Mother and son died in a head-on collision between two cars! Another son-father condition is critical

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಬಾಗಲಕೋಟೆ: ಎರಡು ‌ಕಾರುಗಳು ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕಾರಿನಲ್ಲಿದ್ದ ಇಬ್ಬರು ಧಾರುಣವಾಗಿ ವೃತಪಟ್ಟಿದ್ದು, ಇನ್ನಿಬ್ಬರಿಗೆ ಗಂಭೀರ ಗಾಯಗಳಾದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಬಳಿ ಜರುಗಿದೆ.

ಅಪಘಾತದಲ್ಲಿ ಒಂದೇ ಕಾರಿನಲ್ಲಿದ್ದ ತಾಯಿ-ಮಗ ಸಾವನ್ನಪ್ಪಿದ್ದು, ತಂದೆ ಮತ್ತು ಇನ್ನೋರ್ವ ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನ ಗಂಗಮ್ಮ ಅಂಗಡಿ (50), ಸಂದೇಶ ಅಂಗಡಿ (18) ಎಂದು ಗುರ್ತಿಸಲಾಗಿದೆ. ಗಾಯಾಳುಗಳನ್ನು ವೀರೇಶ(54), ಸತೀಶ (28)ಅಂಗಡಿ ಎಂದು ಗುರ್ತಿಸಲಾಗಿದೆ.

ಗಾಯಾಳುಗಳನ್ನ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಬಾದಾಮಿ ತಾಲೂಕಿನ ನೆಲುಗಿ ಗ್ರಾಮದವರೆಂಸು ತಿಳಿದು ಬಂದಿದೆ.

ಇನ್ನೊಂದು‌ ಕಾರಿನಲ್ಲಿದ್ದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Latest News

ಕಾನ್ಪುರ ಐಐಟಿಗೆ ಆಯ್ಕೆಯಾದ ವಿದ್ಯಾರ್ಥಿನಿಗೆ ಬಂಪರ್ ಕೊಡುಗೆ

ಕಾನ್ಪುರ ಐಐಟಿಗೆ ಆಯ್ಕೆಯಾದ ವಿದ್ಯಾರ್ಥಿನಿಗೆ ಬಂಪರ್ ಕೊಡುಗೆ

ಮುದ್ದೇಬಿಹಾಳ(ಜಿಲ್ಲೆ : ವಿಜಯಪುರ) : ದೇಶದ ಪ್ರತಿಷ್ಠಿತ ಐಐಟಿ ಕಾಲೇಜುಗಳಲ್ಲಿ ಒಂದಾಗಿರುವ ಕಾನ್ಪುರದ ಐಐಟಿ

ಮುದ್ದೇಬಿಹಾಳ ಗ್ರಾಮೀಣ ಪೊಲೀಸ್ ಠಾಣೆ ಶೀಘ್ರ ಕಾರ್ಯಾರಂಭಗೊಳಿಸಿ

ಮುದ್ದೇಬಿಹಾಳ ಗ್ರಾಮೀಣ ಪೊಲೀಸ್ ಠಾಣೆ ಶೀಘ್ರ ಕಾರ್ಯಾರಂಭಗೊಳಿಸಿ

ಮುದ್ದೇಬಿಹಾಳ : ಸಿಎಂ ಸಿದ್ಧರಾಮಯ್ಯನವರ ಅವಧಿಯಲ್ಲಿ ಕಳೆದ ಬಜೆಟ್‌ನಲ್ಲಿ ಮುದ್ದೇಬಿಹಾಳ ಗ್ರಾಮಾಂತರ ಪೊಲೀಸ್ ಠಾಣೆ

ತನಿಖೆಯಲ್ಲಿ ಮಹತ್ವದ ಸುಳಿವು ಲಭ್ಯ-ಐಜಿಪಿ ಸಂದೀಪ ಪಾಟೀಲ್

ತನಿಖೆಯಲ್ಲಿ ಮಹತ್ವದ ಸುಳಿವು ಲಭ್ಯ-ಐಜಿಪಿ ಸಂದೀಪ ಪಾಟೀಲ್

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದ ಬೆಳ್ಳಿ ಕವಚ ಕಳ್ಳತನ ಪ್ರಕರಣಕ್ಕೆ

