ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ ಯಶಸ್ವಿಗೊಳಿಸಿ-ದಯಾನಂದಪುರಿ ಸ್ವಾಮೀಜಿ

ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ ಯಶಸ್ವಿಗೊಳಿಸಿ-ದಯಾನಂದಪುರಿ ಸ್ವಾಮೀಜಿ

ಮುದ್ದೇಬಿಹಾಳ : ದೇವಾಂಗ(ನೇಕಾರ)ಸಮುದಾಯದ ಸಂಘಟನೆ,ಜಾಗೃತಿಗಾಗಿ ಅಖಿಲ ಭಾರತ ದೇವಾಂಗ ಬೃಹತ್ ಜನಜಾಗೃತಿ ಸಮಾವೇಶ ಹಾಗೂ ದಯಾನಂದಪುರಿ ಸ್ವಾಮೀಜಿಗಳ 36ನೇ ಪಟ್ಟಾಭಿಷೇಕ ಮಹೋತ್ಸವವನ್ನು ಮೇ.8 ಹಾಗೂ 9 ರಂದು ಬಾದಾಮಿ ತಾಲ್ಲೂಕು ಬನಶಂಕರಿ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ದೇವಾಂಗ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಚಿತ್ತರಗಿ ಹೇಳಿದರು.

ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಬುಧವಾರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಹಂಪಿ ಹೇಮಕೂಟ ಶ್ರೀ ಗಾಯತ್ರಿಪೀಠದ ಜಗದ್ಗುರು ದಯಾನಂದಪುರಿ ಸ್ವಾಮೀಜಿಗಳು ಆಗಮಿಸಿದ್ದ ವೇಳೆ ಅವರು ಸಮಾಜದ ಬಾಂಧವರ ಸಭೆಯಲ್ಲಿ ಮಾತನಾಡಿದರು. ಹಂಪಿಯಲ್ಲಿ ದೇವಾಂಗ ಸಮಾಜದ ಮೂಲಮಠವಿದ್ದು ತಮಿಳುನಾಡಿನ ತ್ರಿಮೂರ್ತಿ ಮಲೈನಲ್ಲಿ,ಬಾದಾಮಿಯ ಬನಶಂಕರಿ ಕ್ಷೇತ್ರದಲ್ಲಿ,ವಿಜಾಪುರದಲ್ಲಿ ಮತ್ತು ನೆಲಮಂಗಲದ ಕೆಂಪಲಿAಗನಹಳ್ಳಿಯಲ್ಲಿ ಶ್ರೀಗಳು ಗಾಯತ್ರಿಪೀಠದ ಶಾಖಾ ಮಠಗಳನ್ನು ಸ್ಥಾಪಿಸಿ ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದರು.

ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ,ಪತ್ರಕರ್ತ ಶಂಕರ ಈ.ಹೆಬ್ಬಾಳ ಮಾತನಾಡಿ, ಹಂಪಿ ಹೇಮಕೂಟ ಗಾಯತ್ರಿಪೀಠ ಮಹಾಸಂಸ್ಥಾನ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ದೇವಾಂಗ ಸಂಘದ ಸಹಯೋಗದಲ್ಲಿ ಅಖಿಲ ಭಾರತ ಮಟ್ಟದ ದೇವಾಂಗ ಜನಜಾಗೃತಿ ಸಮಾವೇಶ ಹಾಗೂ ದಯಾನಂದಪುರಿ ಸ್ವಾಮೀಜಿಗಳ 36ನೇ ಪಟ್ಟಾಭಿಷೇಕ ಮಹೋತ್ಸವನ್ನು ಸಂಘಟಿಸಿದ್ದಾರೆ.ರಾಷ್ಟಾçದಾದ್ಯOತ ಇರುವ ದೇವಾಂಗ ಸಮಾಜ ಬಾಂಧವರನ್ನು ಒಂದೆಡೆ ಸೇರಿಸಿ ನಮ್ಮ ಸಂಘಟನಾ ಶಕ್ತಿಯನ್ನು ತೋರಿಸುವ ಉದ್ದೇಶದಿಂದ ಹಾಗೂ ರಾಜಕೀಯ,ಆರ್ಥಿಕ,ಶೈಕ್ಷಣಿ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಹಿಂದುಳಿದಿರುವ ನಮ್ಮ ಸಮಾಜಕ್ಕೆ ಶಕ್ತಿ ತುಂಬಲು ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು.

