ಪಾಟ್ನಾ: ದ್ವಿಚಕ್ರ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು ಬಿಜೆಪಿ ನಾಯಕನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಭಾನುವಾರ ಬೆಳಿಗ್ಗೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮದೇವ್ ಮಹತೋ ಸಮುದಾಯ ಭವನದ ಬಳಿ ನಾಯಕನ ತಲೆಗೆ ಗುಂಡು ಹಾರಿಸಲಾಗಿದೆ.
ಹತ್ಯೆಗೀಡಾದವರನ್ನು ಬಿಜೆಪಿ ಚೌಕ್ ಮಂಡಲದ ಮಾಜಿ ಅಧ್ಯಕ್ಷ ಶ್ಯಾಮ್ ಸುಂದರ್ ಶರ್ಮಾ ಅಲಿಯಾಸ್ ಮುನ್ನಾ ಶರ್ಮಾ ಎಂದು ಗುರುತಿಸಲಾಗಿದೆ.
ದುಷ್ಕರ್ಮಿಗಳು ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸದ್ಯ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಮುನ್ನಾ ಶರ್ಮಾ ಅವರು ತಮ್ಮ ಮಗನ ನಿಶ್ಚಿತಾರ್ಥ ಸಮಾರಂಭವನ್ನು ಮುಗಿಸಿ ಹೋಗುತ್ತಿದ್ದರು. ಶರ್ಮಾ ಚಿನ್ನದ ಸರವನ್ನು ಧರಿಸಿದ್ದು, ದುಷ್ಕರ್ಮಿಗಳು ಅದನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ.
ಇದನ್ನೂ ಓದಿ: Shocking news: ಪತ್ನಿಯ ಹೆರಿಗೆ ಬಿಲ್ ಪಾವತಿಸಲು ಮಗನನ್ನೇ ಮಾರಲು ಮುಂದಾದ ತಂದೆ!
ಆ ವೇಳೆ ಶರ್ಮಾ ಕಿರುಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ದುಷ್ಕರ್ಮಿಗಳು ತಲೆಗೆ ಗುಂಡು ಹಾರಿಸಿದ್ದಾರೆ.