ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೆಸರು ಹೇಳಿ ಬ್ಲಾಕ್‌ಮೇಲ್ ಆರೋಪ

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೆಸರು ಹೇಳಿ ಬ್ಲಾಕ್‌ಮೇಲ್ ಆರೋಪ

ಮುದ್ದೇಬಿಹಾಳ : ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರ ಹೆಸರು ಹೇಳಿಕೊಂಡು ಸ್ಥಳೀಯ ಯುವಕನೋರ್ವ ಕರ್ತವ್ಯಕ್ಕೆ ಅಡ್ಡಿ ಪಡಿಸುವುದಲ್ಲದೆ, ಕಳೆದ ಒಂದು ವರ್ಷದಿಂದ ಉದ್ದೇಶಪೂರ್ವಕವಾಗಿ ತನ್ನ ವಿಡಿಯೋ,ಪೋಟೋ ಚಿತ್ರೀಕರಣ ಮಾಡಿ ಅಧಿಕಾರಿಗಳಿಗೆ ಹರಿ ಬಿಡುತ್ತಿದ್ದಾನೆ ಎಂದು ಆರೋಪಿಸಿದ ತಾಲ್ಲೂಕಿನ ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ಹೊರ ಗುತ್ತಿಗೆ ಮಹಿಳಾ ಸಿಬ್ಬಂದಿಯೋರ್ವರು ಮಂಗಳವಾರ ಆಸ್ಪತ್ರೆಯಲ್ಲೇ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.ಏತನ್ಮಧ್ಯೆ ಘಟನೆ ಖಂಡಿಸಿ ಆಸ್ಪತ್ರೆಯ ಹೊರಗೆ ಸಿಬ್ಬಂದಿ ಯುವಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಿಢೀರ್ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಸ್ಥಳಿಯ ಆಸ್ಪತ್ರೆಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದ ಕುಸುಮಾ ಹುಡೇದ ಎಂಬುವರೇ ಮಾತ್ರೆ ಸೇವಿಸಿ ಪ್ರಾಣ ಬಿಡಲು ಯತ್ನಿಸಿದವರು ಎಂದು ತಿಳಿದು ಬಂದಿದೆ.ತಕ್ಷಣ ಇದನ್ನು ಗಮನಿಸಿದ ಸ್ಥಳದಲ್ಲಿದ್ದ ಸಿಬ್ಬಂದಿ ಅವರನ್ನು ಮುದ್ದೇಬಿಹಾಳದ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಘಟನೆ ವಿವರ : ಸುಮಾರು ಒಂದು ವರ್ಷದಿಂದಲೂ ಸ್ಥಳಿಯ ವ್ಯಕ್ತಿಯೋರ್ವ 2-3 ದಿನಕ್ಕೊಮ್ಮೆ ರಾತ್ರಿ ಹಗಲು ಎನ್ನದೇ ತಾವು ಕರ್ತವ್ಯ ನಿರ್ವಹಿಸುವ ವೇಳೆ ಏಕಾಏಕಿ ಬಂದು ವಿಡಿಯೋ ಚಿತ್ರೀಕರಿಸಿ ಸಾಮಾಜೀಕ ಜಾಲತಾಣ ಹಾಗೂ ಅಧಿಕಾರಿಗಳಿಗೆ ಹರಿ ಬಿಟ್ಟು ಭಯ ಹುಟ್ಟಿಸುತ್ತಿದ್ದ ಎಂದು ಆರೋಪಿಸಲಾಗಿದ್ದು ಕುಸುಮಾ ಅವರನ್ನು ಕೆಲಸದಿಂದ ಬಿಡುಗಡೆ ಮಾಡಬೇಕು ಎಂದು ಹೊರ ಗುತ್ತಿಗೆಯ ಸಂಸ್ಥೆಯವರಿಗೂ ಸಹ ಪತ್ರ ಬರೆದಿದ್ದ ಎನ್ನಲಾಗಿದೆ.ಗುತ್ತಿಗೆ ಸಂಸ್ಥೆಯವರು ಕುಸುಮಾ ಅವರಿಗೆ ಕೆಲಸದಿಂದ ವಜಾ ಮಾಡಿ ಪತ್ರವೂ ನೀಡಿದ್ದರು. ಅತ್ತ ಮಾತ್ರೆ ನುಂಗಿದ ಘಟನೆ ಹಿಂದಿನ ದಿನವಷ್ಟೇ ಪೋಲೀಯೋ ಲಸಿಕೆ ದಿನವೂ ಬಂದು ವಿನಃ ಕಾರಣ ಸಂತ್ರಸ್ತೆ ಕುಸುಮಾ ಕೆಲಸ ಮಾಡುತ್ತಿದ್ದ ವೇಳೆ ವಿಡಿಯೋ ಮಾಡಿದ್ದ ಎನ್ನಲಾಗಿದೆ.

