Basava Jayanti celebration in Madanamatti

ಮದನಮಟ್ಟಿಯಲ್ಲಿ ಅದ್ಧೂರಿಯಾಗಿ ಬಸವ ಜಯಂತಿ ಆಚರಣೆ

ಮದನಮಟ್ಟಿಯಲ್ಲಿ ಅದ್ಧೂರಿಯಾಗಿ ಬಸವ ಜಯಂತಿ ಆಚರಣೆ

ರಬಕವಿ-ಬನಹಟ್ಟಿ : ತಾಲೂಕಿನ‌ ಮದನಮಟ್ಟಿ ಗ್ರಾಮದಲ್ಲಿ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಸಿಂಗರಿಸಿ, ಟ್ರ್ಯಾಕ್ಟರ್ ಮುಂಭಾಗದಲ್ಲಿ ಕಟ್ಟಿ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಲಾಯಿತು. ಗ್ರಾಮದ ಮಹಿಳೆಯರು ಆರತಿ ತರುವ ಮೂಲಕ ಮೆರವಣಿಗೆಗೆ ಶೋಭೆ ನೀಡಿದರು. ವಾಧ್ಯ ಹಾಗೂ ಸಂಗೀತದ ಮೂಲಕ ಮೆರವಣಿಗೆ ಸರಾಗವಾಗಿ ಸಾಗಿತು.

ಭಾವಚಿತ್ರದ ಮೆರವಣಿಗೆ ನಂತರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರವಚನವನ್ನು ಆಲಿಸಿದ ಗ್ರಾಮಸ್ಥರು ಪುನೀತರಾದರು. ನೆರದಿದ್ದ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಬಸವರಾಜ ಹರೋಲಿ, ಸಂತೋಷ ಅಡಾಲಟ್ಟಿ, ಶ್ರೀಶೈಲ ಅಡಾಲಟ್ಟಿ, ಸುರೇಶ ಹಣಮನ್ನವರ, ಬಸವರಾಜ ಉಮರಾಣಿ, ಭೀಮಪ್ಪ ಅವಕ್ಕನ್ನವರ, ಸುರೇಶ ಹರೋಲಿ, ಸಂತೋಷ ಹೆಗ್ಗಳಗಿ, ಕುಮಾರ ನಂದೆಪ್ಪನ್ನವರ, ಶ್ರೀಶೈಲ ಪೂಜಾರಿ ಹಾಗೂ ಸಮಸ್ತ ಗ್ರಾಮಸ್ಥರು ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ನೇರವೇರಿಸಿದರು.

Latest News

14 ವರ್ಷದ ಹುಡಗನ ಆಟಕ್ಕೆ ಮನಸೋತ ಕ್ರಿಕೆಟ್ ಜಗತ್ತು

14 ವರ್ಷದ ಹುಡಗನ ಆಟಕ್ಕೆ ಮನಸೋತ ಕ್ರಿಕೆಟ್ ಜಗತ್ತು

ಜೈಪುರ್: ರಾಜಸ್ಥಾನ ರಾಯಲ್ಸ್‌ನ 14 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ಅವರ ಅದ್ಭುತ ಆಟಕ್ಕೆ

ಪುರಸಭೆ ಸಿಬ್ಬಂದಿ ನೇಮಕ ಅಕ್ರಮ, ನ್ಯಾಯಾಂಗ ನಿಂದನೆ ಆರೋಪ:ವರದಿ ಸಲ್ಲಿಸದಿದ್ದರೇ ಮುಖ್ಯಾಧಿಕಾರಿಯೇ ಹೊಣೆ-ಯೋಜನಾ ನಿರ್ದೇಶಕ ಎಚ್ಚರಿಕೆ

ಪುರಸಭೆ ಸಿಬ್ಬಂದಿ ನೇಮಕ ಅಕ್ರಮ, ನ್ಯಾಯಾಂಗ ನಿಂದನೆ ಆರೋಪ:ವರದಿ ಸಲ್ಲಿಸದಿದ್ದರೇ ಮುಖ್ಯಾಧಿಕಾರಿಯೇ ಹೊಣೆ-ಯೋಜನಾ ನಿರ್ದೇಶಕ ಎಚ್ಚರಿಕೆ

ಮುದ್ದೇಬಿಹಾಳ : ಪಟ್ಟಣದ ಪುರಸಭೆಯಲ್ಲಿ ಅನಧಿಕೃತವಾಗಿ ನೇಮಕಗೊಂಡಿರುವ ಮತ್ತು ಉಚ್ಛನ್ಯಾಯಾಲಯದ ಆದೇಶ ತಿರುಚಿ ನ್ಯಾಯಾಂಗ

ಆಶಾ ಕಾರ್ಯಕರ್ತೆಯರಿಗೆ ಉಚಿತ ತರಬೇತಿ :ಕಾಯಿಲೆಗಳ ಬಗ್ಗೆ ಹೊಂದಿರುವ ಮೂಢನಂಬಿಕೆ ತೊರೆಯಿರಿ – ಡಾ. ಪರಶುರಾಮ ವಡ್ಡರ

