ರಬಕವಿ-ಬನಹಟ್ಟಿ : ತಾಲೂಕಿನ ಮದನಮಟ್ಟಿ ಗ್ರಾಮದಲ್ಲಿ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಸಿಂಗರಿಸಿ, ಟ್ರ್ಯಾಕ್ಟರ್ ಮುಂಭಾಗದಲ್ಲಿ ಕಟ್ಟಿ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಲಾಯಿತು. ಗ್ರಾಮದ ಮಹಿಳೆಯರು ಆರತಿ ತರುವ ಮೂಲಕ ಮೆರವಣಿಗೆಗೆ ಶೋಭೆ ನೀಡಿದರು. ವಾಧ್ಯ ಹಾಗೂ ಸಂಗೀತದ ಮೂಲಕ ಮೆರವಣಿಗೆ ಸರಾಗವಾಗಿ ಸಾಗಿತು.
ಭಾವಚಿತ್ರದ ಮೆರವಣಿಗೆ ನಂತರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರವಚನವನ್ನು ಆಲಿಸಿದ ಗ್ರಾಮಸ್ಥರು ಪುನೀತರಾದರು. ನೆರದಿದ್ದ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಬಸವರಾಜ ಹರೋಲಿ, ಸಂತೋಷ ಅಡಾಲಟ್ಟಿ, ಶ್ರೀಶೈಲ ಅಡಾಲಟ್ಟಿ, ಸುರೇಶ ಹಣಮನ್ನವರ, ಬಸವರಾಜ ಉಮರಾಣಿ, ಭೀಮಪ್ಪ ಅವಕ್ಕನ್ನವರ, ಸುರೇಶ ಹರೋಲಿ, ಸಂತೋಷ ಹೆಗ್ಗಳಗಿ, ಕುಮಾರ ನಂದೆಪ್ಪನ್ನವರ, ಶ್ರೀಶೈಲ ಪೂಜಾರಿ ಹಾಗೂ ಸಮಸ್ತ ಗ್ರಾಮಸ್ಥರು ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ನೇರವೇರಿಸಿದರು.