ನಾನು 10 ವರ್ಷದಿಂದ ಕೆಲಸ ಮಾಡುತ್ತಿದ್ದೆ.ಆದರೆ ಯಾವುದೇ ಆರೋಪಗಳಿಲ್ಲದೇ ನನ್ನನ್ನು ವಜಾ ಮಾಡುತ್ತಿದ್ದಾರೆ ಎನ್ನುವ ಕಿರುಕುಳಕ್ಕೆ ಬೇಸತ್ತ ಕುಸುಮಾ ಮಾತ್ರೆ ಸೇವನೆ ಮಾಡಿದ್ದಾಳೆ ಎಂದು ಅವರ ಸಂಬAಧಿಕರು ಆರೋಪಿಸಿದ್ದಾರೆ.
ಮೇಲಿಂದ ಮೇಲೆ ವಿಡಿಯೋ ಚಿತ್ರೀಕರಣ ಮಾಡುವ ಪರಿಣಾಮ ನಮಗೆ ರಕ್ಷಣೆ ಇಲ್ಲದಂತಾಗಿದೆ, ಎಲ್ಲರ ಕರ್ತವ್ಯಕ್ಕೂ ಸಹ ಅಡಚಣೆ ಉಂಟು ಮಾಡುತ್ತಿದ್ದಾನೆ.ಮಾತೆತ್ತಿದರೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿö್ಮÃ ಚೌಧರಿ ಅವರ ಹೆಸರು ಹೇಳಿ ಬೆದರಿಸುತ್ತಿದ್ದಾನೆ.ನಾವು ಇಲ್ಲಿ ಕರ್ತವ್ಯ ಮಾಡುವುದಿಲ್ಲ ಎಂದು ಆಸ್ಪತ್ರೆಯ ಹೊರ ಭಾಗದಲ್ಲಿ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

ಅಧಿಕಾರಿಗಳ ಭೇಟಿ: ಘಟನೆ ಅರಿತ ತಹಶೀಲ್ದಾರ ಕೀರ್ತಿ ಚಾಲಕ, ಟಿಎಚ್‌ಓ ಡಾ.ಸತೀಶ ತಿವಾರಿ, ಪಿಎಸ್‌ಐ ಸಂಜಯ್ ತಿಪರೆಡ್ಡಿ,ಆಡಳಿತ ವೈದ್ಯಾಧಿಕಾರಿ ಡಾ.ಪರಶುರಾಮ ವಡ್ಡರ, ನಗರಾಭಿವೃದ್ದಿ ಕೋಶದ ಯೋಜನಾಧಿಕಾರಿ ಬಿ.ಎ.ಸೌದಾಗರ, ಪ.ಪಂ ಸಿಓ ಪ್ರಶಾಂತ್ ಸಿ., ಮತ್ತಿತರರು ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ.ಅಲ್ಲದೇ ಆರೋಪಿ ಯಾರೇ ಇರಲಿ ತಾವು ಪ್ರಕರಣ ದಾಖಲಿಸಿದರೆ ಬಂಧಿಸುತ್ತೇವೆ.ಪ್ರತಿಭಟನೆ ಕೈ ಬಿಡಿ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಮನವಿ ಮಾಡಿಕೊಂಡ ನಂತರ ಪ್ರತಿಭಟನೆ ಕೈಬಿಟ್ಟಿದ್ದಾರೆ.ಆದರೆ ಘಟನೆಗೆ ಸಂಬAಧಿಸಿದAತೆ ಯಾವುದೇ ದೂರು ಸಲ್ಲಿಕೆಯಾಗಿಲ್ಲ ಎಂದು ಪಿಎಸೈ ಸಂಜಯ ತಿಪರೆಡ್ಡಿ ಮಾಹಿತಿ ನೀಡಿದ್ದಾರೆ.

Latest News

ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಸನ್ಮಾನ ;                                      ಎರಡು ತಿಂಗಳಲ್ಲಿ ಬಾಕಿ ಹಣ ಬಿಡುಗಡೆಗೆ ಕ್ರಮ-ಸಚಿವ ಜಾರಕಿಹೊಳಿ

ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಸನ್ಮಾನ ; ಎರಡು ತಿಂಗಳಲ್ಲಿ ಬಾಕಿ ಹಣ ಬಿಡುಗಡೆಗೆ ಕ್ರಮ-ಸಚಿವ ಜಾರಕಿಹೊಳಿ

ವಿಜಯಪುರ : ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಸೇರಿದಂತೆ ಗುತ್ತಿಗೆದಾರರ ಬೇಡಿಕೆಗಳನ್ನು ಆದ್ಯತೆ ಮೇರೆಗೆ

ಶಿಕ್ಷಣ,ಆರ್ಥಿಕ  ಸಬಲತೆಗೆ ಒತ್ತು ನೀಡಿ:                                       ಸಮಾಜದ ಋಣ ತೀರಿಸುವ ಕಾರ್ಯ ಮಾಡೋಣ-ಎಂ.ಎಸ್.ಬಡದಾನಿ