ಆಶಾ ಕಾರ್ಯಕರ್ತೆಯರಿಗೆ ಉಚಿತ ತರಬೇತಿ :ಕಾಯಿಲೆಗಳ ಬಗ್ಗೆ ಹೊಂದಿರುವ ಮೂಢನಂಬಿಕೆ ತೊರೆಯಿರಿ – ಡಾ. ಪರಶುರಾಮ ವಡ್ಡರ

ಮುದ್ದೇಬಿಹಾಳ : ಕಾಮಣಿ(ಕಾಮಾಲೆ) ರೋಗದ ಬಗ್ಗೆ ಗ್ರಾಮೀಣ ಪ್ರದೇಶದ ಜನರು ಹೊಂದಿರುವ ಮೂಢನಂಬಿಕೆಯನ್ನು ಬಿಟ್ಟು

ನಾಗಬೇನಾಳ ಪಿಡಿಒ ಪೀರಾಪುರ ವಿರುದ್ಧ ಕ್ರಮಕ್ಕೆ ಒತ್ತಾಯ

ನಾಗಬೇನಾಳ ಪಿಡಿಒ ಪೀರಾಪುರ ವಿರುದ್ಧ ಕ್ರಮಕ್ಕೆ ಒತ್ತಾಯ

ಮುದ್ದೇಬಿಹಾಳ : ತಾಲ್ಲೂಕಿನ ನಾಗಬೇನಾಳ ಗ್ರಾಮ ಪಂಚಾಯಿತಿ ಪಿಡಿಒ ಮುರಿಗೆಮ್ಮ ಪೀರಾಪುರ ಪಂಚಾಯತ್ ನಲ್ಲಿ

ಮುದ್ದೆಬಿಹಾಳದಲ್ಲಿ ಗುಡುಗು ಸಹಿತ ಭಾರಿ ಮಳೆ

ಮುದ್ದೆಬಿಹಾಳದಲ್ಲಿ ಗುಡುಗು ಸಹಿತ ಭಾರಿ ಮಳೆ

ಮುದ್ದೇಬಿಹಾಳ : ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಹಲವೆಡೆ ಗುಡುಗು, ಮಿಂಚು ಸಿಡಿಲಿನ ಆರ್ಭಟದೊಂದಿಗೆ ಭಾನುವಾರ ಮಳೆ ಸುರಿಯಿತು. ಸಂಜೆ 4.30ರ ನಂತರ ಶುರುವಾದ ಮಳೆ ಅರ್ಧ ಗಂಟೆ ಕಾಲ ಎಡೆಬಿಡದೇ ಸುರಿಯಿತು. ಇದರಿಂದ ಚರಂಡಿಗಳು ತುಂಬಿ ರಸ್ತೆಯ ಮೇಲೆಲ್ಲಾ ಕೊಳಚೆ ನೀರು ಹರಿದಾಡಿತು. ಗಾಳಿಯೊಂದಿಗೆ ಸಿಡಿಲು ಗುಡುಗು ಆರ್ಭಟ ಜೋರಾಗಿತ್ತು. ಮಳೆ ಹಿನ್ನೆಲೆಯಲ್ಲಿ ಹೆಸ್ಕಾಂನಿಂದ ಎರಡು ತಾಸು ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು. ಕಾದ ಹಂಚಿನಂತಾಗಿದ್ದ ಭೂಮಿಗೆ ಸುರಿದ ಮಳೆ ತಂಪನ್ನೆರೆಯಿತು.

ಎನ್.ಎಸ್.ಎಸ್ ಶಿಬಿರ ಸಮಾರೋಪ:ಯೋಜನೆಗಳ ಯಶಸ್ವಿಗೆ ಸಮಾಜದ ಸಹಭಾಗಿತ್ವ ಅಗತ್ಯ-ಪಾಟೀಲ್

ಎನ್.ಎಸ್.ಎಸ್ ಶಿಬಿರ ಸಮಾರೋಪ:ಯೋಜನೆಗಳ ಯಶಸ್ವಿಗೆ ಸಮಾಜದ ಸಹಭಾಗಿತ್ವ ಅಗತ್ಯ-ಪಾಟೀಲ್

ಮುದ್ದೇಬಿಹಾಳ : ಸರ್ಕಾರಗಳು ಜಾರಿಗೊಳಿಸುವ ಜನಪರ ಯೋಜನೆಗಳ ಯಶಸ್ವಿಗೆ ಸಮಾಜದ ಸಹಕಾರ ಅತ್ಯಗತ್ಯ ಎಂದು ಹಡಲಗೇರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಸ್. ಎಲ್. ಪಾಟೀಲ್ ಹೇಳಿದರು. ತಾಲ್ಲೂಕು ಹಡಲಗೇರಿಯಲ್ಲಿ ಮಾದರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹಡಲಗೇರಿ ದತ್ತು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