Genius Student Award Exam in Nagarabetta : Educational institutions should not be institutions that sell education- Gennur

ನಾಗರಬೆಟ್ಟದಲ್ಲಿ ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಪರೀಕ್ಷೆ : ವಿದ್ಯಾಸಂಸ್ಥೆಗಳು ವಿದ್ಯೆಯನ್ನು ಮಾರುವ ಸಂಸ್ಥೆಗಳಾಗದಿರಲಿ- ಗೆಣ್ಣೂರ

ನಾಗರಬೆಟ್ಟದಲ್ಲಿ ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಪರೀಕ್ಷೆ : ವಿದ್ಯಾಸಂಸ್ಥೆಗಳು ವಿದ್ಯೆಯನ್ನು ಮಾರುವ ಸಂಸ್ಥೆಗಳಾಗದಿರಲಿ- ಗೆಣ್ಣೂರ

ಮುದ್ದೇಬಿಹಾಳ : ವಿದ್ಯಾಸಂಸ್ಥೆಗಳು ವಿದ್ಯೆಯನ್ನು ಮಾರುವ ಸಂಸ್ಥೆಗಳಾರಬಾರದು. ಅದನ್ನು ನೀಡುವ ಸಂಸ್ಥೆಗಳಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ತಾಲ್ಲೂಕು ನಾಗರಬೆಟ್ಟದಲ್ಲಿರುವ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಜೀನಿಯಸ್ ಸ್ಟೂಡೆಂಟ್ ಆವಾರ್ಡ್ ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ
ಯಾವುದೇ ತಂದೆ ತಾಯಿಗಳು ತಮ್ಮ ಮಕ್ಕಳು ದಡ್ಡರಿರುವುದಿಲ್ಲವೆಂಬ ಭಾವನೆ ಇರುತ್ತದೆ. ಮನಸ್ಸು ಸದೃಢವಾಗಿದ್ದವರು ಏನೂ ಬೇಕಾದರೂ ಆಗಬಹುದು. ಅನವಶ್ಯಕ ವಿಚಾರಗಳಿಗೆ ತಲೆಕೆಡಿಸಿಕೊಳ್ಳುತ್ತಾ ಕಾಲಹರಣ ಮಾಡಬಾರದು. ಒಳ್ಳೆಯವರಾಗಲು ಬಹಳ ಸಮಯ ಬೇಕು. ಆದರೆ ಕೆಟ್ಟವರಾಗಲು ಒಂದು ಕ್ಷಣ ಸಾಕು. ಕೆಎಎಸ್, ಐಎಎಸ್ ಅಧಿಕಾರಿಗಳಾಗಿ ಸಮಾಜದ ಸೇವೆ ಸಲ್ಲಿಸಿ. ಸಿನೇಮಾ ನಟ, ನಟಿಯರೆಲ್ಲಾ ನಿಮ್ಮ ಹಿರೋಗಳಲ್ಲ. ತಂದೆ ತಾಯಿ, ಶಿಕ್ಷಕರು ನಿಮ್ಮ ಹಿರೋಗಳು ಎಂದು ಹೇಳಿದರು.

ಮಾದರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಸ್. ಎಲ್. ಪಾಟೀಲ್ ಮಾತನಾಡಿ, ಉನ್ನತ ವಿದ್ಯೆಯನ್ನು ಪಡೆದುಕೊಂಡು ವಿದೇಶದಲ್ಲಿ ಉದ್ಯೋಗದಲ್ಲಿರುವ ಮಕ್ಕಳು ತಮ್ಮ ತಂದೆ ತಾಯಿ ನಿಧನರಾದರೆ ಅವರ ಶವಸಂಸ್ಕಾರಕ್ಕೂ ಬಾರದಷ್ಟು ಸಂವೇದನೆ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳಲ್ಲಿ ಕುಟುಂಬದಲ್ಲಿನ ಭಾವನಾತ್ಮಕ ಸಂಸ್ಕೃತಿಯನ್ನು ಮರುಸ್ಥಾಪಿಸಬೇಕಾದ ಅಗತ್ಯತೆ ಇದೆ ಎಂದರು.

