25 lakhs of Rs. A chance to win a scholarship Nothing that is given for free has long-lasting value: Biradara

25 ಲಕ್ಷ ರೂ. ಶಿಷ್ಯವೇತನ ಗೆಲ್ಲುವ ಅವಕಾಶಉಚಿತವಾಗಿ ಕೊಡುವ ಯಾವುದರಲ್ಲೂ ಹೆಚ್ಚು ಕಾಲ ಮೌಲ್ಯವಿಲ್ಲ: ಬಿರಾದಾರ

25 ಲಕ್ಷ ರೂ. ಶಿಷ್ಯವೇತನ ಗೆಲ್ಲುವ ಅವಕಾಶಉಚಿತವಾಗಿ ಕೊಡುವ ಯಾವುದರಲ್ಲೂ ಹೆಚ್ಚು ಕಾಲ ಮೌಲ್ಯವಿಲ್ಲ: ಬಿರಾದಾರ

ಮುದ್ದೇಬಿಹಾಳ : ಉಚಿತವಾಗಿ ಕೊಡುವ ಯಾವುದರಲ್ಲೂ ಹೆಚ್ಚಿನ ಕಾಲದವರೆಗೆ ಮೌಲ್ಯ ಇರುವುದಿಲ್ಲ. ಈ ದೆಸೆಯಲ್ಲಿ ನಾವು ನಮ್ಮ ಸಂಸ್ಥೆಯಿಂದ ಯಾವುದನ್ನೂ ಉಚಿತವಾದ ಘೋಷಣೆ ಮಾಡುತ್ತಿಲ್ಲ ಎಂದು
ಬಿಎಎಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಬಿರಾದಾರ ಹೇಳಿದರು.

ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ಹಡಲಗೇರಿ ಸೀಮೆಯ ವ್ಯಾಪ್ತಿಯಲ್ಲಿ ಬರುವ ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನ ಮುಂದುವರೆದಿದೆ. ಮುಂದೊಂದು ದಿನ ತರಗತಿಗಳಲ್ಲಿ ಶಿಕ್ಷಕರಿಲ್ಲದೇ ಪಾಠಗಳನ್ನು ಮಾಡುವ ಪರಿಸ್ಥಿತಿ ಬರುತ್ತದೆ. ಆರ್ಟಿಫಿಷಿಯಲ್ ಇಂಟಿಲಿಜೆನ್ಸ್ ಅಂತಹ ತಂತ್ರಜ್ಞಾನದ ಮಟ್ಟಕ್ಕೆ ನಮ್ಮ ಮಕ್ಕಳನ್ನು ರೂಪಿಸುವ ಅಗತ್ಯತೆ ಇದೆ ಎಂದು ಹೇಳಿದರು.
ನಮ್ಮಲ್ಲಿ ಸಿಬಿಎಸ್‌ಇ ಸಿಲೆಬಸ್ ಮಾದರಿಯ ಶಿಕ್ಷಣ ನೀಡುತ್ತಿದ್ದು 4-8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಟ್ಯಾಲೆಂಟ್ ಅವಾರ್ಡ್ ಎಕ್ಸಾಂ ನಡೆಸುತ್ತಿದ್ದೇವೆ ಎಂದು ತಿಳಿಸಿದರಲ್ಲದೇ ದೂರದ ಜಿಲ್ಲೆಗಳಿಗೆ ನಮ್ಮ ಭಾಗದ ಮಕ್ಕಳನ್ನು ಕಳಿಸದೇ ನಮ್ಮ ಭಾಗದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡುವುದೊಂದೇ ನಮ್ಮ ಗುರಿಯಾಗಿದೆ ಎಂದು ಉತ್ತರಿಸಿದರು.

ಸಂಸ್ಥೆಯ ಆಡಳಿತ ಮಂಡಳಿ ವ್ಯವಸ್ಥಾಪಕ ಪ್ರಭುಗೌಡ ಬಿರಾದಾರ ಮಾತನಾಡಿ, ಏ.6 ರಂದು ಬೆಳಗ್ಗೆ 10ಕ್ಕೆ ಪರೀಕ್ಷೆ ನಡೆಯಲಿದ್ದು 4-8 ನೇ ತರಗತಿ ಪರೀಕ್ಷೆಗೆ ಹಾಜರಾಗಿ ಮೊದಲ 1-10ನೇ ಸ್ಥಾನ ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ.20 ರಷ್ಟು ರಿಯಾಯಿತಿ, 15-25 ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಶೇ.15 ರಷ್ಟು, 25-40 ಸ್ಥಾನ ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ಶೇ.10 ರಷ್ಟು , 40-60 ರಷ್ಟು ರಿಯಾಯಿತಿ ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ಶೇ.5 ರಷ್ಟು ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು. ಪ್ರತಿ ವರ್ಗಕ್ಕೆ ಹತ್ತು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.

ಶಾಲೆಯ ಪ್ರಾಚಾರ್ಯೆ ಸುಪರ್ಣಾ ದಾಸ್ ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ಆಯಾಮದಲ್ಲೂ ಶಿಕ್ಷಣ ನೀಡಲಾಗುತ್ತಿದೆ. ದೈಹಿಕ, ಮನೋವಿಕಾಸ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಸಂಗೀತ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದರು. ಶಿಕ್ಷಕ ಮಿದುನ್ ಇದ್ದರು. ಪರೀಕ್ಷೆಗೆ ಹೆಸರು ನೋಂದಾಯಿಸಲು ಮೊ.9035054452ಗೆ ವಾಟ್ಸಪ್ ಮಾಡಬಹುದು. ಹೆಚ್ಚಿನ ವಿವರಗಳಿಗೆ ಮೊ.9035054453,9035054454 ಸಂಪರ್ಕಿಸಬಹುದಾಗಿದೆ.

