ಮುಧೋಳ : ಕೇರಳ ರಾಜ್ಯದ ವಯನಾಡು ಭೀಕರ ಪ್ರಕೃತಿ ವಿಕೋಪದಿಂದ ತತ್ತರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿರುವ ಹಿನ್ನಲೆ ನಗರದ ಅರಳಿಕಟ್ಟಿ ಫೌಂಡೆಷನ್ (Aralikatti Foundation) ದಿಂದ ನೆರವು ನೀಡುತ್ತಿರುವುದು ಸ್ತುತ್ಯಾರ್ಹ ಕಾರ್ಯ ಎಂದು ಆರ್.ಎಂ. ಕೋಮಾರ ಹೇಳಿದರು.
ಅವರು ನಗರದ ಅರಳಿಕಟ್ಟಿ ಫೌಂಡೆಷನ್ (Aralikatti Foundation) ದಾನಿಗಳ ನೆರವಿನಿಂದ ಕಳುಹಿಸುತ್ತಿರುವ ಅಗತ್ಯ ವಸ್ತುಗಳನ್ನು ತಗೆದುಕೊಂಡು ಹೋಗುತ್ತಿರುವ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
Join Our Telegram: https://t.me/dcgkannada
ಸಂಸ್ಥೆಯ ಅಧ್ಯಕ್ಷ ಟಿ.ವಿ. ಅರಳಿಕಟ್ಟಿ ಮಾತನಾಡಿ, ಅಲ್ಲಿಯ ಜನತೆಗೆ ಬೇಕಾದ ಬಟ್ಟೆ, ಬೆಡ್ ಸಿಟ್, ಬ್ಯಾಂಕೇಟ್, ಟಾವೆಲ್, ನೀರಿನ ಬಾಟಲಗಳನ್ನು ಕಳುಹಿಸಲಾಗುತ್ತಿದೆ. ನಮ್ಮ ಸಂಸ್ಥೆಯೊಂದಿಗೆ ಕೈಜೋಡಿಸಿದ ನಗರದ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ: Bus Accident: ಚಾಲಕನಿಗೆ ತಲೆಸುತ್ತು.. ಹೊಲಕ್ಕೆ ನುಗ್ಗಿದ ಬಸ್ಸು!
ಮುಖಂಡರಾದ ಆರ್.ಎಚ್. ಚಿಕ್ಕೂರ, ವೆಂಕನಗೌಡ ನಾಡಗೌಡ, ಶ್ರೀಕಾಂತ ಕೋಲುರ, ರಾಚಣ್ಣ ಕಣಬೂರ, ಶಿವಾನಂದ ಪೂಜಾರಿ ಉಪಸ್ಥಿತರಿದ್ದರು.