಕಾರು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಬೆಳಗ್ಗೆ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಕ್ರಾಸ್ ಬಳಿ ಸಂಭವಿಸಿದೆ.

ಹೈದರಾಬಾದ್ ಮೂಲದ ಭಾರ್ಗವ್ ಕೃಷ್ಣ (55), ಅವರ ಪತ್ನಿ ಸಂಗೀತ (45), ಪುತ್ರ ಉತ್ತಮ್ ರಾಘವನ್ (28) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕಾರು ಚಾಲಕನ ಗುರುತು ಪತ್ತೆಯಾಗಿಲ್ಲ.

ಕಾರಿನಲ್ಲಿದ್ದವರು ಗಾಣಗಾಪುರ್ ದತ್ತನ ದರ್ಶನಕ್ಕೆ ತೆರಳುತ್ತಿದ್ದರು ಎಂದು ವರದಿಯಾಗಿದೆ.

ಸ್ಥಳಕ್ಕೆ ಆಗಮಿಸಿದ ಸಿಪಿಐ ಶಿವಶಂಕರ್ ಸಾಹು, ಪಿಎಸ್ಐ ಆಶಾ ರಾಥೋಡ್, ಸಿಬ್ಬಂದಿ ಕಿಶನ್, ಕುಪೇಂದ್ರ ಮತ್ತಿತರರು ಸೇರಿ ಮೃತರನ್ನು ಕಮಲಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದಾರೆ.

Latest News

ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಸಿದ್ದಪ್ಪ ಪೂಜಾರಿ ಆಯ್ಕೆ

ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಸಿದ್ದಪ್ಪ ಪೂಜಾರಿ ಆಯ್ಕೆ

ಮುದ್ದೇಬಿಹಾಳ : ನಗರದ ಎಂಜಿವಿಸಿ ಕಾಲೇಜಿನ ವಿಶೇಷಚೇತನ ವಿದ್ಯಾರ್ಥಿ ವಿನಾಯಕ ಸಿದ್ದಪ್ಪ ಪೂಜಾರಿರಾಷ್ಟ್ರೀಯ ಹಿರಿಯ

ನೇತ್ರದಾನದ ಮೂಲಕ ಅಂಧರ ಬಾಳಿಗೆ ಬೆಳಕಾದ ಆಕಾಶ್

ನೇತ್ರದಾನದ ಮೂಲಕ ಅಂಧರ ಬಾಳಿಗೆ ಬೆಳಕಾದ ಆಕಾಶ್

ಮುದ್ದೇಬಿಹಾಳ : ರಸ್ತೆ ಅಪಘಾತದಲ್ಲಿ ಮೃತಪಟ್ಟ ಹತ್ತು ವರ್ಷದ ಬಾಲಕನೋರ್ವನ ಕಣ್ಣುಗಳನ್ನು ದಾನ ಮಾಡುವ

ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಸಿಂಡಿಕೇಟ್‌ಗೆ ಹೊಸಮನಿ ನಾಮನಿರ್ದೇಶನ

ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಸಿಂಡಿಕೇಟ್‌ಗೆ ಹೊಸಮನಿ ನಾಮನಿರ್ದೇಶನ

ಮುದ್ದೇಬಿಹಾಳ : ಮೂಲತಃ ಮುದ್ದೇಬಿಹಾಳ ತಾಲ್ಲೂಕು ಕುಂಟೋಜಿ ಗ್ರಾಮದ ನಿವಾಸಿ, ಬಸವನ ಬಾಗೇವಾಡಿ ತಾಲೂಕಿನ

ಆಲಿಕಲ್ಲು ಮಳೆಯಿಂದ ಬೆಳೆ‌ ಹಾನಿ:                                            3 ದಿನದೊಳಗೆ‌ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ‌

ಆಲಿಕಲ್ಲು ಮಳೆಯಿಂದ ಬೆಳೆ‌ ಹಾನಿ: 3 ದಿನದೊಳಗೆ‌ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ‌

ವಿಜಯಪುರ : ಇತ್ತೀಚಿಗೆ ಬೀಸಿದ‌‌ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ಕೃಷಿ, ತೋಟಗಾರಿಕಾ ಬೆಳೆ

ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ತಮಗೆ ಸಾಷ್ಟಾಂಗ ಹಾಕಿರುವುದಾಗಿ ಸುಳ್ಳು ಹೇಳಿಕೆ ಕೊಡುವುದನ್ನು ಮೊದಲು ಶಾಸಕ ನಾಡಗೌಡರು ನಿಲ್ಲಿಸಬೇಕು.ಹಾಗೊಂದು ವೇಳೆ ಸಾಕ್ಷಿ ಏನಾದರೂ ಇದ್ದರೆ ನನ್ನ ತಲೆ ನಾನೇ ತಗೆದುಕೊಳ್ಳಲು ಸಿದ್ದನಿದ್ದೇನೆ ಎಂದು ಮಾಜಿ ಶಾಸಕ,ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ದಾಸೋಹ ನಿಲಯದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಆ ಅಯೋಗ್ಯನ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ.ಅಷ್ಟೇ ಅಲ್ಲದೇ ಕಾಂಗ್ರೆಸ್,

ತಂಗಡಗಿಯಲ್ಲಿ 26 ಜೋಡಿ ನವಜೀವನಕ್ಕೆ ಪದಾರ್ಪಣೆ

ತಂಗಡಗಿಯಲ್ಲಿ 26 ಜೋಡಿ ನವಜೀವನಕ್ಕೆ ಪದಾರ್ಪಣೆ

ಮುದ್ದೇಬಿಹಾಳ : ಇಂದಿನ ರಾಜಕಾರಣಿಗಳು ತಮ್ಮ ಮಕ್ಕಳ ಮದುವೆಗಳನ್ನು ದುಂದುವೆಚ್ಚದಲ್ಲಿ ಮಾಡುವಬದಲು ಅದೇ ಖರ್ಚಿನಲ್ಲಿ ನೂರಾರು ಬಡವರ ಮಕ್ಕಳ ಮದುವೆಗಳನ್ನು ಮಾಡಿಕೊಟ್ಟರೆ ಸಮಾಜಕ್ಕೆ ಮಾದರಿಯಾಗಿರುತ್ತಾರೆ.ರಾಜಕಾರಣಿಗಳ ಬುದ್ಧಿ ಬದಲಾಗಬೇಕಿದೆ ಎಂದು ಬಸವನ ಬಾಗೇವಾಡಿ ಶಿವಪ್ರಕಾಶ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಶುಕ್ರವಾರ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಬ್ಬ ರಾಜಕಾರಣಿಯ ಮಗನ ಮದುವೆಯಲ್ಲಿ ಮಾಡುವ ಖರ್ಚು 500 ಮದುವೆಗಳನ್ನು ಮಾಡಿಕೊಡಬಹುದಾಗಿದೆ.ಮಠಗಳಲ್ಲಿ