Action against Nagabena's PDO Peerapur

ನಾಗಬೇನಾಳ ಪಿಡಿಒ ಪೀರಾಪುರ ವಿರುದ್ಧ ಕ್ರಮಕ್ಕೆ ಒತ್ತಾಯ

ನಾಗಬೇನಾಳ ಪಿಡಿಒ ಪೀರಾಪುರ ವಿರುದ್ಧ ಕ್ರಮಕ್ಕೆ ಒತ್ತಾಯ

ಮುದ್ದೇಬಿಹಾಳ : ತಾಲ್ಲೂಕಿನ ನಾಗಬೇನಾಳ ಗ್ರಾಮ ಪಂಚಾಯಿತಿ ಪಿಡಿಒ ಮುರಿಗೆಮ್ಮ ಪೀರಾಪುರ ಪಂಚಾಯತ್ ನಲ್ಲಿ ಸಾರ್ವಜನಿಕರೊಂದಿಗೆ ದುರ್ವರ್ತನೆ ತೋರುತ್ತಿದ್ದು ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಶ್ನಿಸಲು ಹೋದರೆ ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮದ ಮುಖಂಡ ಸಂಗಪ್ಪ ಸುಲ್ತಾನಪೂರ, ಜಗದೀಶ ಪತ್ತಾರ ತಾಲ್ಲೂಕು ಪಂಚಾಯಿತಿ ಇಒಗೆ ಸೋಮವಾರ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಕುರಿತು ಸಲ್ಲಿಸಿದ ಲಿಖಿತ ಮನವಿ ಪತ್ರದಲ್ಲಿ ಬಸವ ವಸತಿ ಯೋಜನೆಯು ನಿರ್ಗತಿಕ ಬಡವರಿಗೆ ಮನೆ ಹಾಕಬೇಕು. ಆದರೆ ಉಳ್ಳವರಿಗೆ ಮನೆ ಹಾಕಿರುತ್ತಾರೆ.ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ನೀಡದೇ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ಮೂಲಸೌಕರ್ಯಗಳ ಕುರಿತು ಕೇಳಿದರೆ ಬೇಜವಾಬ್ದಾರಿ ಉತ್ತರ ಕೊಡುವ ಜೊತೆಗೆ ರಾಜಕಾರಣಿಗಳ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಲಾಗಿದೆ.

ವಸತಿ ಯೋಜನೆಯ ಗ್ರಾಮಸಭೆಯ ಠರಾವು, ವಿಡಿಯೋ ಚಿತ್ರೀಕರಣ, ಫಲಾನುಭವಿಗಳ ಸಹಿ ಪುಸ್ತಕದ ವಾಸ್ತವ ಪರಿಶೀಲನೆ ಮತ್ತು ಪ್ರಸ್ತಾವನೆ ನಿರ್ವಹಣೆಯಲ್ಲಿ ಶಿಸ್ತು ಇಲ್ಲದೇ ಕಾರ್ಯನಿರ್ವಹಿಸುತ್ತಿದ್ದಾರೆ.14, 15 ಹಾಗೂ ವರ್ಗ-1 ರಡಿ ಬಿಡುಗಡೆ ಆದ ಅನುದಾನದಲ್ಲಿ ದುರುಪಯೋಗವಾಗಿದ್ದು ಅವರ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.

Latest News

ಜ.19 ರಿಂದ ವಿಶ್ವ ದಾಸೋಹ ದಿನ ; ನಾನಾ ಕಾರ್ಯಕ್ರಮ ಸಾಣೇಹಳ್ಳಿ ಶಿವಸಂಚಾರ ತಂಡದಿಂದ ಮೂರು ದಿನ ನಾಟಕೋತ್ಸವ

ಜ.19 ರಿಂದ ವಿಶ್ವ ದಾಸೋಹ ದಿನ ; ನಾನಾ ಕಾರ್ಯಕ್ರಮ ಸಾಣೇಹಳ್ಳಿ ಶಿವಸಂಚಾರ ತಂಡದಿಂದ ಮೂರು ದಿನ ನಾಟಕೋತ್ಸವ

ಮುದ್ದೇಬಿಹಾಳ : ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ ಜನ್ಮದಿನೋತ್ಸವ ಹಾಗೂ ಮಡಿಕೇಶ್ವರದ

ಬಿದ್ದಾಗ ಕೈ ಹಿಡಿದು ಮೇಲೆತ್ತಿ ಜೋಪಾನ ಮಾಡುವ ಸಂಸ್ಕಾರ ಮಕ್ಕಳಲ್ಲಿ ಬೆಳೆಸಿ-ಅಕ್ಷಯಾ ಗೋಖಲೆ

ಬಿದ್ದಾಗ ಕೈ ಹಿಡಿದು ಮೇಲೆತ್ತಿ ಜೋಪಾನ ಮಾಡುವ ಸಂಸ್ಕಾರ ಮಕ್ಕಳಲ್ಲಿ ಬೆಳೆಸಿ-ಅಕ್ಷಯಾ ಗೋಖಲೆ

ತಾಳಿಕೋಟಿ : ತಂದೆ ತಾಯಿ ಹುಟ್ಟಿನಿಂದ ನೀಡುವ ಸಂಸ್ಕಾರವು ಮಗುವಿನ ಭವಿಷ್ಯ ನಿರ್ಧರಿಸುತ್ತದೆ. ಈ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಮುದ್ದೇಬಿಹಾಳ : ಸಿರಿವಂತರು ಸಿರಿವಂತಿಕೆಯ ಬಗ್ಗೆ ಮಾತನಾಡುತ್ತಾರೆಯೇ ಹೊರತು ಬಡವರ ಕುರಿತು ಮಾತನಾಡುವುದು ಅಪರೂಪ.ಆದರೆ

