BJP Rebels Basanagouda patil yatnal vs BY Vijayendra

BJP Rebels: ಅತೃಪ್ತರ ಮುಂದೆ ಮಂಡಿಯೂರಿದ್ರಾ ಬಿಜೆಪಿ ರಾಜ್ಯಾಧ್ಯಕ್ಷ..? ಬಿ.ವೈ. ವಿಜಯೇಂದ್ರ ಶಾಕಿಂಗ್ ರಿಯಾಕ್ಷನ್..!

BJP Rebels: ಅತೃಪ್ತರ ಮುಂದೆ ಮಂಡಿಯೂರಿದ್ರಾ ಬಿಜೆಪಿ ರಾಜ್ಯಾಧ್ಯಕ್ಷ..? ಬಿ.ವೈ. ವಿಜಯೇಂದ್ರ ಶಾಕಿಂಗ್ ರಿಯಾಕ್ಷನ್..!

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ (BJP Rebels) ಪಾದಯಾತ್ರೆಗೆ ಪಕ್ಷದ ವರಿಷ್ಠರು ಅನುಮತಿ ನೀಡಿದರೆ ನನ್ನದೇನು ತಕರಾರು ಇಲ್ಲ ಎನ್ನುವ ಮೂಲಕ ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಮ್ಮ ವಿರೋಧಿ ಬಣದ‌ ಮುಂದೆ ಮಂಡಿಯೂರಿದ್ರಾ ಎಂಬ ಮಾತು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹೌದು, ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕೆಲವರು ಪಾದಯಾತ್ರೆ ಮಾಡುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಇದರಿಂದ ಪಕ್ಷಕ್ಕೆ ಶಕ್ತಿ ಸಿಗುವುದಾದರೆ, ವರಿಷ್ಠರು ಅನುಮತಿ ನೀಡಿದರೆ ನನ್ನದೇನು ತಕರಾರು ಇಲ್ಲ ಎಂದು ಹೇಳಿದ್ದಾರೆ.

Join Our Telegram: https://t.me/dcgkannada

ವರಿಷ್ಠರು ಅನುಮತಿ ನೀಡಿದರೆ ಮಾತ್ರ ಪಾದಯಾತ್ರೆ ಮಾಡಲು ಅವರು ಸ್ವತಂತ್ರರು. ಆದರೆ, ಆ ಪಾದಯಾತ್ರೆ ಪಕ್ಷಕ್ಕೆ ಪೂರಕವಾಗಿರಬೇಕು ಮತ್ತು ಪಕ್ಷ ಸಂಘಟನೆಗೆ ಲಾಭದ ಸದುದ್ದೇಶ ಇರಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಜಯೇಂದ್ರ(BY Vijayendra), ನಾನು ಪಕ್ಷದ ಅಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಆದ್ಯ ಕರ್ತವ್ಯ. ನಾನು ಅಧ್ಯಕ್ಷನಾದಾಗಿನಿಂದಲೂ ಸತತವಾಗಿ ಆ ಕೆಲಸ ಮಾಡುತ್ತಾ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಮುಡಾ ಹಗರಣ.. ಸಿಎಂ ಪರ ಅರ್ಜಿ ವಜಾ..! ಆ.21ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

ಭಾನುವಾರ ಬೆಳಗಾವಿಯ ರೆಸಾರ್ಟ್‌ವೊಂದರಲ್ಲಿ ಬಿಜೆಪಿಯ ಕೆಲವು ಹಿರಿಯ ನಾಯಕರು ಪ್ರತ್ಯೇಕವಾಗಿ ಸಭೆ ನಡೆಸಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಕೂಡಲಸಂಗಮದಿಂದ ಬಳ್ಳಾರಿವರೆಗೆ (Kudalasangama to Ballary) ಪಾದಯಾತ್ರೆ ನಡೆಸಬೇಕು. ಅಲ್ಲದೆ, ಶೀಘ್ರ ಈ ಸಂಬಂಧ ಪಕ್ಷದ ವರಿಷ್ಠರನ್ನು ಸಂಪರ್ಕಿಸಬೇಕು ಎಂಬ ನಿರ್ಧಾರ ಕೈಗೊಂಡಿದ್ದರು.

