ಮುದ್ದೇಬಿಹಾಳ : ಪಟ್ಟಣದ ಹಸಿರು ತೋರಣ ಗೆಳೆಯರ ಬಳಗದ 2026 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ನೂತನ ಅಧ್ಯಕ್ಷರಾಗಿ ಅಮರೇಶ ಕೆ.ಗೂಳಿ, ಕಾರ್ಯದರ್ಶಿಯಾಗಿ ಬಸವರಾಜ ಬಿಜ್ಜೂರ ಅವಿರೋಧವಾಗಿ ಆಯ್ಕೆಯಾದರು. ಹಸಿರು ತೋರಣ ಉದ್ಯಾನವನದಲ್ಲಿ ಸೋಮವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಬಳಗದ ಗೌರವಾಧ್ಯಕ್ಷರಾಗಿ ಸೋಮಶೇಖರ ಚೀರಲದಿನ್ನಿ, ಉಪಾಧ್ಯಕ್ಷರಾಗಿ ವಿಲಾಸರಾವ್ ದೇಶಪಾಂಡೆ ಆಯ್ಕೆಯಾದರು. ಸಂಚಾಲಕರಾಗಿ ಮಹಾಬಲೇಶ್ವರ ಗಡೇದ, ಖಜಾಂಚಿಯಾಗಿ ಅಶೋಕ ರೇವಡಿ, ಸಹ ಕಾರ್ಯದರ್ಶಿಯಾಗಿ ವೀರೇಶ ಹಂಪನಗೌಡರ ಮರು ಆಯ್ಕೆಯಾದರು.
ಸಭೆಯಲ್ಲಿ ಹಸಿರು ತೋರಣ ಬಳಗದ ಅಧ್ಯಕ್ಷರಾದ ಬಿ.ಎಚ್.ಬಳಬಟ್ಟಿ, ಮಾಜಿ ಅಧ್ಯಕ್ಷರಾದ ಕೆ.ಆರ್. ಕಾಮಟೆ, ನಾಗಭೂಷಣ ನಾವದಗಿ, ರಾಜಶೇಖರ ಕಲ್ಯಾಣಮಠ, ಬಿ.ಎಸ್.ಮೇಟಿ, ರವಿ ಗೂಳಿ, ಡಾ.ವೀರೇಶ ಇಟಗಿ ಮತ್ತು ಸದಸ್ಯರಾದ ಮಲ್ಲಿಕಾರ್ಜುನ ಬಾಗೇವಾಡಿ, ಸುರೇಶ ಕಲಾಲ, ಕಿರಣ ಕಡಿ, ಅಮರೇಶ ಐಹೊಳೆ, ಜಿ.ಎಂ.ಹುಲಗಣ್ಣಿ, ವಿಶ್ವನಾಥ ನಾಗಠಾಣ, ವೆಂಕನಗೌಡ ಪಾಟೀಲ, ರವಿ ತಡಸದ, ಬಸವರಾಜ ಸಿದರಡ್ಡಿ, ಎಚ್.ವೈ.ಪಾಟೀಲ, ಬಿ.ಎಂ.ಪಲ್ಲೇದ, ಪರಶುರಾಮ ಕೂಡಗಿ, ಡಾ.ವೀರೇಶ ಪಾಟೀಲ, ಡಾ.ಉತ್ಕರ್ಷ ನಾಗೂರ, ಡಾ.ವಿಜಯಕುಮಾರ ಗೂಳಿ, ಡಾ.ಚಂದ್ರಶೇಖರ ಶಿವಯೋಗಿಮಠ, ಶ್ರೀಶೈಲ ಮರೋಳ, ಶಿವಾನಂದ ಇಂಡಿ ಮತ್ತಿತರರು ಇದ್ದರು.







