
ಗುಳೆದಗುಡ್ಡ : ನಮ್ಮ ಹಿರಿಯರು 5 ಋಣಗಳನ್ನು ತೀರಿಸಲು ಹೆಳಿದ್ದಾರೆ. ಅವುಗಳೆಂದರೆ ದೇವರ ಋಣ, ಋಷಿ ಋಣ, ಪಿತೃ ಋಣ, ಭೂತ ಋಣ, ನರ ಋಣ ಹೀಗೆ 5 ಋಣಗಳನ್ನು ತೀರಿಸಲೇ ಬೇಕು. ಅವುಗಳೊಂದಿಗೆ ಇನ್ನೊಂದು ಋಣ ಸೇರಿಸಿಕೊಳ್ಳಬೇಕು. ಅದು ದೇಶದ ಋಣ ಎಂದು ನಾಡಿನ ಪ್ರಖರ ವಾಗ್ಮಿ, ಯುವ ಬ್ರಿಗೇಡ್, ಮಾರ್ಗದರ್ಶಕ ಚಕ್ರವರ್ತಿ
ಸೂಲಿಬೆಲಿ ಹೇಳಿದರು.

ಬುಧವಾರ ಅವರು ಪಟ್ಟಣದ ಮರಡಿ ಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಶ್ರೀಗಳ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಹಾಗೂ ಮೌನ ಯೋಗಿಯ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿ, ಮಠ ಇರೋದು ಈ ಋಣಗಳನ್ನು ನಾವು ತೀರಿಸಲು ಪ್ರೇರಣೆ ಕೊಡುವುದಕ್ಕಾಗಿ. ಕಾರಣ ನಿಮ್ಮ ಮಕ್ಕಳಿಗೆ ಮಠಗಳಿಗೆ ಕಳಿಸಿ. ಈ ಐದು ಋಣಗಳ ಜೊತೆಗೆ ಮತ್ತೊಂದು ಋಣ ನಾವು ಸೇರಿಸಿಕೊಳ್ಳಬೇಕು. ಅದು ದೇಶದ ಋಣ. ಯಾವ ಊರಿನಲ್ಲಿ ಗುರುಸೇವೆ ಅತ್ಯಂತ ಭಕ್ತಿಯಿಂದ ನಡೆಯುತ್ತದೋ ಆ ಊರಿಗೆ ಭಗವಂತ ಎಂದೂ ಮೋಸ ಮಾಡುವುದಿಲ್ಲ ಎನ್ನುವುದಕ್ಕೆ ಈ ನಾಡಿನ ಪರಂಪರೆಯೇ
ಸಾಕ್ಷಿಯಾಗಿದೆ. ಮಠದ ಸ್ವಾಮಿಗಳ ಪೀಠ ಮುಳ್ಳಿನ ಹಾಸಿಗೆ ಇದ್ದಂತೆ. ಅದರ ಮೇಲೆ ಕುಳಿತಿರುವ ಸ್ವಾಮಿಗಳು ಭಕ್ತರ ಕಲ್ಯಾಣಕ್ಕಾಗಿ
ದೇವರಿಗೆ ಸದಾ ಪ್ರಾರ್ಥಿಸುತ್ತಾರೆ. ನಾನು ಯಾವುದೇ ಧರ್ಮ, ಮತದ ವಿರೋಧಿಯಲ್ಲ. ಹಿಂದು ಧರ್ಮದ ಉತ್ಕೃಷ್ಟವಾದ ಅಭಿಮಾನಿ ಅಂತ ಅಂದುಕೊಳ್ಳಿ ಎಂದರು.
ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತೇ ದಾಳಿ ಮಾಡಿದ್ದಾರೆ. ಈ ದೇಶದ ಪ್ರವಾಸಿ ಜನ ಕಾಶ್ಮೀರಕ್ಕೆ ಸುತ್ತಾಡಿಕೊಂಡು ಬರಲು ಹೋದವರ ಮೇಲೆ ದಾಳಿ ಮಾಡಿದ್ದಾರೆ. ಪ್ರವಾಸಿಗರಿಗೆ ಹೆಸರು, ಧರ್ಮ ಕೇಳಿ ಹಿಂದುಗಳನ್ನಷ್ಟೇ ಕೊಂದಿದ್ದಾರೆ. ಹೆಣ್ಣು
ಮಕ್ಕಳನ್ನು ಬಿಟ್ಟಿದ್ದಾರೆ. ನಮ್ಮನ್ನು ಯಾಕೆ ಬಿಟ್ಟಿದ್ದಿರಿ ನಮ್ಮನ್ನು ಕೊಂದು ಬಿಡಿ ಎಂದಿದ್ದಕ್ಕೆ, ಅದು ಇಂದು ಪುನರ್‌ನಿರ್ಮಾಣವಾಗಬೇಕಿದೆ.
ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ನೀಡಬೇಕಿದೆ. ಮೊಬೈಲ್, ಟಿವಿ ಹಾವಳಿಯಿಂದ ಮುಕ್ತಗೊಳಿಸಬೇಕಾಗಿದೆ. ಯುವಕರು ದೇಶಭಕ್ತಿ ಬೆಳೆಸಿಕೊಳ್ಳಬೇಕು. ಹಿಂದು ಧರ್ಮವನ್ನು ಬಿಟ್ಟು ನಿನ್ನೆ ಮೊನ್ನೆ ಹುಟ್ಟಿದ ಧರ್ಮಕ್ಕೆ ಹೋಗಿ ಮತಾಂತರವಾಗುವವರಿಗೆ ಹೇಳಿ, ಹಿಂದೂ ಧರ್ಮ ಅತ್ಯಂತ ಹಳೆಯದಾದ ಧರ್ಮ ಅಂತ ಎಂದರು.
ವೇದಿಕೆ ಮೇಲೆ ಅಭಿನವ ಕಾಡಸಿದ್ದೇಶ್ವರ ಶ್ರೀಗಳು, ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಶ್ರೀಗಳು, ನಿಡಗುಂದಿಕೊಪ್ಪದ ಚನ್ನಬಸವ ಶ್ರೀಗಳು, ಕೆಲ್ಲೂರದ ಶಿವಕುಮಾರ ದೇವರು ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅಮೃತಶಿಲಾ ಮೂರ್ತಿಯ ಭಕ್ತಿ ಸೇವೆ ಜರುಗಿತು.