ಅಪ್ರಾಪ್ತೆಗೆ ತಾಳಿಕಟ್ಟಿದ ಆರೋಪಿ ಬಂಧನ: ವಸತಿ ಶಾಲೆ ವಾರ್ಡನ್ ಅಮಾನತು

ಅಪ್ರಾಪ್ತೆಗೆ ತಾಳಿಕಟ್ಟಿದ ಆರೋಪಿ ಬಂಧನ: ವಸತಿ ಶಾಲೆ ವಾರ್ಡನ್ ಅಮಾನತು


ಮುದ್ದೇಬಿಹಾಳ : ವಸತಿ ನಿಲಯದ ವಿದ್ಯಾರ್ಥಿನಿಗೆ ತಾಳಿ ಕಟ್ಟಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬಂಧನದ ಭೀತಿಯಲ್ಲಿ ಪೆಟ್ರೋಲ್ ಕುಡಿದು ಅಸ್ವಸ್ಥಗೊಂಡು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಆರೋಪಿ ಮೌನೇಶ ಮಾದರ ಗುಣಮುಖನಾಗಿದ್ದು, ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಸೇವಾ ನ್ಯೂನತೆ ಆಪಾದನೆ ಮೇರೆಗೆ ಘಾಳಪೂಜಿ ಸರ್ಕಾರಿ ವಸತಿ ನಿಲಯದ ವಾರ್ಡನ್ ಶಿವಲಿಂಗಪ್ಪ ಕಾಂಬಳೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಹಾಗೂ ವಸತಿ ಶಾಲೆಯ ಪ್ರಾಚಾರ್ಯರಿಗೂ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪುಂಡಲೀಕ ಮಾನವರ ತಿಳಿಸಿದ್ದಾರೆ.

ಮತ್ತೆ ಇಬ್ಬರ ಬಂಧನ:
ನಾಲತವಾಡ ಪಟ್ಟಣದಲ್ಲಿ ಚುಡಾಯಿಸಿ, ಕಿರುಕುಳ ನೀಡಿದ್ದ ಯುವಕರ ವಿರುದ್ಧ ಪೋಕ್ಸೊ ದೂರು ದಾಖಲಿಸಿ, ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಮಸಬಿನಾಳ ಮತ್ತು ಸಂಗಮೇಶ ಮಾದರ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ ತಿಳಿಸಿದ್ದಾರೆ.

ಅಪ್ರಾಪ್ತೆಗೆ ತಾಳಿಕಟ್ಟಿ ಬಂಧಿತನಾಗಿರುವ ಮೌನೇಶ ಮಾದರ ನಾಲತವಾಡದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Latest News

ಸೌಹಾರ್ದತೆ ಮೆರೆದ ಮನಿಯಾರ್ :                                          ಹಬ್ಬದ ಸಮಯಗಳಲ್ಲಿ ಬಡವರಿಗೆ ನೆರವಾಗಿ-ಸಿಪಿಐ ಫಸಿವುದ್ದೀನ್

ಸೌಹಾರ್ದತೆ ಮೆರೆದ ಮನಿಯಾರ್ : ಹಬ್ಬದ ಸಮಯಗಳಲ್ಲಿ ಬಡವರಿಗೆ ನೆರವಾಗಿ-ಸಿಪಿಐ ಫಸಿವುದ್ದೀನ್

ಮುದ್ದೇಬಿಹಾಳ : ಸಮಾಜದಲ್ಲಿ ಆರ್ಥಿಕವಾಗಿ ಸಬಲತೆ ಸಾಧಿಸಿದವರು ಬಡವರು,ನಿರ್ಗತಿಕರಿಗೆ ಹಬ್ಬದ ಸಮಯಗಳಲ್ಲಿ ನೆರವಾಗುವ ಕಾರ್ಯ

ಮುದ್ದೇಬಿಹಾಳ : ಅಬ್ಬರದ ಆಲಿಕಲ್ಲು ಮಳೆಗೆ ನೆಲಕಚ್ಚಿದ ದ್ರಾಕ್ಷಿ,ಚಿಕ್ಕು,ತೆಂಗಿನ ಗಿಡ

ಮುದ್ದೇಬಿಹಾಳ : ಅಬ್ಬರದ ಆಲಿಕಲ್ಲು ಮಳೆಗೆ ನೆಲಕಚ್ಚಿದ ದ್ರಾಕ್ಷಿ,ಚಿಕ್ಕು,ತೆಂಗಿನ ಗಿಡ

ಮುದ್ದೇಬಿಹಾಳ : ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಮಂಗಳವಾರ ಕೆಲಕಾಲ ಸುರಿದ ಭಾರೀ

