ಮುದ್ದೇಬಿಹಾಳ,ನಾಲತವಾಡ ಸರಕಾರಿ ಆಸ್ಪತ್ರೆಗಳ ಆಡಳಿತ ವೈದ್ಯರ ವರ್ಗಾವಣೆ

ಮುದ್ದೇಬಿಹಾಳ,ನಾಲತವಾಡ ಸರಕಾರಿ ಆಸ್ಪತ್ರೆಗಳ ಆಡಳಿತ ವೈದ್ಯರ ವರ್ಗಾವಣೆ

ಮುದ್ದೇಬಿಹಾಳ : ಶಾಸಕ ಸಿ.ಎಸ್.ನಾಡಗೌಡರ ಶಿಫಾರಸ್ಸಿನ ಮೇರೆಗೆ ಮುದ್ದೇಬಿಹಾಳ ಹಾಗೂ ನಾಲತವಾಡ ಸಾರ್ವಜನಿಕ ಆಸ್ಪತ್ರೆಗಳ ಆಡಳಿತ ವೈದ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಆದೇಶಿಸಿದ್ದಾರೆ.

ಮುದ್ದೇಬಿಹಾಳ ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾಗಿ ಪ್ರಭಾರ ಅಧಿಕಾರದಲ್ಲಿದ್ದ ಚಿಕ್ಕ ಮಕ್ಕಳ ತಜ್ಞ ವೈದ್ಯ ಡಾ.ಪರಶುರಾಮ ವಡ್ಡರ ಅವರನ್ನು ನಾಲತವಾಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಡಳಿತ ಪ್ರಭಾರ ಹುದ್ದೆಗೆ ವರ್ಗಾಯಿಸಿದ್ದು ಅಲ್ಲಿ ಪ್ರಭಾರ ಹುದ್ದೆಯಲ್ಲಿದ್ದ ಪ್ರಸೂತಿ ತಜ್ಞ ವೈದ್ಯ ಡಾ.ರಂಗನಾಥ ವೈದ್ಯ ಅವರನ್ನು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಕಾಳಗಿ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯುತ್ತಮ ಸೇವೆ ಒದಗಿಸುವ ಮೂಲಕ ರಾಜ್ಯಮಟ್ಟದಲ್ಲಿ ಎರಡು ಬಾರಿ ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿಯನ್ನು ದೊರಕಿಸಿಕೊಟ್ಟಿದ್ದ ಡಾ.ವೈದ್ಯ ಅವರಿಗೆ ಮುದ್ದೇಬಿಹಾಳ ಆಸ್ಪತ್ರೆಯ ಆಡಳಿತ ಪ್ರಭಾರ ವಹಿಸಿದ್ದು ಸರ್ಕಾರಿ ಆಸ್ಪತ್ರೆಯ ಹಲವು ಅವ್ಯವಸ್ಥೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ನೂತನ ಪ್ರಭಾರ ಆಡಳಿತ ವೈದ್ಯಾಧಿಕಾರಿ ರಂಗನಾಥ್ ಅವರು ಶ್ರಮಿಸಬೇಕಿದೆ.

ಅಂತೆಯೇ ಮುದ್ದೇಬಿಹಾಳ ಆಸ್ಪತ್ರೆಯಲ್ಲಿ ತಮಗೆ ದೊರೆತ ಅಲ್ಪ ಅವಧಿಯಲ್ಲಿಯೇ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡ ಚಿಕ್ಕಮಕ್ಕಳ ತಜ್ಞ ವೈದ್ಯರಾದ ಡಾ.ಪರಶುರಾಮ ವಡ್ಡರ ಅವರನ್ನು ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾಗಿ ವರ್ಗಾವಣೆ ಮಾಡಿದ್ದು ಸುಧಾರಣೆಯ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡಿದೆ.

Latest News

ಹುಲ್ಲೂರ ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಹುಲ್ಲೂರ ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಮುದ್ದೇಬಿಹಾಳ : ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹುಲ್ಲೂರು ಗ್ರಾಮದ ಎಸ್.ಎನ್.ಡಿ. ನ್ಯಾಷನಲ್ ಪಬ್ಲಿಕ್ ಶಾಲೆಯ

ಅಂಜುಮನ್ ಸಂಸ್ಥೆಯಲ್ಲಿ ನನ್ನ ಮಕ್ಕಳು ಕಲಿಯುತ್ತಾರಾ ?-ನಾಡಗೌಡ ಪ್ರಶ್ನೆ

ಅಂಜುಮನ್ ಸಂಸ್ಥೆಯಲ್ಲಿ ನನ್ನ ಮಕ್ಕಳು ಕಲಿಯುತ್ತಾರಾ ?-ನಾಡಗೌಡ ಪ್ರಶ್ನೆ

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಪವಿತ್ರವಾದ ಸಂಸ್ಥೆಯಾಗಿದೆ. ಅಂಜುಮನ್ ಕಮೀಟಿ ಹದಿನೈದು ವರ್ಷಗಳಿಂದ ಅಭಿವೃದ್ಧಿ