ಸಭೆಯ ದಿವ್ಯ ಸಾನಿಧ್ಯ ವಹಿಸಿದ್ದ ಹಂಪಿ ಹೇಮಕೂಟ ಗಾಯತ್ರಿ ಮಹಾಸಂಸ್ಥಾನ ಗುರುಪೀಠದ ದಯಾನಂದಪುರಿ ಸ್ವಾಮೀಜಿಗಳು ಮಾತನಾಡಿ,ಮಠದಿಂದ ಈಗಾಗಲೇ ಕೆಂಪಲಿOಗನಹಳ್ಳಿ ಶಾಖಾಮಠದ ಆವರಣದಲ್ಲಿ ಒಂದು ಶಾಲಾ ಕಟ್ಟಡ,ಬೃಹತ್ ಕಲ್ಯಾಣಮಂಟಪ ನಿರ್ಮಿಸಲಾಗಿದೆ.ದೇವಾಂಗ ಸಂಘವು ಸಮಾಝದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡುತ್ತ ಬಂದಿದೆ.ಇದಲ್ಲದೇ ಹಲವಾರು ಕ್ಷೇತ್ರಗಳಲ್ಲಿ ಹಿಂದುಳಿದಿರುವ ನಮ್ಮ ಸಮಾಜಕ್ಕೆ ಮತ್ತು ನೇಕಾರಿಕೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವ ಸಮಾಜದ ಬಾಂಧವರಿಗೆ ಆಧುನಿಕ ತಂತ್ರಜ್ಞಾನದಿAದ ಆಗುತ್ತಿರುವ ಹಲವಾರು ತೊಂದರೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಬೃಹತ್ ಸಂಘಟನೆಯ ಸಮಾವೇಶ ಆಯೋಜಿಸಲಾಗುತ್ತಿದೆ.ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳು,ಉಪ ಮುಖ್ಯಮಂತ್ರಿಗಳು,ಅನ್ಯ ರಾಜ್ಯದ ಪೀಠಾಧಿಪತಿಗಳು,ದೇವಾಂಗ ಸಮಾಜದ ಅಧ್ಯಕ್ಷರು,ಮುಖಂಡರು ಆಗಮಿಸುತ್ತಿದ್ದಾರೆ.ಈ ಸಮಾವೇಶಕ್ಕೆ ನಾಡಿನ ಮೂಲೆ ಮೂಲೆಯಲ್ಲಿರುವ ದೇವಾಂಗ ಸಮಾಜದ ಕುಲಬಾಂಧವರು ಆಗಮಿಸಿ ಸಮಾವೇಶ ಯಶಸ್ವಿಗೆ ಶ್ರಮಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಹಂಪಿ ಹೇಮಕೂಟ ಗಾಯತ್ರಿ ಪೀಠದ ಟ್ರಸ್ಟಿ ನಾಗೇಶ ಭಾವಿಕಟ್ಟಿ, ಸಮಾಜದ ಮುಖಂಡರಾದ ಮುತ್ತಣ್ಣ ಪ್ಯಾಟಿಗೌಡರ,ಸಿದ್ದಣ್ಣ ಚಿತ್ತರಗಿ,ಸಂಗಣ್ಣ ಡಂಬಳ,ಉಮ್ಮಣ್ಣ ಹೆಬ್ಬಾಳ, ಅಮರೀಶ ಡಂಬಳ,ನಾಗಪ್ಪ ಅಗಸಬಾಳ,ಉದಯ ಕುಪ್ಪಸ್ತ,ಯುವ ಘಟಕದ ಅಧ್ಯಕ್ಷ ಶಿವಶಂಕರ ಪ್ಯಾಟಿಗೌಡರ,ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಪರವಾಗಿ ಶ್ರೀಗಳನ್ನು ಸನ್ಮಾನಿಸಲಾಯಿತು.ಸಂಘದ ಅಧ್ಯಕ್ಷ ಶಂಕರ ಹೆಬ್ಬಾಳ, ಉಪಾಧ್ಯಕ್ಷ ರಮೇಶ ಹೆಬ್ಬಾಳ,ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯಲಕ್ಷಿö್ಮÃ ಪ್ಯಾಟಿಗೌಡರ,ನಿರ್ದೇಶಕರಾದ ಶ್ರೀಕಾಂತ ಹೆಬ್ಬಾಳ,ದ್ಯಾವಪ್ಪ ಹುಣಶ್ಯಾಳ ಸೇರಿದಂತೆ ಹಲವರು ಇದ್ದರು.