S.I.R-ಮುದ್ದೇಬಿಹಾಳ ಮತಕ್ಷೇತ್ರ :  ಇಬ್ಬರು ಬಿಎಲ್‌ಓಗಳಿಂದ ಶೇ.100ರಷ್ಟು ಕಾರ್ಯ ಪೂರ್ಣ

S.I.R-ಮುದ್ದೇಬಿಹಾಳ ಮತಕ್ಷೇತ್ರ : ಇಬ್ಬರು ಬಿಎಲ್‌ಓಗಳಿಂದ ಶೇ.100ರಷ್ಟು ಕಾರ್ಯ ಪೂರ್ಣ

ಮುದ್ದೇಬಿಹಾಳ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಬಿಎಲ್‌ಓಗಳು,ಮೇಲ್ವಿಚಾರಕರು,ಬಿಎಲ್‌ಎಗಳ ಹಾಗೂ ಮತದಾರರ

ಪುನೀತ ಹಿಪ್ಪರಗಿ ಅಧ್ಯಕ್ಷರಾಗಿ ಆಯ್ಕೆ:                          ಮುದ್ದೇಬಿಹಾಳ : ಕಾರ್ಗಿಲ್ ಸ್ಮಾರಕ ಸಮಿತಿಗೆ ನೂತನ ಪದಾಧಿಕಾರಿಗಳು

ಪುನೀತ ಹಿಪ್ಪರಗಿ ಅಧ್ಯಕ್ಷರಾಗಿ ಆಯ್ಕೆ: ಮುದ್ದೇಬಿಹಾಳ : ಕಾರ್ಗಿಲ್ ಸ್ಮಾರಕ ಸಮಿತಿಗೆ ನೂತನ ಪದಾಧಿಕಾರಿಗಳು

ಮುದ್ದೇಬಿಹಾಳ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಕಾರ್ಗಿಲ್ ವೀರಯೋಧರ ಸ್ಮಾರಕ ನಿರ್ಮಾಣ ಸಮಿತಿಯ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಸಮಿತಿಯ ಅಧ್ಯಕ್ಷರಾಗಿ ಪುನೀತ ಹಿಪ್ಪರಗಿ, ಉಪಾಧ್ಯಕ್ಷರಾಗಿ ಸೋಮನಗೌಡ ಬಿರಾದಾರ ಹಾಗೂ ಕಾರ್ಯದರ್ಶಿಯಾಗಿ ಕಾಶಿನಾಥ ಹುಗ್ಗಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ಮಹಾಂತೇಶ ಬೂದಿಹಾಳಮಠ, ನೂತನ ಪದಾಧಿಕಾರಿಗಳು ಕಾರ್ಗಿಲ್ ಸಮಿತಿಯ ಉದ್ದೇಶಗಳನ್ನು ಮತ್ತಷ್ಟು ಬಲಪಡಿಸಿ, ದೇಶಭಕ್ತಿ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಹೆಚ್ಚಿನ

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೆಸರು ಹೇಳಿ ಬ್ಲಾಕ್‌ಮೇಲ್ ಆರೋಪ

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೆಸರು ಹೇಳಿ ಬ್ಲಾಕ್‌ಮೇಲ್ ಆರೋಪ

ಮುದ್ದೇಬಿಹಾಳ : ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರ ಹೆಸರು ಹೇಳಿಕೊಂಡು ಸ್ಥಳೀಯ ಯುವಕನೋರ್ವ ಕರ್ತವ್ಯಕ್ಕೆ ಅಡ್ಡಿ ಪಡಿಸುವುದಲ್ಲದೆ, ಕಳೆದ ಒಂದು ವರ್ಷದಿಂದ ಉದ್ದೇಶಪೂರ್ವಕವಾಗಿ ತನ್ನ ವಿಡಿಯೋ,ಪೋಟೋ ಚಿತ್ರೀಕರಣ ಮಾಡಿ ಅಧಿಕಾರಿಗಳಿಗೆ ಹರಿ ಬಿಡುತ್ತಿದ್ದಾನೆ ಎಂದು ಆರೋಪಿಸಿದ ತಾಲ್ಲೂಕಿನ ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ಹೊರ ಗುತ್ತಿಗೆ ಮಹಿಳಾ ಸಿಬ್ಬಂದಿಯೋರ್ವರು ಮಂಗಳವಾರ ಆಸ್ಪತ್ರೆಯಲ್ಲೇ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.ಏತನ್ಮಧ್ಯೆ ಘಟನೆ ಖಂಡಿಸಿ ಆಸ್ಪತ್ರೆಯ ಹೊರಗೆ