
ಮುದ್ದೇಬಿಹಾಳ : ತಮ್ಮ ಪುತ್ರ ಕಿರಣ ಮದರಿ ಅವರ ಕಲ್ಯಾಣ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ.18 ರಂದು ಆಯೋಜಿಸಲಾಗಿದ್ದು ಆಸಕ್ತ ವಧು ವರರು ತಮ್ಮ ಹೆಸರುಗಳನ್ನು ನೋಂದಾಯಿಸಲು ಕಲ್ಯಾಣ ಮಹೋತ್ಸವ ಸಮೀತಿ ಸಂಚಾಲಕ, ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಎನ್. ಮದರಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪ್ರಥಮ ದರ್ಜೆ ಗುತ್ತಿಗೆದಾರರೂ ಆಗಿರುವ ಎಂ. ಎನ್. ಮದರಿ ಅವರು, ಉಳ್ಳವರ ಮದುವೆಗಳು ದುಂದುವೆಚ್ಚದಿಂದ ಕೂಡಿರುತ್ತವೆ ಎಂಬ ಅಪವಾದಗಳ ಮಧ್ಯೆ ಸಾಮಾಜಿಕವಾಗಿಯೂ ನಾಲ್ಕು ಜನ ಬಡ ಕುಟುಂಬಗಳಿಗೆ ಮದುವೆ ಭಾರವೆನಿಸಬಾರದು ಎಂಬ ಸದುದ್ಧೇಶದಿಂದ ನಮ್ಮ ಪುತ್ರನ ಮದುವೆಯ ಜೊತೆಗೆ ಸಾಮೂಹಿಕ ವಿವಾಹ ಆಯೋಜಿಸಿದ್ದೇವೆ ಎಂದು ತಿಳಿಸಿದರು.
ಮದುವೆಯಾಗುವ ದಂಪತಿಗೆ ಕಾನೂನು ಬದ್ಧವಾದ ಮದುವೆಯ ವಯಸ್ಸು ಆಗಿರಬೇಕು. ಮದುವೆಯಾಗುವ ವಧು ವರ ಜೋಡಿಗೆ ತಾಳಿ, ಕಾಲುಂಗರು, ಬಟ್ಟೆ ನೀಡಲಾಗುತ್ತದೆ. ದಾಸೋಹ ವ್ಯವಸ್ಥೆ ಇರಲಿದ್ದು ನಾಡಿನ ನೂರಾರು ಶರಣರು, ಗಣ್ಯರು ಈ ಸಮಾರಂಭವನ್ನು ಸಾಕ್ಷಿಕರಿಸಲಿದ್ದಾರೆ.
ಸಾಮೂಹಿಕ ಮದುವೆಯಲ್ಲಿ ಪಾಲ್ಗೊಳ್ಳಲಿಚ್ಛಿಸುವರು ಏ.30 ಒಳಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಮೊ.9980529772, 9980394710, 9945366630, 9902263548 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.