ಗ್ಯಾಸ್ ಸಿಗುತ್ತಿಲ್ಲವೇ ? ಈ ಹೆಲ್ಪಲೈನ್‌ಗೆ ಕರೆ ಮಾಡಿ…

ಗ್ಯಾಸ್ ಸಿಗುತ್ತಿಲ್ಲವೇ ? ಈ ಹೆಲ್ಪಲೈನ್‌ಗೆ ಕರೆ ಮಾಡಿ…

ಮುದ್ದೇಬಿಹಾಳ : ಕೊಲ್ಲಿ ರಾಷ್ಟ್ರಗಳ ಮಧ್ಯೆ ನಡೆದಿರುವ ಯುದ್ದದ ಸಂಘರ್ಷದಿAದ ತೈಲೋತ್ಪನ್ನಗಳ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದು

ಅಸ್ಕಿ ಫೌಂಡೇಶನ್ ನೇತೃತ್ವ :                                            ಮಾ.17 ರಂದು ಬಾವೂರನಲ್ಲಿ ಸೌಹಾರ್ದ ಇಫ್ತಾರಕೂಟ

ಅಸ್ಕಿ ಫೌಂಡೇಶನ್ ನೇತೃತ್ವ : ಮಾ.17 ರಂದು ಬಾವೂರನಲ್ಲಿ ಸೌಹಾರ್ದ ಇಫ್ತಾರಕೂಟ

ತಾಳಿಕೋಟಿ : ರಂಜಾನ್ ಹಬ್ಬದ ಪ್ರಯುಕ್ತ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ತಾಲ್ಲೂಕಿನ ಬಾವೂರ ಗ್ರಾಮದಲ್ಲಿ

ಮಾ.15 ರಂದು ಕಾಶಿನಕುಂಟಿಯಲ್ಲಿ ಇಫ್ತಾರಕೂಟ

ಮಾ.15 ರಂದು ಕಾಶಿನಕುಂಟಿಯಲ್ಲಿ ಇಫ್ತಾರಕೂಟ

ಮುದ್ದೇಬಿಹಾಳ : ರಂಜಾನ್ ಹಬ್ಬದ ನಿಮಿತ್ಯ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಮಾ.15 ರಂದು ಸಂಜೆ 5.30 ಕ್ಕೆ ನಿಡಗುಂದಿ ತಾಲ್ಲೂಕು ಕಾಶಿನಕುಂಟಿ ಗ್ರಾಮದಲ್ಲಿ ಇಫ್ತಾರಕೂಟ ಹಮ್ಮಿಕೊಂಡಿದೆ. ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಈ ಬಾರಿ ಎಂಟು ಕಡೆಗಳಲ್ಲಿ ಫೌಂಡೇಶನ್ ವತಿಯಿಂದ ಇಫ್ತಾರಕೂಟ ಆಯೋಜಿಸಲಾಗಿದೆ. ಇಂದು ಕಾಶಿನಕುಂಟಿ ಗ್ರಾಮದಲ್ಲಿ ನಡೆಯಲಿರುವ ಇಫ್ತಾರಕೂಟ ಕಾರ್ಯಕ್ರಮದಲ್ಲಿ ಅಸ್ಕಿ ಫೌಂಡೇಶನ್ ಅಧ್ಯಕ್ಷರಾದ ಸಿ.ಬಿ.ಅಸ್ಕಿ ಅವರು ಪಾಲ್ಗೊಳ್ಳಲಿದ್ದಾರೆ.ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಆಗಮಿಸಿ ಇಫ್ತಾರಕೂಟದಲ್ಲಿ ಪಾಲ್ಗೊಳ್ಳುವಂತೆ ಫೌಂಡೇಶನ್ ಸಾರ್ವಜನಿಕ ಸಂಪರ್ಕಾಧಿಕಾರಿ

ಮುದ್ದೇಬಿಹಾಳ : ಬಸ್ ನಿಲ್ದಾಣದ ಪಕ್ಕದಲ್ಲೇ ಪೊಲೀಸ್ ಠಾಣೆ ಆರಂಭ-ನಾಡಗೌಡ

ಮುದ್ದೇಬಿಹಾಳ : ಬಸ್ ನಿಲ್ದಾಣದ ಪಕ್ಕದಲ್ಲೇ ಪೊಲೀಸ್ ಠಾಣೆ ಆರಂಭ-ನಾಡಗೌಡ

ಮುದ್ದೇಬಿಹಾಳ : ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಹಳೇ ಸಿಪಿಐ ಕ್ವಾಟರ‍್ಸ್ನಲ್ಲಿ ಪೊಲೀಸ್ ಠಾಣೆಯನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಹಳೇ ಸಿಪಿಐ ಕ್ವಾರ್ಟರ್ಸ್ನ ಸ್ಥಳವನ್ನು ಶನಿವಾರ ಪೊಲೀಸ್ ಅಧಿಕಾರಿಗಳು,ನಗರದ ಗಣ್ಯರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸರಕಾರ ಬಜೆಟ್‌ನಲ್ಲಿ ಘೋಷಿಸಿರುವಂತೆ ಗ್ರಾಮೀಣ ಪೊಲೀಸ್ ಠಾಣೆ ಆರಂಭಿಸಲಾಗುವುದು ಎಂದು ತಿಳಿಸಿದೆ.ನಾನು ಯಾವ