ವಿಜ್ಞಾನಿ ಚಂದ್ರಶೇಖರ ಬಿರಾದಾರ, ಮಕ್ಕಳ ತಜ್ಞ ವೈದ್ಯ ಡಾ.ಪರಶುರಾಮ ವಡ್ಡರ, ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಪಾಟೀಲ, ಬಿಇಒ ಬಿ. ಎಸ್. ಸಾವಳಗಿ, ಫೌಂಡೇಶನ್ ಫಾರ್ ಎಕ್ಸಲೆನ್ಸ್ ಪ್ರತಿನಿಧಿ ಸಂಗಮೇಶ ಹೂಗಾರ ಮಾತನಾಡಿದರು. ಡಾ. ನಿಸರ್ಗ ಎನ್. ಕೆ, ಸಂಸ್ಥೆಯ ನಿರ್ದೇಶಕ ದರ್ಶನಗೌಡ ಪಾಟೀಲ, ನಾಲತವಾಡ ವೀರೇಶ್ವರ ಪಪೂ ಕಾಲೇಜಿನ ಪ್ರಾಚಾರ್ಯ ಡಿ. ಆರ್. ಮಳಖೇಡ, ಇಸ್ಮಾಯಿಲ್ ಮನಿಯಾರ, ರೇವಣಸಿದ್ದ ಚಲವಾದಿ,ರಾಜಶೇಖರ ಹಿರೇಮಠ ಇದ್ದರು.

ಆಕ್ಸಫರ್ಡ್ ಪಾಟೀಲ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಪರೀಕ್ಷೆಯಲ್ಲಿ ಹುಕ್ಕೇರಿ ಎಸ್. ಕೆ. ಪಬ್ಲಿಕ್ ಸ್ಕೂಲ್‌ನ ಅಶ್ವಿನಿ ಬಡಮಲ್ಲಣ್ಣವರ ಜೀನಿಯಸ್ ಸ್ಟೂಡೆಂಟ್ ಆಗಿ ಹೊರ ಹೊಮ್ಮಿದಳು. ವಿಜೇತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು. ಅಲ್ಲದೇ 2024ರಲ್ಲಿ 172 ಮೆಡಿಕಲ್ ಸೀಟು ಪಡೆದುಕೊಂಡ ವಿದ್ಯಾರ್ಥಿಗಳು, ಪಾಲಕರನ್ನು ಸನ್ಮಾನಿಸಲಾಯಿತು.

ಸ್ಪೂರ್ತಿತುಂಬಿದ ಅಪರ ಜಿಲ್ಲಾಧಿಕಾರಿ ಮಾತು :
ಮೂಲತಃ ದೇವರಗೆಣ್ಣೂರು ಗ್ರಾಮದವರಾದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ತಾವು ತಹಸೀಲ್ದಾರ್ ಹುದ್ದೆಗೆ ಏರುವುದಕ್ಕೆ ಕಾರಣವಾದ ಘಟನೆಯನ್ನು ನೆನೆಸಿಕೊಂಡು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು. ನನ್ನ ತಂದೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಸ ಹೊಡೆಯುವ ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದರು. ಆರು ತಿಂಗಳಿಂದ ಅವರಿಗೆ ಸಂಬಳ ಬಂದಿರಲಿಲ್ಲ. ಆಗ ಸಂಬಂಧಿಸಿದ ತಹಸೀಲ್ದಾರ್ ಸೇವೆಯಲ್ಲಿದ್ದವರನ್ನು ಭೇಟಿಯಾಗಿ ಅವರ ಕಾಲಿಗೆ ಅಡ್ಡಲಾಗಿ ಎರಗಿ ಪಗಾರ ಮಾಡುವಂತೆ ಗೋಗರೆದರು. ಆಗ ನನ್ನ ತಂದೆಯ ವೇಷಭೂಷಣ ನೋಡಿದ ತಹಸೀಲ್ದಾರ್ ಭಿಕ್ಷುಕನ್ಯಾರೋ ಬಂದಿದ್ದಾನೆ ಎಂದು ಕಚೇರಿಯಿಂದ ಹೊರಗೆ ಹಾಕಲು ತಿಳಿಸಿದರು. ಆ ಸನ್ನಿವೇಶವೇ ನನ್ನನ್ನು ತಹಸೀಲ್ದಾರ್ ಆಗಬೇಕು ಎಂಬ ಆಸೆಯನ್ನು ಮೂಡಿಸಿತು. ಅಂದೇ ನಿರ್ಧಾರ ಮಾಡಿ ತಹಸೀಲ್ದಾರ್ ಆಗಬೇಕಾದರೆ ಏನು ಓದಬೇಕು ಎಂದು ಕಷ್ಟಪಟ್ಟು ಓದಿ ತಹಸೀಲ್ದಾರನಾದೆ. ಆದರೆ ತಹಸೀಲ್ದಾರ್ ಖುರ್ಚಿಯಲ್ಲಿ ನಾನು ಕೂಡುವ ಹೊತ್ತಿಗೆ ನನ್ನ ತಂದೆ ಬದುಕಿರಲಿಲ್ಲ ಎಂದು ನೆನೆಸಿಕೊಂಡರು.

