ಇಳಕಲ್: ತಾಲೂಕಿನ ಚಿಕ್ಕ ಆದಾಪೂರ ಗ್ರಾಮ ದೇವತೆ ಜಾತ್ರೆ ಮಹೋತ್ಸವದ ಅಂಗವಾಗಿ ದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಸಂಭ್ರಮದಿಂದ ಜರುಗಿತು.
ದೇವಿ ಮೂರ್ತಿಯನ್ನು ಮೆರವಣಿಗೆ ಮೂಲಕ ಗ್ರಾಮಸ್ಥರು ಅದ್ಧೂರಿಯಾಗಿ ಪ್ರತಿಷ್ಠಾಪನೆ ನೆರವೇರಿಸಿದರು.
ಈ ವೇಳೆ ವಿವಿಧ ವಾದ್ಯ ವೇಳಗಳು ದೇವಿ ಮೂರ್ತಿ ಮೆರವಣಿಗೆಗೆ ಮೆರಗು ನೀಡಿದವು. ಅದರಲ್ಲೂ ಡಿಜೆ ಸೌಂಡಿಗೆ ಯುವಕರು ಕುಣಿದು ಕುಪ್ಪಳಿಸಿದರು. ಎರಡೂ ತಂಡದ ಡೊಳ್ಳು ಕುಣಿತ ನೋಡುಗರ ಗಮನ ಸೆಳೆಯಿತು.
ಪ್ರತೀ ವರ್ಷ ಶ್ರಾವಣ ಮಾಸದ 4ನೇ ಸೋಮವಾರದಂದು ಪ್ರತಿಷ್ಠಾಪನೆಗೊಳ್ಳುವ ದೇವಿ ಮೂರ್ತಿಗೆ ಗ್ರಾಮದ ಸಕಲ ಭಕ್ತಾದಿಗಳು ಮಂಗಳವಾರ ತಮ್ಮ ಹರಿಕೆ ತೀರಿಸುತ್ತಾರೆ. ಕೆಲವರು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಭಕ್ತಿ ಸಮರ್ಪಣೆ ಮಾಡುತ್ತಾರೆ.
ಇಂದು(26-8-2024) ರಾತ್ರಿ “ಕಿಲಾಡಿ ರಂಗಣ್ಣ” ಎಂಬ ಸಾಮಾಜಿಕ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ನಾಳೆ(27-8-2024) ಟಗರಿನ ಕಾಳಗ ಜರುಗಲಿದೆ. ಮಧ್ಯಾಹ್ನ 3 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಟಗರಿನ ಕಾಳಗಕ್ಕೆ ಗ್ರಾಮದ ಗುರು ಹಿರಿಯರು ಚಾಲನೆ ನೀಡಲಿದ್ದಾರೆ.
ನಾಲ್ಕು ಬಹುಮಾನಗಳಿವೆ:
ಪ್ರಥಮ ಬಹುಮಾನ :
7001 ರೂಪಾಯಿ ಮತ್ತು ಟ್ರೋಫಿ
(ಕೊಡುಗೆ: ಚನ್ನಪ್ಪಗೌಡ ವೀ. ಗುಡಿಹಿಂದಿನ)
ದ್ವಿತೀಯ ಬಹುಮಾನ:
5001 ರೂಪಾಯಿ ಮತ್ತು ಟ್ರೋಫಿ
(ಕೊಡುಗೆ: ವೆಂಕನಗೌಡ ದೊ. ಅಗಸಿಮುಂದಿನ)
ತೃತೀಯ ಬಹುಮಾನ:
3001 ರೂಪಾಯಿ ಮತ್ತು ಟ್ರೋಫಿ
(ಕೊಡುಗೆ: ರಾಜುಗೌಡ ನಿಂ. ಜೋಗರೆಡ್ಡಿ)
ಚತುರ್ಥ ಬಹುಮಾನ:
2001 ರೂಪಾಯಿ ಮತ್ತು ಟ್ರೋಫಿ
(ಕೊಡುಗೆ: ಲಕ್ಷ್ಮಣ ಮ. ಜಾಡರ್)
ವೀಕ್ಷಕ ವಿವರಣೆಯನ್ನು ರಾಜುಗೌಡ ಶಂ. ಹನಮಗೌಡ್ರ ಅವರು ನೀಡಲಿದ್ದಾರೆ. ನಿರ್ಣಾಯಕರಾಗಿ ದೇವಪ್ಪ ಬ. ಬಡಕುರಿ, ಸೋಮಶೇಖರ ಕುರಿ, ಪರಸಪ್ಪ ಮಿಂಚೇರಿ, ಯಂಕಪ್ಪ ಕುರಿ ಪಂದ್ಯವನ್ನು ನಡೆಸಿಕೊಡಲಿದ್ದಾರೆ.
ಪ್ರವೇಶ ಫೀ: 301 ರೂಪಾಯಿ
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8123485661 (ಯಂಕಪ್ಪ), 8088917431 (ಶಂಕರ್), 8310414151 (ಹನಮಂತ), 9742797909 (ರಾಜು) ಸಂಪರ್ಕಿಸಿ.