
ದೆಹಲಿ: ಡೆಲ್ಲಿ ವಿರುದ್ಧ ಅರುಣ್ ಜೆಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್.ಸಿ.ಬಿ ತಂಡ 6 ವಿಕೆಟ್ ಗಳ ಜಯ ಸಾಧಿಸಿದೆ. ತವರಿನಾಚೆ ನಡೆದ 6 ಪಂದ್ಯಗಳಲ್ಲೂ ಆರ್.ಸಿ.ಬಿ ಜಯ ದಾಖಲಿಸಿದೆ. ಒಟ್ಟು 7 ಪಂದ್ಯಗಳಲ್ಲಿ ಜಯ ಸಾಧಿಸಿದ ಆರ್.ಸಿ.ಬಿ 14 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಲ್ಲದೇ ಪ್ಲೇಆಫ್ ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲು ಕೇವಲ ಒಂದು ಗೆಲುವು ಮಾತ್ರ ಬೇಕಾಗಿದೆ.

ಆರ್ ಸಿಬಿ ತಂಡದ ಆಧಾರಸ್ತಂಭವಾಗಿರುವ ವಿರಾಟ್ ಕೊಹ್ಲಿ 6 ಅರ್ಧಶತಕ ಸಿಡಿಸಿ 443 ರನ್ ಗಳಿಸಿ ಆರೆಂಜ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಮಧ್ಯಮ ವೇಗಿ ಜೋಸ್ ಹೆಜ್ಲೆವುಡ್ 18 ವಿಕೆಟ್ ಸಂಪಾದಿಸುವ ಮೂಲಕ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಪರ್ಪಲ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ. 16 ವಿಕೆಟ್ ಪಡೆದ ಗುಜರಾತ್ ಟೈಟಾನ್ಸ್ ತಂಡದಲ್ಲಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ ಎರಡನೇ ಸ್ಥಾನದಲ್ಲಿದ್ದಾರೆ.