
ರಾಜನಕೊಳುರು : ಹುಣಸಗಿ ತಾಲೂಕಿನ ರಾಜನಕೊಳುರು ಗ್ರಾಮದಲ್ಲಿ 2025-26 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯ ಯೋಜನೆಯ ಅಡಿಯಲ್ಲಿ ಬರುವ ಜನರಿಗೆ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು. ರಾಜನಕೊಳುರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಕಾಮಗಾರಿ ಸ್ಥಳದಲ್ಲಿ ಸುಮಾರು 240 ಜನ ನರೇಗಾ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈರಮ್ಮ ಮಾತನಾಡಿ, ‘ಕೂಲಿಕಾರರು ತಮ್ಮ ದೇಹದ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಶಿಬಿರದಲ್ಲಿ ರಕ್ತದ ಒತ್ತಡ, ಶುಗರ್, ರಕ್ತ ಪರೀಕ್ಷೆ, ಕಣ್ಣಿನ ಪರೀಕ್ಷೆ ಹಲ್ಲು ಪರೀಕ್ಷೆಯನ್ನು ಮಾಡಲಾಯಿತು.
ಈ ವೇಳೆ ಸ್ಥಳದಲ್ಲಿ ವೈದ್ಯರಾದ ಎಂ. ಬಿ. ಕೋರೆ, A. D. ಶಿವಕುಮಾರ್ ಚೌದ್ರಿ, ಪಿಡಿಓ ಈರಮ್ಮ, ಟಿ. ಸಿ ಸುನಿಲ ಕುಮಾರ್, ಶಾಂತ ಕುಮಾರ, ಮಾಹಾಂತೇಶ ಶೆಟ್ಟಿ, BFT ಲಕ್ಕಪ್ಪ, ಸಂಜೀವಿನಿ, ನಾಗವೇಣಿ, ಕವಿತಾ, ಕುಸಿನ ಮನೆ- ರೇಣುಕಾ, ಭಾಗ್ಯ, ಗ್ರಾಕೋಸಕರು ಮಲ್ಲಮ್ಮ ಕವಿತಾ ಇನ್ನಿತರರು ಉಪಸ್ಥಿತರಿದ್ದರು.
ವರದಿಗಾರ : ಶಿವು ರಾಠೋಡ