Latest News

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ಮುದ್ದೇಬಿಹಾಳ : ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಅರಿತುಕೊಂಡು ಅವುಗಳನ್ನು ಪಾಲಿಸಬೇಕು ಎಂದು ಪಿಎಸ್‌ಐ ಸಂಜಯ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ತಾಲ್ಲೂಕಿನ ಮದರಿ ಗ್ರಾಮದಿಂದ ಘಾಳಪೂಜಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಆಂಧ್ರಪ್ರದೇಶದಿAದ

ಗ್ರಾಪಂ ಮಟ್ಟದ ಸೇವೆ ಅಸ್ತವ್ಯಸ್ತ ಸಾಧ್ಯತೆ:ಗ್ರಾ.ಪಂ ನೌಕರರನ್ನು ಸಮೀಕ್ಷೆಯಿಂದ ಕೈಬಿಡಲು ಒತ್ತಾಯ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ

BREAKING : ಕ್ರಿಸ್ ಮಸ್ ದಿನವೇ ರಾಜ್ಯದಲ್ಲಿ ಘೋರ ದುರಂತ : ಭೀಕರ ಅಪಘಾತದಲ್ಲಿ 17 ಕ್ಕೂ ಹೆಚ್ಚು ಮಂದಿ ದುರ್ಮರಣ

ಚಿತ್ರದುರ್ಗ : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 17 ಕ್ಕೂ ಹೆಚ್ಚು

ಬ್ರಿಲಿಯಂಟ್ ಕಲಾವೈಭವದಲ್ಲಿ ಗಮನ ಸೆಳೆದ ಭವ್ಯ ವೇದಿಕೆ; ಮನಸ್ಸಿಗೆ ಮುದ ನೀಡಿದ ಮಕ್ಕಳ ಸಾಂಸ್ಕೃತಿಕ ವೈಭವ

ಬ್ರಿಲಿಯಂಟ್ ಕಲಾವೈಭವದಲ್ಲಿ ಗಮನ ಸೆಳೆದ ಭವ್ಯ ವೇದಿಕೆ; ಮನಸ್ಸಿಗೆ ಮುದ ನೀಡಿದ ಮಕ್ಕಳ ಸಾಂಸ್ಕೃತಿಕ ವೈಭವ

ತಾಳಿಕೋಟಿ : ತಾಲ್ಲೂಕಿನ ಮೈಲೇಶ್ವರ ಬ್ರಿಲಿಯಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ,ಪ್ರೌಢಶಾಲೆಯಲ್ಲಿ ಶುಕ್ರವಾರದಿಂದ ಶಾಲೆಯಲ್ಲಿ ಎರಡು ದಿನಗಳ ಕಲಾ ವೈಭವ-2026ರ ಮೊದಲ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನ ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಬ್ರಿಲಿಯಂಟ್ ಶಾಲೆಯ 2026 ನೇ ಸಾಲಿನ ಕಲಾ ವೈಭವಕ್ಕೆಂದು ಸಿದ್ಧಪಡಿಸಿದ್ದ ಭವ್ಯ ವೇದಿಕೆ ಸಾರ್ವಜನಿಕರ,ಪಾಲಕರು,ವಿದ್ಯಾರ್ಥಿಗಳು ,ಅಧಿಕಾರಿಗಳ ಗಮನ ಸೆಳೆಯುವಂತಿತ್ತು.ಸಾಮಾನ್ಯವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆ,ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ಸರಕಾರಿ

ಮೈಲೇಶ್ವರದ ಬ್ರಿಲಿಯಂಟ್ ನಲ್ಲಿ ಕಲಾ ವೈಭವ:                  ಮಕ್ಕಳಲ್ಲಿ ಸಂಸ್ಕಾರ ವೃದ್ಧಿಸುವ ಕಾರ್ಯವಾಗಲಿ-ಬಿ.ಎಸ್.ಸಾವಳಗಿ

ಮೈಲೇಶ್ವರದ ಬ್ರಿಲಿಯಂಟ್ ನಲ್ಲಿ ಕಲಾ ವೈಭವ: ಮಕ್ಕಳಲ್ಲಿ ಸಂಸ್ಕಾರ ವೃದ್ಧಿಸುವ ಕಾರ್ಯವಾಗಲಿ-ಬಿ.ಎಸ್.ಸಾವಳಗಿ

ತಾಳಿಕೋಟೆ : ಮಕ್ಕಳಲ್ಲಿ ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಅರಿವು ಮೂಡಿಸುವ ಕಾರ್ಯ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು. ತಾಲ್ಲೂಕಿನ ಮೈಲೇಶ್ವರದ ಮಾರುತಿ ಶಿಕ್ಷಣ ಸಂಸ್ಥೆಯ ಬ್ರಿಲಿಯಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ,ಪ್ರೌಢಶಾಲೆಯಲ್ಲಿ ಶುಕ್ರವಾರದಿಂದ ಆರಂಭಗೊAಡ ಎರಡು ದಿನಗಳ ಬ್ರಿಲಿಯಂಟ್ ಕಲಾ ವೈಭವ-2026 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಬ್ರಿಲಿಯಂಟ್ ಶಾಲೆ ನಮ್ಮ ಶೈಕ್ಷಣಿಕ ವಲಯದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಅತ್ಯುತ್ತಮ ಸಾಧನೆ ತೋರುತ್ತಿದೆ.