ದೆಹಲಿ: ಪ್ರಾಥಮಿಕ ಶಾಲೆಯ (1ರಿಂದ 5 ತರಗತಿ) ಶಿಕ್ಷಕರಾಗಲು ಬಿಇಡ್ ಪದವಿದರರು ಅನರ್ಹರು. ಡಿಇಡ್ ಕೋರ್ಸ್ ಮುಗಿಸಿದವರು ಮಾತ್ರ ಅರ್ಹರು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಇನ್ನು ಮುಂದೆ ಕೇಂದ್ರ ಸರ್ಕಾರ ನಡೆಸುವ ನೇಮಕಾತಿಗೆ ಈ ನಿಯಮ ಅನ್ವಯ ಆಗಬಹುದು. ಆದರೆ, ಶಿಕ್ಷಣವು ಸಹವರ್ತಿ ಪಟ್ಟಿಯಲ್ಲಿ ಇರುವುದರಿಂದ ರಾಜ್ಯಗಳು ಈ ನಿಯಮ ಪಾಲಿಸುತ್ತವೆ ಎಂದು ಹೇಳುವುದು ಕಷ್ಟ ಸಾಧ್ಯ.
ಕರ್ನಾಟಕದಲ್ಲಿ ಈ ನಿಯಮ ಜಾರಿ ಆಗುತ್ತಾ?
ರಾಜ್ಯದಲ್ಲಿಯೂ ಈ ಕುರಿತು ಶಿಕ್ಷಣ ವಲಯದಲ್ಲಿ ಚರ್ಚೆಗಳೂ ಜೋರಾಗಿವೆ. ಏತನ್ಮಧ್ಯೆ, ಒಂದು ವೇಳೆ ಒಂದರಿಂದ ಐದನೇ ತರಗತಿಯ ಶಿಕ್ಷಕ ನೇಮಕಾತಿಗೆ ರಾಜ್ಯ ಸರ್ಕಾರ ಮುಂದಾದರೆ ಬಿಇಡ್ ಆದವರಿಗೂ ಅವಕಾಶ ನೀಡಬಹುದು ಎನ್ನಲಾಗುತ್ತಿದೆ. ಇದಕ್ಕೆ ಸಹಕಾರಣವೂ ಇದೆ. ಕೆಇಎ ನಡೆಸುವ ಟಿಇಟಿ ಮೊದಲ ಪರೀಕ್ಷೆಗೆ ಪದವಿ ಮತ್ತು ಬಿಇಡ್ ಆದವರಿಗೂ ಅವಕಾಶ ನೀಡಿರುವುದು.
ಒಂದು ವೇಳೆ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು ಪಾಲಿಸಬೇಕು ಎಂದು ರಾಜ್ಯ ಸರ್ಕಾರ ನಿರ್ಧರಿಸಿದರೆ, ಸಿ ಅಂಡ್ ಆರ್ ನಿಯಮ ಬದಲಿಸಿ ಕಾರ್ಯೋನ್ಮಕವಾಗಬೇಕು. ಆದರೆ, ರಾಜ್ಯದ ಶಿಕ್ಷಣ ವಲಯವು ಇದಕ್ಕೆ ಮನಸ್ಸು ಮಾಡುವುದಿಲ್ಲ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: Road Accident: ಭೀಕರ ಅಪಘಾತದಲ್ಲಿ ಎರಡು ದಿನದ ಹಿಂದೆ ಮದುವೆಯಾಗಿದ್ದ ಮಾನಸ ದುರ್ಮರಣ..! ಪತಿ ಸ್ಥಿತಿ ಗಂಭೀರ
ಒಟ್ಟಾರೆ, ಸುಪ್ರೀಂ ಕೋರ್ಟ್ನ ತೀರ್ಪು ರಾಜ್ಯದ ಶಿಕ್ಷಣದ ಮೇಲೆ ಅಂತಹ ಮಹತ್ವ ಪರಿಣಾಮ ಏನು ಬೀರುವುದಿಲ್ಲ ಎಂಬು ಗಮನಾರ್ಹ ಸಂಗತಿಯಾಗಿದೆ.