ಹುಲ್ಲೂರು ತಾಂಡಾದ ಡಾ.ಮೋತಿಲಾಲ್ ಚವ್ಹಾಣಗೆ ಗೌರವ: ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕ

ಹುಲ್ಲೂರು ತಾಂಡಾದ ಡಾ.ಮೋತಿಲಾಲ್ ಚವ್ಹಾಣಗೆ ಗೌರವ: ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕ

ಮುದ್ದೇಬಿಹಾಳ : ಮೂಲತಃ ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರು ತಾಂಡಾದ ಡಾ.ಮೋತಿಲಾಲ ರೂ.ಚವ್ಹಾಣ ಅವರನ್ನು ಕರ್ನಾಟಕ

ಮುದ್ದೇಬಿಹಾಳ : ಜ.14 ರಂದು ಸಾಧಕರಿಗೆ ಸನ್ಮಾನ

ಮುದ್ದೇಬಿಹಾಳ : ಜ.14 ರಂದು ಸಾಧಕರಿಗೆ ಸನ್ಮಾನ

ಮುದ್ದೇಬಿಹಾಳ : ಕೊಣ್ಣೂರಿನ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಜ.14 ರಂದು ಸಂಜೆ 5 ಗಂಟೆಗೆ ಇಲ್ಲಿನ ಬೆಂಗಳೂರು ಬೇಕರಿ ಫಂಕ್ಷನ್ ಹಾಲ್‌ನಲ್ಲಿ ಸಾಧಕರಿಗೆ ಸನ್ಮಾನ ಹಾಗೂ ನೂತನ ದಿನದರ್ಶಿಕೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳು ಮಹಾ ಮಂಡಳ ನಿ..ಬೆಂಗಳೂರು ಇದರ ನಿರ್ದೇಶಕರಾಗಿ ಆಯ್ಕೆಯಾದ ಆನಂದಗೌಡ ಎಸ್. ಬಿರಾದಾರ ಹಾಗೂ ಹಸಿರು ತೋರಣ ಗೆಳೆಯರ ಬಳಗಕ್ಕೆ ನೂತನ ಮುದ್ದೇಬಿಹಾಳ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಂಚಮಸಾಲಿ ಸಮಾಜದ

ಗಮನ ಸೆಳೆದ ಉತ್ತರ ಕರ್ನಾಟಕದ ಊಟ:                     M.R.E.M ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಸಂಭ್ರಮ

ಗಮನ ಸೆಳೆದ ಉತ್ತರ ಕರ್ನಾಟಕದ ಊಟ: M.R.E.M ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಸಂಭ್ರಮ

ಮುದ್ದೇಬಿಹಾಳ : ಉತ್ತರ ಕರ್ನಾಟಕದ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಕರ ಸಂಕ್ರಾಂತಿಯ ಮುನ್ನಾ ದಿನ ಪಟ್ಟಣದ ಮಾರುತಿ ನಗರದ ಗಣಪತಿ ಗುಡಿ ಹತ್ತಿರ ಇರುವ ಎಂ.ಆರ್.ಇ.ಎo ಇಂಟರ್‌ನ್ಯಾಶನಲ್ ಸ್ಕೂಲ್ ಹಾಗೂ ಭಾಗ್ಯವಂತಿ ಎಚ್.ಪಿ.ಎಸ್ ಶಾಲೆಯಲ್ಲಿ ಮಂಗಳವಾರ ಅದ್ದೂರಿಯಾಗಿ ಆಚರಿಸಲಾಯಿತು. ಸಂಕ್ರಾಂತಿಯ ಸಂಭ್ರಮದ ಅಂಗವಾಗಿ ಉತ್ತರ ಕರ್ನಾಟಕದ ಬಗೆ ಬಗೆಯ ತಿನಿಸುಗಳು,ಆಹಾರ ಪದ್ಧತಿಯನ್ನು ಮಕ್ಕಳಿಗೆ ಪರಿಚಯಿಸುವ ಕಾರ್ಯವನ್ನು ಶಿಕ್ಷಕರು ಮಾಡಿದರು.ಶಾಲೆಯ ಮುಖ್ಯಗುರುಮಾತೆ ಅಮೃತಾ ಹಿರೇಮಠ ಮಾತನಾಡಿ, ನಮ್ಮ ಭಾಗದಲ್ಲಿ ಆಚರಣೆಯಲ್ಲಿರುವ ಸಂಕ್ರಾಂತಿಯ