ಮುಧೋಳ : ಬಸ್ ಚಾಲನೆ ವೇಳೆ ಚಾಲಕನಿಗೆ ತಲೆಸುತ್ತು ಬಂದ ಕಾರಣ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯ ಬಸ್ ಒಂದು ಹೊಲಕ್ಕೆ ನುಗ್ಗಿರುವ (Bus Accident) ಘಟನೆ ಶಿರೋಳ ಗ್ರಾಮದ ಬಳಿ ನಡೆದಿದೆ.
Join Out Telegram: https://t.me/dcgkannada
ವಿಜಯಪುರದಿಂದ ಅಂಕೋಲಕ್ಕೆ ತೆರಳುತ್ತಿದ್ದ ಬಸ್ ಜಮಖಂಡಿಯಿಂದ ಮುಧೋಳಕ್ಕೆ ಬರುವ ವೇಳೆ ಶಿರೋಳ ಗ್ರಾಮದ ಬಳಿ ಬರುತ್ತಿದ್ದಂತೆ ಚಾಲಕನಿಗೆ ತಲೆ ಸುತ್ತು ಬಂದಿದೆ. ಕೂಡಲೇ ಚಾಲಕ ಬಸ್ ಅನ್ನು ಹೊಲಕ್ಕೆ ನುಗ್ಗಿಸಿರುವುದರಿಂದ ( Bus Accident) ಹೆಚ್ಚಿನ ಅನಾಹುತ ತಪ್ಪಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಕ್ರಸ್ಟ್‌ಗೇಟ್ ಚೈನ್ ಲಿಂಕ್ ಕಟ್: ನದಿ ಪಾತ್ರದ ಜನರಲ್ಲಿ ಆತಂಕ!| ವಿಡಿಯೋ ನೋಡಿ
ತಲೆಸುತ್ತು ಬಂದರೂ ಕರ್ತವ್ಯ ಪ್ರಜ್ಞೆ ಮೆರೆದ ಚಾಲಕ ಬಸನ್ನು ಹೊಲಕ್ಕೆ ನುಗ್ಗಿಸಿದ್ದಾನೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಪ್ರಯಾಣಿಕರಿಗೆ ಬದಲಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.