ಈಜುಕೊಳವಾಯ್ತು ಹುನಗುಂದ ಸಾರ್ವಜನಿಕ ಆಸ್ಪತ್ರೆ! ಕಾರಣವೇನು?

ಈಜುಕೊಳವಾಯ್ತು ಹುನಗುಂದ ಸಾರ್ವಜನಿಕ ಆಸ್ಪತ್ರೆ! ಕಾರಣವೇನು?

ಹುನಗುಂದ: ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯೊಳಗೆ ನೀರು ನುಗ್ಗಿ ರೋಗಿಗಳು ಪರದಾಡಿ ಘಟನೆ ನಡೆಯಿತು.

ಆಸ್ಪತ್ರೆಗೆ ಮೂಲಸೌಲಭ್ಯ ನೀಡುವಂತೆ ಆಗ್ರಹಿಸಿ ಕರವೇ ತಾಲೂಕು ಅಧ್ಯಕ್ಷ ರೋಹಿತ ಬಾರಕೇರ ಮಾತನಾಡಿ, ಕಳೆದ ಐದು ವರ್ಷದಿಂದ ಪ್ರತಿ ಬಾರಿ ಮಳೆಯಾದಾಗ ಆಸ್ಪತ್ರೆಗೆಯ ಹಿಂದುಗಡೆಯ ಲೇಔಟ್ ಮತ್ತು ಜಮೀನುಗಳ ನೀರು, ಅವೈಜ್ಞಾನಿಕ ಚರಂಡಿಯಿಂದ ಆಸ್ಪತ್ರೆಯ ವಿವಿಧ ವಾರ್ಡ್ಗಳಲ್ಲಿ ನುಗ್ಗಿ ಮತ್ತು ನೀರಿನ ಬಸಿಸೆಲೆಯಿಂದ ನೀರು ನಿಂತು ಆಸ್ಪತ್ರೆಯು ಈಜುಗೊಳದಂತೆ ಆಗಿದ್ದು, ಆಸ್ಪತ್ರೆಯಲ್ಲಿ ನೀರು ನಿಂತಿದ್ದರಿಂದ ರೋಗಿಗಳಿಗೆ ವೈದ್ಯರು ಚಿಕಿತ್ಸೆಯನ್ನು ನೀಡಲು ತೀವ್ರ ತೊಂದರೆಯಾಗುತ್ತಿದ್ದು ಸಾಕಷ್ಟು ಬಾರಿ ಕರವೇ ಸಂಘಟಯ ಮೂಲಕ ಆರೋಗ್ಯ ಇಲಾಖೆಯ ಮೇಲಾಧಿಕಾರಿಗಳಿಗೆ ಶಾಸಕರಿಗೆ, ಸಚಿವರಿಗೆ ಮನವಿ ಮೂಲಕ ತಿಳಿಸಿದರು.

ರೋಗಿಗಳಿಗೆ ಹಾಗೂ ವೈದ್ಯರಿಗೆ ತೊಂದರೆಯಾಗುತ್ತಿದ್ದು, ನೀರು ನಿಲ್ಲದಂತೆ ಕ್ರಮವಹಿಸಬೇಕು. ಇಲ್ಲವಾದರೆ ಉಗ್ರವಾದ ಹೋರಾಟವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರ ಘಟಕ ಅಧ್ಯಕ್ಷ ಹುಸೇನ ಸಂದಿಮನಿ ಮಾತನಾಡಿ, ಮಳೆಯ ನೀರು ಆಸ್ಪತ್ರೆಯಲ್ಲಿ ನೀರು ನುಗ್ಗಿರುವದರಿಂದ ಆಸ್ಪತ್ರೆಯ ತುರ್ತುನಿಗಾ ಘಟಕ, ಔಷಧಿ ವಿತರಣಾ ಕೇಂದ್ರ, ರಕ್ತ ಗುಂಪು ತಪಾಸಣೆ ಕೇಂದ್ರ, ಎಕ್ಸರೇ ರೂಮ್, ಎಂ.ಎನ್.ಆರ್.ಸಿ ಘಟಕ, ಪಿಎಚ್‌ಸಿ ಕೇಂದ್ರ ಸ್ಕ್ಯಾನಿಂಗ್ ಸೆಂಟರ್, ಆಯುಷ್ಯಾನ್ ಕೇಂದ್ರ ಸೇರಿದಂತೆ ಅನೇಕ ಕೇಂದ್ರಗಳಿಗೆ ನೀರು ಆವರಿಸಿರುವದರಿಂದ ರೋಗಿಗಳು ಪರದಾಡುವಂತಾಗಿದೆ ಕೂಡಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೀರು ನಿಲ್ಲದಂತೆ ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಕರವೇ ಪ್ರಧಾನ ಕಾರ್ಯದರ್ಶಿ ಜಹೀರ ಸಂಗಮಕರ, ನವೀದ ಸಂಧಿಮನಿ ಸೇರಿದಂತೆ ಇತರರು ಇದ್ದರು.

