ಐದು ವರ್ಷದ ಮಗು ಸೇರಿ ಮೂವರು ಮಕ್ಕಳಿಗೆ ಕಚ್ಚಿದ ಬೀದಿ ನಾಯಿ..!

ಐದು ವರ್ಷದ ಮಗು ಸೇರಿ ಮೂವರು ಮಕ್ಕಳಿಗೆ ಕಚ್ಚಿದ ಬೀದಿ ನಾಯಿ..!

ಮುದ್ದೇಬಿಹಾಳ : ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮೀತಿ ಮೀರಿದ್ದು ಭಾನುವಾರ ಪಿಲೇಕೆಮ್ಮ ನಗರದ ವಾರ್ಡ ಸಂಖ್ಯೆ 11ರಲ್ಲಿ ಮೂವರು ಮಕ್ಕಳ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ.
ಪಿಲೇಕೆಮ್ಮ ನಗರದ ಐದು ವರ್ಷದ ಉಲ್ಲಾಸ್ ಹಂಡರಗಲ್‌ಗೆ ದೇಹದ ಎದೆಯ ಮೇಲ್ಭಾಗದಲ್ಲಿ ಕಚ್ಚಿದ್ದು ವಾರ್ಡನ ಇನ್ನಿಬ್ಬರು ಮಕ್ಕಳಿಗೂ ಕಚ್ಚಿ ಗಾಯಗೊಳಿಸಿದೆ ಎಂದು ವಾರ್ಡನ ಮುಖಂಡ ಮೊಹ್ಮದಅಜರುದ್ದೀನ ಮೂಲಿಮನಿ ತಿಳಿಸಿದ್ದಾರೆ.

ಬೀದಿ ನಾಯಿ ಕಚ್ಚಿದ ಕೂಡಲೇ ಮಕ್ಕಳನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಾರ್ಡ ನಿವಾಸಿ ಬಸವರಾಜ ಹಂಡರಗಲ್ , ಪಿಲೇಕೆಮ್ಮ ನಗರದೊಳಕ್ಕೆ ಸಂಜೆಯಾಯಿತೆAದರೆ ಮನೆಗೆ ಹೋಗುವುದಕ್ಕೆ ಭಯವಾಗುತ್ತದೆ.ಬೀದಿ ನಾಯಿಗಳ ಹಾವಳಿ ಮೀತಿ ಮೀರಿದ್ದು ಅಧಿಕಾರಿಗಳು ಅವುಗಳನ್ನು ಹಿಡಿದು ಬೇರೆಡೆ ಸಾಗಿಸುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಕಳೆದ ವರ್ಷವೂ ಮಕ್ಕಳ ಮೇಲೆ ಬೀದಿ ನಾಯಿಗಳು ಹಾವಳಿ ಮಾಡಿದ್ದವು.ಆಗ ಅಧಿಕಾರಿಗಳ ಗಮನಕ್ಕೆ ತಂದಾಗ ಬೀದಿ ನಾಯಿಗಳನ್ನು ಬೇರೆ ಕಡೆಗೆ ಹಿಡಿದು ಸಾಗಿಸುವುದಾಗಿ ಭರವಸೆ ನೀಡಿದ್ದ ಪುರಸಭೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ಸಣ್ಣ ಸಣ್ಣ ಮಕ್ಕಳ ಮೇಲೆ ನಾಯಿಗಳು ಕಚ್ಚುತ್ತಾ ತಿರುಗಾಡುತ್ತಿವೆ ಎಂದು ಹರಿಹಾಯ್ದರು.

ಪಿಲೇಕೆಮ್ಮ ನಗರಕ್ಕೆ ಯಾರಾದರೂ ಕೆಲಸ ಮುಗಿಸಿಕೊಂಡು ತಡರಾತ್ರಿ ಒಬ್ಬರೇ ಮನೆಗೆ ಬರುವಂತಿಲ್ಲ.ಬೀದಿ ನಾಯಿಗಳು ಓಣಿಯೊಳಗೆ ಹೋಗುವುದಕ್ಕೆ ಬಿಡುವುದಿಲ್ಲ ಎಂದು ಮುಖಂಡ ಮೊಹ್ಮದ ಅಜರುದ್ದೀನ್ ತಿಳಿಸಿದರು.ಕೂಡಲೇ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಪಿಲೇಕೆಮ್ಮ ನಗರದ ನಿವಾಸಿಗಳು ಆಗ್ರಹಿಸಿದ್ದಾರೆ.

