ಮುದ್ದೇಬಿಹಾಳ : ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಂಗ್ಲೆ ಮಲ್ಲಿಕಾರ್ಜುನ ಸ್ಥಾಪಿತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾ ಘಟಕದ ಆಶ್ರಯದಲ್ಲಿ ಕೊಡಮಾಡುವ ಜಿಲ್ಲಾ ಮಾಧ್ಯಮ ರತ್ನ-2025 ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕರ್ನಾಟಕ ಸಂಧ್ಯಾಕಾಲ ದಿನಪತ್ರಿಕೆ ವರದಿಗಾರ ಮಾರುತಿ ಹಿಪ್ಪರಗಿ, ರಣರಂಗ ದಿನಪತ್ರಿಕೆ ವರದಿಗಾರ ಗುಲಾಮಮೊಹ್ಮದ ದಫೇದಾರ ಆಯ್ಕೆಯಾಗಿದ್ದಾರೆ.
ಜು.27 ರಂದು ವಿಜಯಪುರದ ಜಿಪಂ ಕಚೇರಿ ಹತ್ತಿರ ಇರುವ ಗಾಂಧಿ ಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾ ಅಧ್ಯಕ್ಷ ಯೂಸೂಫ ನೇವಾರ, ಪ್ರಧಾನ ಕಾರ್ಯದರ್ಶಿ ವಿನಾಯಕ ಸೊಂಡೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.