
ಕುಕನೂರು: ನಾಡಿನ ಬಡವರ ಬದುಕಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ಸಾಕಷ್ಟು ಕೊಡುಗೆ ನೀಡಿದ್ದು ವಿಶೇಷ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚು ಆದ್ಯತೆ ನೀಡಿದೆ ಎಂದು ಇಟಗಿ ಗ್ರಾಪಂ ಅಧ್ಯಕ್ಷ ರತ್ನಮ್ಮ ಭಜಂತ್ರಿ ಹೇಳಿದರು.

ತಾಲೂಕಿನ ಇಟಗಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆ, ಜ್ಞಾನ ವಿಕಾಸ ಹಮ್ಮಿಕೊಂಡಿದ್ದ ವತಿಯಿಂದ ಹೊಲಿಗೆ ಯಂತ್ರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಅವರ ಆರ್ಥಿಕ ಪ್ರಗತಿಗೆ ಕಾರಣ-ರಾಗಿದ್ದಾರೆ. ಈ ಧರ್ಮಸ್ಥಳ ಸಂಸ್ಥೆಯಿಂದ ಅನೇಕ ರೀತಿಯ ಉಪಯೋಗ ಮಹಿಳೆಯರು ಪಡೆದುಕೊಂಡಿರುವುದು ಸಹಕಾರಿಯಾಗಿದೆ. ಇಂತಹ ಸಂಸ್ಥೆ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ
ಸಂಗತಿಯಾಗಿದೆ ಎಂದರು.
ತಾಲೂಕಾ ಯೋಜನಾಧಿಕಾರಿ ಸತೀಶ್ ಮಾತನಾಡಿ, ಹೊಲಿಗೆ ಯಂತ್ರದ ತರಬೇತಿ ಪಡೆದವರು ಸ್ವ ಉದ್ಯೋಗ ಮೂಲಕ ಬದುಕು ಕಟ್ಟಿಕೊಳ್ಳಬಹುದು, ಸ್ವಾವಲಂಬನೆ ಜೀವನ ನಡೆಸಲು ಮಹಿಳೆಯರಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಅನೇಕ ಕಾರ್ಯಕ್ರಮಗಳನ್ನು ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಜಾರಿಗೆ ತಂದ ಮಹಿಳೆಯರ ಪ್ರಗತಿಗೆ ಕೈಜೋಡಿಸಿದ್ದಾರೆ ಎಂದರು.
ಈ ವೇಳೆ ಒಕ್ಕೂಟದ ಅಧ್ಯ-ಕ್ಷೆ ಜಯಶ್ರೀ ಪಾಟೀಲ್, ಹೊಲಿಗೆ ತರಬೇತಿ ಶಿಕ್ಷಕಿ ನೂರುಜಾನ್, ಸಮನ್ವಯಾಧಿಕಾರಿ ಜ್ಞಾನ ವಿಕಾಸ ಗೀತಾ, ವಲಯದ ಮೇಲ್ವಿಚಾರಕ ರಮೇಶ, ಸೇವಾಪ್ರತಿನಿಧಿಗಳಾದ ರೇಣುಕಾ, ಮೀನಾಕ್ಷಿ ಮತ್ತು ಕೇಂದ್ರದ ಸದಸ್ಯರು ಇದ್ದರು.