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ  ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಮುದ್ದೇಬಿಹಾಳ : ಅಂಜುಮನ್ ಇಸ್ಲಾಂ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಕೊಡುವ ಕಾರ್ಯ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ;                                        ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ; ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಮುದ್ದೇಬಿಹಾಳ : ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಜಾಗೃತಿ ಮೂಡಿಸಿದ ಮಹಾನ್ ಸಂತ ಬ್ರಹ್ಮಶ್ರೀ

ಟ್ಯಾಕ್ಸಿ,ಜೀಪ್ ಚಾಲಕರು,ಮಾಲೀಕರ ಸಂಘದಿoದ ಭಾವೈಕ್ಯತೆ ಸಂದೇಶ

ಟ್ಯಾಕ್ಸಿ,ಜೀಪ್ ಚಾಲಕರು,ಮಾಲೀಕರ ಸಂಘದಿoದ ಭಾವೈಕ್ಯತೆ ಸಂದೇಶ

ಮುದ್ದೇಬಿಹಾಳ : ಮುಸ್ಲಿಂರ ಹಬ್ಬಕ್ಕೆ ಹಿಂದೂಗಳು ಕೈಜೋಡಿಸುವುದು,ಹಿಂದೂಗಳ ಹಬ್ಬಕ್ಕೆ ಮುಸ್ಲಿಂ ಬಾಂಧವರು ಸಹಕಾರ ನೀಡುವ ಕಾರ್ಯಗಳಿಂದ ಸಮಾಜದಲ್ಲಿ ಭಾವೈಕ್ಯತೆ ಸೌಹಾರ್ದತೆ ನೆಲೆಸುತ್ತದೆ ಎಂದು ಗಣಿತ ಲೋಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಸವರಾಜ ಗುರವ ಹೇಳಿದರು. ಪಟ್ಟಣದ ಪುರಸಭೆ ಮುಂದೆ ಇರುವ ಗಜಾನನ ಟ್ಯಾಕ್ಸಿ ,ಜೀಪ್ ಚಾಲಕರು,ಮಾಲೀಕರ ಸಂಘದಿoದ ಏರ್ಪಡಿಸಿದ್ದ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾತಿ,ಧರ್ಮಗಳ ಮಧ್ಯೆ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡು ದೇಶದ ಹಲವೆಡೆ ವಿಷಮ ಪರಿಸ್ಥಿತಿ ಸೃಷ್ಟಿಸುವ ಕಾರ್ಯ

ಹಸಿರು,ಅರ್ಧ ಚಂದ್ರ ಮುಸ್ಲಿಂರ ನಿಶಾನೆಯಲ್ಲ-ಲಾಲ್‌ಹುಸೇನ್ ಕಂದಗಲ್

ಹಸಿರು,ಅರ್ಧ ಚಂದ್ರ ಮುಸ್ಲಿಂರ ನಿಶಾನೆಯಲ್ಲ-ಲಾಲ್‌ಹುಸೇನ್ ಕಂದಗಲ್

ಮುದ್ದೇಬಿಹಾಳ : ಹಸಿರು ಬಣ್ಣ,ಅರ್ಧ ಚಂದ್ರಾಕೃತಿ,ನಕ್ಷತ್ರ ಇವು ಮುಸ್ಲಿಂರ ಗುರುತುಗಳಲ್ಲ.ಅದೇ ರೀತಿ ಕೇಸರಿ ಬಣ್ಣವೂ ಹಿಂದೂಗಳದ್ದಲ್ಲ.ಎಲ್ಲ ಬಣ್ಣಗಳು ಯಾವುದೇ ಒಂದು ಸಮುದಾಯಕ್ಕೆ ಸೇರಿಲ್ಲ.ಲಾಂಛನಗಳನ್ನು ನಾವು ಮಾಡಿಕೊಂಡು ನಮ್ಮ ನಮ್ಮಲ್ಲಿ ಬೇಧಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ ಎಂದು ಇಳಕಲ್‌ನ ಖ್ಯಾತ ಪ್ರವಚನಕಾರ ಲಾಲ್‌ಹುಸೇನ್ ಕಂದಗಲ್ ಹೇಳಿದರು. ಪಟ್ಟಣದ ಸಾರಿಗೆ ಘಟಕದಲ್ಲಿ ಬುಧವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವನ ಘನತೆ ಎತ್ತಿ ಹಿಡಿಯುವ ಕೆಲಸವನ್ನು ಪ್ರವಾದಿ