ಶಿಕ್ಷಣ,ಆರ್ಥಿಕ ಸಬಲತೆಗೆ ಒತ್ತು ನೀಡಿ: ಸಮಾಜದ ಋಣ ತೀರಿಸುವ ಕಾರ್ಯ ಮಾಡೋಣ-ಎಂ.ಎಸ್.ಬಡದಾನಿ

ಮುದ್ದೇಬಿಹಾಳ : ಹಿಂದುಳಿದ ಸಮಾಜದಲ್ಲಿ ಜನಿಸಿದ್ದರೂ ಶಿಕ್ಷಣದಲ್ಲಿ ನಮ್ಮವರು ಎಂದಿಗೂ ಹಿಂದೆ ಬಿದ್ದಿಲ್ಲ.ಶಿಕ್ಷಣದೊಂದಿಗೆ ಜನಾಂಗವನ್ನು

ಹುಲ್ಲೂರ ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಹುಲ್ಲೂರ ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಮುದ್ದೇಬಿಹಾಳ : ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹುಲ್ಲೂರು ಗ್ರಾಮದ ಎಸ್.ಎನ್.ಡಿ. ನ್ಯಾಷನಲ್ ಪಬ್ಲಿಕ್ ಶಾಲೆಯ

ಅಂಜುಮನ್ ಸಂಸ್ಥೆಯಲ್ಲಿ ನನ್ನ ಮಕ್ಕಳು ಕಲಿಯುತ್ತಾರಾ ?-ನಾಡಗೌಡ ಪ್ರಶ್ನೆ

ಅಂಜುಮನ್ ಸಂಸ್ಥೆಯಲ್ಲಿ ನನ್ನ ಮಕ್ಕಳು ಕಲಿಯುತ್ತಾರಾ ?-ನಾಡಗೌಡ ಪ್ರಶ್ನೆ

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಪವಿತ್ರವಾದ ಸಂಸ್ಥೆಯಾಗಿದೆ. ಅಂಜುಮನ್ ಕಮೀಟಿ ಹದಿನೈದು ವರ್ಷಗಳಿಂದ ಅಭಿವೃದ್ಧಿ

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಾಡಗೌಡರು ಮನೆಗೆ ಹೋಗಲಿ’

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಾಡಗೌಡರು ಮನೆಗೆ ಹೋಗಲಿ’

ಮುದ್ದೇಬಿಹಾಳ : ರಾಜ್ಯಾದ್ಯಂತ ಬರದ ಪರಿಸ್ಥಿತಿ ಇದ್ದರೂ ವಿಜಯಪುರ ಜಿಲ್ಲೆಯಲ್ಲಿ ಕೇವಲ ಮೂರು ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿರುವ ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ ಎಂದು ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡರಿಗೆ ರಾಜೀನಾಮೆ ನೀಡಿ ಮನೆಗೆ ಹೋಗುವಂತೆ ಆಗ್ರಹಿಸಿದ್ದಾರೆ. ಪಟ್ಟಣದ ಮಾರುತಿ ನಗರದಲ್ಲಿರುವ ಫಾರ್ಮ ಹೌಸ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು

ಮುದ್ದೇಬಿಹಾಳ : ನೂತನ ಬಿಇಓ ಎಂ.ಎಸ್.ಬಡದಾನಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ನೂತನ ಬಿಇಓ ಎಂ.ಎಸ್.ಬಡದಾನಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಎಂ.ಎಸ್.ಬಡದಾನಿ ಅವರಿಗೆ ತಾಲ್ಲೂಕಿನ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರು ಸನ್ಮಾನಿಸಿದರು. ಕ.ರಾ.ಪ್ರಾ.ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ರಾಜ್ಯ ಉಪಾದ್ಯಕ್ಷ ಗೋಪಾಲ ಹೂಗಾರ, ಸಿಆರ್‌ಪಿ ಜಿ.ಎಚ್.ಚವ್ಹಾಣ,ಸಂತ ಕನಕದಾಸ ಶಾಲೆಯ ಮುಖ್ಯಗುರು ಎಮ್.ಎನ್.ಯರಝರಿ, ಆರ್.ಎಸ್.ವಾಲೀಕಾರ,ಆರ್.ವಾಯ್.ಪಾಟೀಲ, ,ಎಮ್.ಸಿ.ಕಬಾಡೆ, ಶಂಕರ ಭಾರತಿ ಶಾಲೆಯ ಎಮ್.ಎಮ್.ಮಸ್ಕಿ, ಜ್ಞಾನ ಗಂಗೋತ್ರಿ ಶಾಲೆಯ ಎಂ.ಬಿ.ನದಾಫ, ತಂಗಡಗಿಯ ಚರಲಿಂಗೇಶ್ವರ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ.ಎಲ್.ಮಾದರ , ಸಂಜೀವ ಜಾಲವಾದಿ ಉಪಸ್ಥಿತರಿದ್ದರು.