Latest News

ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಸಂತೋಷ್ ಲಾಡ್

ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಸಂತೋಷ್ ಲಾಡ್

ಉಡುಪಿ ಅಕ್ಟೋಬರ್ ೧೦: ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಹಿತ ರಕ್ಷಣೆಗೆ ನಮ್ಮ

ರಾಜ್ಯದಲ್ಲೂ ವೇತನ ಸಹಿತ ಋತುಚಕ್ರ ರಜೆ

ರಾಜ್ಯದಲ್ಲೂ ವೇತನ ಸಹಿತ ಋತುಚಕ್ರ ರಜೆ

ಬೆಂಗಳೂರು : ಋತುಚಕ್ರ ರಜೆ ನೀತಿ - 2025ಕ್ಕೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ

ಕುಂಟೋಜಿಗೆ ಶಾಸಕ ನಾಡಗೌಡ ಭೇಟಿ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ

ಕುಂಟೋಜಿಗೆ ಶಾಸಕ ನಾಡಗೌಡ ಭೇಟಿ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮದ ರೈತ ಸಂಗಪ್ಪ ಗೌಡರ ಸಾಲದ ಬಾಧೆ ತಾಳದೇ

ಪಂಚಮಸಾಲಿಗರಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಚೆನ್ನಮ್ಮ ವೃತ್ತದ ಸುತ್ತಮುತ್ತ ಅನ್ಯ ವೃತ್ತಕ್ಕೆ ಅವಕಾಶ ಬೇಡ

ಪಂಚಮಸಾಲಿಗರಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಚೆನ್ನಮ್ಮ ವೃತ್ತದ ಸುತ್ತಮುತ್ತ ಅನ್ಯ ವೃತ್ತಕ್ಕೆ ಅವಕಾಶ ಬೇಡ

ಮುದ್ದೇಬಿಹಾಳ : ಪಟ್ಟಣದ ಹುಡ್ಕೋಗೆ ತೆರಳುವ ದ್ವಾರದಲ್ಲಿ ಸ್ಥಾಪಿಸಲಾಗಿರುವ ಕಿತ್ತೂರು ರಾಣಿ ಚೆನ್ನಮ್ಮನವರ ವೃತ್ತದ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನ ಯೋಜನೆಗಳ ಜಾರಿ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನ ಯೋಜನೆಗಳ ಜಾರಿ

ತುಮಕೂರು, ಅ.8: ಅಸಂಘಟಿತ ವಲಯದಲ್ಲಿ ದುರ್ಬಲರಾಗಿರುವ ಕಾರ್ಮಿಕರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸಲು ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ, ಆಶಾ ದೀಪ ಯೋಜನೆ, ಗಿಗ್ ಕಾರ್ಮಿಕರ ವಿಮಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು ಹೇಳಿದರು. ನಗರ ಹೊರವಲಯದ ಶ್ರೀ ಹೆಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ʼತುಮಕೂರು ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್

ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತ;                             ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು….!

ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತ; ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು….!

** ಹೆಬ್ಬಾಳ** ಮುದ್ದೇಬಿಹಾಳ : ಆಗಷ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ಹಲವಾರು ಬೆಳೆಗಳು ನೀರಲ್ಲಿ ನಿಂತಿದ್ದು ಅನ್ನದಾತ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗೇರಿ ಭಾಗದಲ್ಲಿ ನೂರಾರು ಎಕರೆ ಜಮೀನಿನಲ್ಲಿ ಬೆಳೆದಿರುವ ಬಹುತೇಕ ಎಲ್ಲ ಬೆಳೆಗಳು ಕೊಳೆತಿವೆ. ಉಳ್ಳಾಗಡ್ಡಿ, ಹತ್ತಿ, ತೊಗರಿ,ಮೆಕ್ಕೆಜೋಳ,ದ್ರಾಕ್ಷಿ,ಬಾಳೆ,ಟೊಮ್ಯಾಟೋ ಅತಿವೃಷ್ಟಿಯಿಂದ ಹೊಲದಲ್ಲಿಯೇ ಹಾಳಾಗಿದೆ. ಪತ್ರಿಕೆಯೊಂದಿಗೆ ಮಾತನಾಡಿದ ರೈತ ಬಸವರಾಜ ಕುಂಟೋಜಿ, ಅತೀವೃಷ್ಟಿಯಿಂದ ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೇವೆ.ಮಳೆ