Latest News

ಹುಲ್ಲೂರ ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಹುಲ್ಲೂರ ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಮುದ್ದೇಬಿಹಾಳ : ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹುಲ್ಲೂರು ಗ್ರಾಮದ ಎಸ್.ಎನ್.ಡಿ. ನ್ಯಾಷನಲ್ ಪಬ್ಲಿಕ್ ಶಾಲೆಯ

ಅಂಜುಮನ್ ಸಂಸ್ಥೆಯಲ್ಲಿ ನನ್ನ ಮಕ್ಕಳು ಕಲಿಯುತ್ತಾರಾ ?-ನಾಡಗೌಡ ಪ್ರಶ್ನೆ

ಅಂಜುಮನ್ ಸಂಸ್ಥೆಯಲ್ಲಿ ನನ್ನ ಮಕ್ಕಳು ಕಲಿಯುತ್ತಾರಾ ?-ನಾಡಗೌಡ ಪ್ರಶ್ನೆ

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಪವಿತ್ರವಾದ ಸಂಸ್ಥೆಯಾಗಿದೆ. ಅಂಜುಮನ್ ಕಮೀಟಿ ಹದಿನೈದು ವರ್ಷಗಳಿಂದ ಅಭಿವೃದ್ಧಿ

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ  ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಮುದ್ದೇಬಿಹಾಳ : ಅಂಜುಮನ್ ಇಸ್ಲಾಂ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಕೊಡುವ ಕಾರ್ಯ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ;                                        ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ; ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಮುದ್ದೇಬಿಹಾಳ : ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಜಾಗೃತಿ ಮೂಡಿಸಿದ ಮಹಾನ್ ಸಂತ ಬ್ರಹ್ಮಶ್ರೀ

ಟ್ಯಾಕ್ಸಿ,ಜೀಪ್ ಚಾಲಕರು,ಮಾಲೀಕರ ಸಂಘದಿoದ ಭಾವೈಕ್ಯತೆ ಸಂದೇಶ

ಟ್ಯಾಕ್ಸಿ,ಜೀಪ್ ಚಾಲಕರು,ಮಾಲೀಕರ ಸಂಘದಿoದ ಭಾವೈಕ್ಯತೆ ಸಂದೇಶ

ಮುದ್ದೇಬಿಹಾಳ : ಮುಸ್ಲಿಂರ ಹಬ್ಬಕ್ಕೆ ಹಿಂದೂಗಳು ಕೈಜೋಡಿಸುವುದು,ಹಿಂದೂಗಳ ಹಬ್ಬಕ್ಕೆ ಮುಸ್ಲಿಂ ಬಾಂಧವರು ಸಹಕಾರ ನೀಡುವ ಕಾರ್ಯಗಳಿಂದ ಸಮಾಜದಲ್ಲಿ ಭಾವೈಕ್ಯತೆ ಸೌಹಾರ್ದತೆ ನೆಲೆಸುತ್ತದೆ ಎಂದು ಗಣಿತ ಲೋಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಸವರಾಜ ಗುರವ ಹೇಳಿದರು. ಪಟ್ಟಣದ ಪುರಸಭೆ ಮುಂದೆ ಇರುವ ಗಜಾನನ ಟ್ಯಾಕ್ಸಿ ,ಜೀಪ್ ಚಾಲಕರು,ಮಾಲೀಕರ ಸಂಘದಿoದ ಏರ್ಪಡಿಸಿದ್ದ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾತಿ,ಧರ್ಮಗಳ ಮಧ್ಯೆ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡು ದೇಶದ ಹಲವೆಡೆ ವಿಷಮ ಪರಿಸ್ಥಿತಿ ಸೃಷ್ಟಿಸುವ ಕಾರ್ಯ

ಹಸಿರು,ಅರ್ಧ ಚಂದ್ರ ಮುಸ್ಲಿಂರ ನಿಶಾನೆಯಲ್ಲ-ಲಾಲ್‌ಹುಸೇನ್ ಕಂದಗಲ್

ಹಸಿರು,ಅರ್ಧ ಚಂದ್ರ ಮುಸ್ಲಿಂರ ನಿಶಾನೆಯಲ್ಲ-ಲಾಲ್‌ಹುಸೇನ್ ಕಂದಗಲ್

ಮುದ್ದೇಬಿಹಾಳ : ಹಸಿರು ಬಣ್ಣ,ಅರ್ಧ ಚಂದ್ರಾಕೃತಿ,ನಕ್ಷತ್ರ ಇವು ಮುಸ್ಲಿಂರ ಗುರುತುಗಳಲ್ಲ.ಅದೇ ರೀತಿ ಕೇಸರಿ ಬಣ್ಣವೂ ಹಿಂದೂಗಳದ್ದಲ್ಲ.ಎಲ್ಲ ಬಣ್ಣಗಳು ಯಾವುದೇ ಒಂದು ಸಮುದಾಯಕ್ಕೆ ಸೇರಿಲ್ಲ.ಲಾಂಛನಗಳನ್ನು ನಾವು ಮಾಡಿಕೊಂಡು ನಮ್ಮ ನಮ್ಮಲ್ಲಿ ಬೇಧಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ ಎಂದು ಇಳಕಲ್‌ನ ಖ್ಯಾತ ಪ್ರವಚನಕಾರ ಲಾಲ್‌ಹುಸೇನ್ ಕಂದಗಲ್ ಹೇಳಿದರು. ಪಟ್ಟಣದ ಸಾರಿಗೆ ಘಟಕದಲ್ಲಿ ಬುಧವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವನ ಘನತೆ ಎತ್ತಿ ಹಿಡಿಯುವ ಕೆಲಸವನ್ನು ಪ್ರವಾದಿ