ಕೊಪ್ಪಳ: ಟ್ಯಾಕ್ಟರ್ ಮೂಲಕ ಗಣಪನ ಮೂರ್ತಿ ಸಾಗಿಸುತ್ತಿದ್ದ ವೇಳೆ ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಪ್ಪಳದ ಕೋಳೂರು ಕ್ರಾಸ್ ಬಳಿ ಸಂಭವಿಸಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಗಣೇಶ ಚತುರ್ಥಿಯ ಪ್ರಯುಕ್ತ ಇಂದು ಬೆಳಗ್ಗೆ ಕೊಪ್ಪಳ ನಗರದಿಂದ ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮಕ್ಕೆ ಹೋಗುವಾಗ ತಾಲೂಕಿನ ಕೋಳೂರು ಕ್ರಾಸ್ ಬಳಿ ಈ ಘಟನೆ ನಡೆದಿದೆ. ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಟ್ಯಾಕ್ಟರ್ ಗೆ ಹಿಂಬದಿಯಿಂದ ಲಾರಿ ಬಂದು ಗುದ್ದಿದ ಪರಿಣಾಮ ಗಣೇಶನ ಮೂರ್ತಿಯೂ ನೆಲಕ್ಕುರುಳಿದೆ. ಅದೇ ಟ್ರ್ಯಾಕ್ಟರ್ ನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಛೇ..ಅಶ್ಲೀಲ ವಿಡಿಯೋ… ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅನುಷಾ!
ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭೀಕರ ಅಪಘಾತ: ದಾರುಣವಾಗಿ ಮೃತಪಟ್ಟ ಇಳಕಲ್ ಮೂಲದ ಅಣ್ಣ-ತಮ್ಮ..!
ಹುನಗುಂದ: ಬಾಗಲಕೋಟೆಯಿಂದ ಇಳಕಲ್ ಗೆ ಬೈಕ್ ಮೇಲೆ ಬರುತ್ತಿದ್ದ ಅಣ್ಣ-ತಮ್ಮ ಇಬ್ಬರೂ ಭೀಕರ ಅಪಘಾತಕ್ಕೆ ಬಲಿಯಾಗಿರುವ ದುರ್ಘಟನೆ ಅಮಿನಗಡ ಹೊರವಲಯದ ರಾಜ್ಯ ಹೆದ್ದಾರಿ 20 ರಲ್ಲಿ ಸಂಭವಿಸಿದೆ.
ಮೃತರನ್ನು ಅಮರೇಶ್ ಬಸಯ್ಯ ಬೆನಕನಾಳಮಠ (21), ಶರಣಬಸಯ್ಯ ಬಸಯ್ಯ ಬೆನಕನಾಳಮಠ (16) ಎಂದು ಗುರುತಿಸಲಾಗಿದೆ.
ಮೂಲತಃ ಇಳಕಲ್ಲ ನಗರ ನಿವಾಸಿಗಳಾದ ಮೃತರು ಅಣ್ಣ-ತಮ್ಮ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಅಮಿನಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಅಮಿನಗಡ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಗಣೇಶ ಚತುರ್ಥಿಗಾಗಿ ಬಾಗಲಕೋಟೆಯಿಂದ ಇಳಕಲ್ ನಗರಕ್ಕೆ ಬೈಕ್ ಮೇಲೆ ಸಹೋದರರು ಬರುವಾಗ ಪೆಟ್ರೋಲ್ ಖಾಲಿಯಾಗಿ, ನಿಂತಿದ್ದ ಟ್ರ್ಯಾಕ್ಟರ್ ಹಿಂಬದಿಗೆ ಪಲ್ಸರ್ ಬೈಕ್ ಡಿಕ್ಕಿಯಾಗಿದೆ. ಈ ವೇಳೆ ಬೈಕ್ ಸವಾರರಿಬ್ಬರೂ ಕೆಳಗೆ ಬಿದ್ದಿದ್ದು, ಅವರ ಮೇಲೆ ಬಸ್ ಹರಿದು ಸಹೋದರರಿಬ್ಬರೂ ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ್ದಾರೆ.