Latest News

ಬಸರಕೋಡ ಪಿಕೆಪಿಎಸ್‌ನ 51ನೇ ವಾರ್ಷಿಕ ಸಭೆ:                       ಮಾಜಿ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ದಾವೆಗೆ ತೀರ್ಮಾನ-ಎಚ್.ಬಿ.ಮೇಟಿ

ಬಸರಕೋಡ ಪಿಕೆಪಿಎಸ್‌ನ 51ನೇ ವಾರ್ಷಿಕ ಸಭೆ: ಮಾಜಿ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ದಾವೆಗೆ ತೀರ್ಮಾನ-ಎಚ್.ಬಿ.ಮೇಟಿ

ಮುದ್ದೇಬಿಹಾಳ : ನಮ್ಮ ಸಂಘದ ಹಿಂದಿನ ಕಾರ್ಯದರ್ಶಿ ಮಾಡಿದ ಅವ್ಯವಹಾರದಿಂದ ಸಂಘಕ್ಕೆ ಲಾಭಾಂಶ ಕಡಿಮೆಯಾಗಿದೆ.ಅವರ

16.17 ಲಕ್ಷ ರೂ.ಲಾಭ :                                                     ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

16.17 ಲಕ್ಷ ರೂ.ಲಾಭ : ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

ಮುದ್ದೇಬಿಹಾಳ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿoದ ಸನ್ 2025-26 ನೇ ಸಾಲಿನಲ್ಲಿ

ಪಿಲೇಕೆಮ್ಮ ನಗರದ ನಿವಾಸಿಗಳ ಮನವಿ:                                        ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ,ಉತಾರೆ ಪೂರೈಸಲು ಆಗ್ರಹ

ಪಿಲೇಕೆಮ್ಮ ನಗರದ ನಿವಾಸಿಗಳ ಮನವಿ: ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ,ಉತಾರೆ ಪೂರೈಸಲು ಆಗ್ರಹ

ಮುದ್ದೇಬಿಹಾಳ : ಸುಮಾರು 30-40 ವರ್ಷದಿಂದ ಪಟ್ಟಣದ ಪಿಲೆಕೆಮ್ಮ ನಗರದಲ್ಲಿ ವಾಸವಿರುವ ನಿವಾಸಿಗಳಿಗೆ ಸರ್ಕಾರದಿಂದ

ನಾಗರಬೆಟ್ಟ ಏತ ನೀರಾವರಿ ಯೋಜನೆ:                                ಅ.5ರೊಳಗೆ ಬಾಕಿ ಕೆಲಸ ಪೂರ್ಣಗೊಳಿಸದಿದ್ದರೆ ಉಗ್ರ ಹೋರಾಟ-ಶಾಂತಗೌಡ ಪಾಟೀಲ್