Latest News

ತಮ್ಮ ಸ್ವಂತ ರಾಜಕೀಯ ಲಾಭಕ್ಕೆ ಗುತ್ತಿಗೆದಾರರಿಂದ ಸಹಾಯ-ಸಿ.ಎಸ್.ನಾಡಗೌಡ

ತಮ್ಮ ಸ್ವಂತ ರಾಜಕೀಯ ಲಾಭಕ್ಕೆ ಗುತ್ತಿಗೆದಾರರಿಂದ ಸಹಾಯ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಕೆಲವು ಗುತ್ತಿಗೆದಾರರು ಸಹಾಯ ಮಾಡುವುದು ತಮ್ಮ ರಾಜಕೀಯ ಲಾಭಕ್ಕೋಸ್ಕರ ಮಾಡುತ್ತಾರೆಯೇ ಹೊರತು

ಹುಲ್ಲೂರ ಎಸ್‌ಎನ್‌ಡಿ ಪಬ್ಲಿಕ್ ಸ್ಕೂಲ್‌ಗೆ ಶೇ.100ರಷ್ಟು ಫಲಿತಾಂಶ

ಹುಲ್ಲೂರ ಎಸ್‌ಎನ್‌ಡಿ ಪಬ್ಲಿಕ್ ಸ್ಕೂಲ್‌ಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ : ತಾಲೂಕಿನ ಹುಲ್ಲೂರ ಗ್ರಾಮದ ಎಸ್.ಎನ್.ಡಿ ನ್ಯಾಷನಲ್ ಪಬ್ಲಿಕ್ ಶಾಲೆಗೆ 2025-26ನೇ ಸಾಲಿನಲ್ಲಿ

ಎಸ್.ಎಸ್.ಎಲ್.ಸಿ ಪರೀಕ್ಷೆ:                                         ಕವಡಿಮಟ್ಟಿಯ ಆರ್ಚ್ ಏಂಜಲ್ ಶಾಲೆಗೆ ಶೇ.100ರಷ್ಟು ಫಲಿತಾಂಶ

ಎಸ್.ಎಸ್.ಎಲ್.ಸಿ ಪರೀಕ್ಷೆ: ಕವಡಿಮಟ್ಟಿಯ ಆರ್ಚ್ ಏಂಜಲ್ ಶಾಲೆಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ : ತಾಲೂಕಿನ ಸರೂರ ಕ್ರಾಸ್ ಬಳಿ ಇರುವ ಕವಡಿಮಟ್ಟಿಯ ದಿ ಆರ್ಚ್ ಏಂಜಲ್

ಉತ್ತಮ ಕಾರ್ಯನಿರ್ವಹಣೆ :                                              KRIDL ಇಇ ಆನಂದಸ್ವಾಮಿ ಅವರಿಗೆ ಪ್ರಶಸ್ತಿ

ಉತ್ತಮ ಕಾರ್ಯನಿರ್ವಹಣೆ : KRIDL ಇಇ ಆನಂದಸ್ವಾಮಿ ಅವರಿಗೆ ಪ್ರಶಸ್ತಿ

ಮುದ್ದೇಬಿಹಾಳ : ವಿಜಯಪುರದ ಕೆ.ಆರ್.ಐ.ಡಿ.ಎಲ್ ಇಲಾಖೆಯ ಇಇ ಆನಂದಸ್ವಾಮಿ ಅವರು ಇಲಾಖೆಯಲ್ಲಿ ಸಲ್ಲಿಸುತ್ತಿರುವ ಉತ್ತಮ

ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಗೆ ಆನಂದ ಪೂಜಾರಿ ನೇಮಕ

ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಗೆ ಆನಂದ ಪೂಜಾರಿ ನೇಮಕ

ಮುದ್ದೇಬಿಹಾಳ : ಇಲ್ಲಿನ ಯುವ ಉದ್ಯಮಿ,ಕಾಂಗ್ರೆಸ್ ಪಕ್ಷದ ಮುಖಂಡ ಆನಂದ ಪೂಜಾರಿ ಅವರನ್ನು ಕಾಂಗ್ರೆಸ್ ಪಕ್ಷದ ಎಸ್.ಟಿ.ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರ ಶಿಫಾರಸ್ಸಿನ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮೀತಿ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಅಧ್ಯಕ್ಷ ಎಂ.ವಿಜಯನಾಯಕ ನೇಮಕ ಮಾಡಿ ಆದೇಶಿಸಿದ್ದಾರೆ.

ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ ಯಶಸ್ವಿಗೊಳಿಸಿ-ದಯಾನಂದಪುರಿ ಸ್ವಾಮೀಜಿ

ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ ಯಶಸ್ವಿಗೊಳಿಸಿ-ದಯಾನಂದಪುರಿ ಸ್ವಾಮೀಜಿ

ಮುದ್ದೇಬಿಹಾಳ : ದೇವಾಂಗ(ನೇಕಾರ)ಸಮುದಾಯದ ಸಂಘಟನೆ,ಜಾಗೃತಿಗಾಗಿ ಅಖಿಲ ಭಾರತ ದೇವಾಂಗ ಬೃಹತ್ ಜನಜಾಗೃತಿ ಸಮಾವೇಶ ಹಾಗೂ ದಯಾನಂದಪುರಿ ಸ್ವಾಮೀಜಿಗಳ 36ನೇ ಪಟ್ಟಾಭಿಷೇಕ ಮಹೋತ್ಸವವನ್ನು ಮೇ.8 ಹಾಗೂ 9 ರಂದು ಬಾದಾಮಿ ತಾಲ್ಲೂಕು ಬನಶಂಕರಿ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ದೇವಾಂಗ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಚಿತ್ತರಗಿ ಹೇಳಿದರು. ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಬುಧವಾರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಹಂಪಿ ಹೇಮಕೂಟ ಶ್ರೀ ಗಾಯತ್ರಿಪೀಠದ