ಹುನಗುಂದ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅಮರೇಶ ನಾಗೂರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಹೊಸಮನಿ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಪತ್ರಕರ್ತರ ಸಂಘದ ನೂತನ ಪಧಾದಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷರಾಗಿ ಹರ್ಷಕುಮಾರ ದೇಸಾಯಿ, ಬಸವರಾಜ ನಿಡಗುಂದಿ ಹಾಗೂ ದೇವೇಂದ್ರಪ್ಪ ಕುರಿ (ಖಜಾಂಚಿ), ಮಲ್ಲಿಕಾರ್ಜುನ ಬಂಡರಗಲ್ (ಸಹ ಕಾರ್ಯದರ್ಶಿ) ಸ್ಥಾನಕ್ಕೆ ಆಯ್ಕೆಯಾದರು.
ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಪಾಟೀಲ, ಬಸವರಾಜ ಕಮ್ಮಾರ, ಚಂದ್ರು ಗಂಗೂರ, ಮಹಾಂತೇಶ ತೋಪಲಕಟ್ಟಿ, ರವಿ ದೇಶಪಾಂಡೆ, ಎಚ್. ಎಚ್. ಬೇಪಾರಿ ಅಶೋಕ ಹಂದ್ರಾಳ, ಅಂದಾನೆಪ್ಪ ಸುಂಕದ, ಅಶೋಕ ಸಿಂಗದ, ಎಫ್.ಎಂ. ಪಿಂಜಾರ, ಜಗದೀಶ ಹದ್ಲಿ, ಸುರೇಶ ಪತ್ತಾರ ಇದ್ದರು.