ದೊಡ್ಡಬಳ್ಳಾಪುರ; ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಪ್ರತಿಷ್ಟಾಪಿಸಿದ್ದ ಗಣೇಶ ಮೂರ್ತಿಯನ್ನು ನೋಡಲು ತೆರಳಿದ್ದ ಬಾಲಕಿ ವಿದ್ಯುತ್ ಸ್ಪರ್ಶಿಸಿ ಸಾವನಪ್ಪಿರುವ ದುರ್ಘಟನೆ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಸಂಭವಿಸಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಮೃತ ಬಾಲಕಿಯನ್ನು ಶ್ರೀನಿವಾಸ್ ಎನ್ನುವವರ ಪುತ್ರಿ 13 ವರ್ಷದ ಚೇತನ ಎಂದು ಗುರುತಿಸಲಾಗಿದೆ.
ಭಾನುವಾರ ಬೆಳಗ್ಗೆ ಗಣೇಶ ಮೂರ್ತಿಯನ್ನು ನೋಡಲು ತೆರಳಿದ್ದ ವೇಳೆ, ವಿದ್ಯುತ್ ಅಲಂಕಾರ ಮಾಡಲು ಅಳವಡಿಸಿದ್ದ ವೈರ್ ಸ್ಕಿನ್ ಔಟ್ ಆಗಿದ್ದು, ಬಾಲಕಿ ಚೈತ್ರ ಗಮನಿಸದೆ ತುಳಿದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ತಿಳಿಸಿದ್ದಾರೆ.
ಕೂಡಲೇ ಬಾಲಕಿಯನ್ನು ಯಲಹಂಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕುಡಿತ ಮತ್ತಿನಲ್ಲಿ ಹೆತ್ತಮ್ಮನ ಕುತ್ತಿಗೆಗೆ ಚುಚ್ಚಿ ಕೊಲೆಗೈದ ಪಾಪಿ ಮಗ..!
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.