ನಾಗರಬೆಟ್ಟ ಏತ ನೀರಾವರಿ ಯೋಜನೆ: ಅ.5ರೊಳಗೆ ಬಾಕಿ ಕೆಲಸ ಪೂರ್ಣಗೊಳಿಸದಿದ್ದರೆ ಉಗ್ರ ಹೋರಾಟ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಗೆ 2018ರಲ್ಲಿಯೇ ಟೆಂಡರ್ ಆಗಿದ್ದು ಕಳೆದ ಎಂಟು

ಅಧ್ಯಕ್ಷ ಬಿ.ಎಂ.ಇಸ್ಲಾoಪೂರ ಹೇಳಿಕೆ:                                ಬಸವಜ್ಯೋತಿ ಪತ್ತಿನ ಸಹಕಾರ ಸಂಘಕ್ಕೆ 13.56 ಲಕ್ಷ ರೂ.ಲಾಭ

ಅಧ್ಯಕ್ಷ ಬಿ.ಎಂ.ಇಸ್ಲಾoಪೂರ ಹೇಳಿಕೆ: ಬಸವಜ್ಯೋತಿ ಪತ್ತಿನ ಸಹಕಾರ ಸಂಘಕ್ಕೆ 13.56 ಲಕ್ಷ ರೂ.ಲಾಭ

ಮುದ್ದೇಬಿಹಾಳ : ಸನ್ 2025-26ನೇ ಸಾಲಿನ ವರದಿ ವರ್ಷದಲ್ಲಿ ಸಂಘದ ಆದಾಯ ಒಟ್ಟು 1.04 ಕೋಟಿ ರೂ.ಗಳಷ್ಟಾಗಿದ್ದು ಖರ್ಚು-ವೆಚ್ಚ ಕಳೆದ ಒಟ್ಟು 13.56 ಲಕ್ಷ ರೂ.ಲಾಭ ಗಳಿಸಿದೆ ಎಂದು ಶ್ರೀ ಬಸವಜ್ಯೋತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಂ.ಇಸ್ಲಾoಪೂರ ಹೇಳಿದರು. ಪಟ್ಟಣದ ಬಸವ ಗಾರ್ಡನ್ ಮುಂಭಾಗದಲ್ಲಿ ಗುರುವಾರ ನಡೆದ ಸಂಘದ 18 ನೇ ವಾರ್ಷಿಕ ಸರ್ವ ಸಾಧಾರಣ ಮಹಾಸಭೆಯನ್ನುದ್ದೇಶಿ ಅವರು ಮಾತನಾಡಿದರು. ಸಮಾಜದ ಹಾಗೂ ಸಂಘದ ಹಿರಿಯರ ಪರಿಶ್ರಮದ ಫಲದಿಂದ

ಬರ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಲಿ:                              ರೈತರ ಸಾಲ,ಬಡ್ಡಿ ಮನ್ನಾಕ್ಕೆ ಆಗ್ರಹ-ಬಿ.ಕೆ.ಬಿರಾದಾರ

ಬರ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಲಿ: ರೈತರ ಸಾಲ,ಬಡ್ಡಿ ಮನ್ನಾಕ್ಕೆ ಆಗ್ರಹ-ಬಿ.ಕೆ.ಬಿರಾದಾರ

ಮುದ್ದೇಬಿಹಾಳ : ಪ್ರಕೃತಿ ವಿಕೋಪ ಹಾಗೂ ತೀವ್ರ ಬರಪೀಡಿತ ಸಂದರ್ಭದಲ್ಲಿ ರೈತರಿಗೆ ನೆರವು ಒದಗಿಸುವ ಕಾರ್ಯಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ ಆಗ್ರಹಿಸಿದರು. ಪಟ್ಟಣದ ಮುದ್ದೇಬಿಹಾಳ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ(ಪಿಕಾರ್ಡ್)ದ ಬ್ಯಾಂಕ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ 62ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಕಳೆದ 3 ವರ್ಷಗಳಿಂದ ನಮ್ಮ ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಸತತ ಮೂರುಬಾರಿ ಜಿಲ್ಲೆಗೆ ಪ್ರಥಮ