ಪಕ್ಷದ ಮುಖಂಡರು, ಬಸನಗೌಡ ಪಾಟೀಲ ಯತ್ನಾಳ್ (Basanagouda patil yatnal), ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಜಿ.ಎಂ.ಸಿದ್ಧೇಗೌಡ, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ ಆ ಸಭೆಯಲ್ಲಿ ಭಾಗವಹಿಸಿದ್ದರು.

Latest News

ಡಿ.22 ರಂದು ದಿನದರ್ಶಿಕೆ ಲೋಕಾರ್ಪಣೆ

ಡಿ.22 ರಂದು ದಿನದರ್ಶಿಕೆ ಲೋಕಾರ್ಪಣೆ

ಮುದ್ದೇಬಿಹಾಳ : ಪ್ರಜಾನಾಡು ಡಿಜಿಟಲ್ ಸುದ್ದಿವಾಹಿನಿಯ ದಿನದರ್ಶಿಕೆ ಲೋಕಾರ್ಪಣೆ ಕಾರ್ಯಕ್ರಮ ಡಿ.22 ರಂದು ಸಂಜೆ

ಅಂಗವೈಕಲ್ಯ ತಡೆಗೆ ಪೊಲೀಯೋ ಲಸಿಕೆ ಹಾಕಿಸಿ

ಅಂಗವೈಕಲ್ಯ ತಡೆಗೆ ಪೊಲೀಯೋ ಲಸಿಕೆ ಹಾಕಿಸಿ

ಮುದ್ದೇಬಿಹಾಳ : ಮಕ್ಕಳು ಹುಟ್ಟಿನಿಂದಲೇ ಅಂಗವೈಕಲ್ಯತೆ ಹೊಂದುವುದನ್ನು ತಪ್ಪಿಸಲು ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ

T20 World Cup 2026 ಏಳು ಆಟಗಾರರು ಔಟ್!

T20 World Cup 2026 ಏಳು ಆಟಗಾರರು ಔಟ್!

T20 World Cup 2026: ಟಿ20 ವಿಶ್ವಕಪ್​​ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ

Good News: Gruha Lakshmi ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವೆ Lakshmi Hebbalkar ​​

Good News: Gruha Lakshmi ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವೆ Lakshmi Hebbalkar ​​

ಬೆಳಗಾವಿ: ಗೃಹಲಕ್ಷ್ಮೀ ಯೋಜನೆಯ (Gruha Lakshmi) ಹಣ ಬಿಡುಗಡೆ ವಿಚಾರವಾಗಿ ಇತ್ತೀಚೆಗೆ ಅಧಿವೇಶನದಲ್ಲಿ ಚರ್ಚೆಗೆ

Shocking News: ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಪುಟಾಣಿ ದುರ್ಮರಣ

Shocking News: ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಪುಟಾಣಿ ದುರ್ಮರಣ

ಮೈಸೂರು: ರಾಜ್ಯದಲ್ಲಿ ಘೋರ ದುರಂತ ಎನ್ನುವಂತೆ ಬಿಸಿನೀರಿನ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು ಧಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ಮೈಸೂರಲ್ಲಿ ಸಂಭವಿಸಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಜಯಗಿರಿ ಹಾಡಿಯಲ್ಲಿ ಈ ದುರಂತ ಸಂಭವಿಸಿದೆ. ರಮ್ಯಾ ಮತ್ತು ಬಸಪ್ಪ ಎಂಬುವರ ದಂಪತಿಗಳ ಪುತ್ರಿ ವೇದಾ(2) ಬಿಸಿ ನೀರಿನ ಪಾತ್ರೆಗೆ ಬಿದ್ದು ಸಾವನ್ನಪ್ಪಿದ್ದಾಳೆ. ತಾಯಿ ಸ್ನಾನ ಮಾಡಿಸೋದಕ್ಕೆ ಬಿಸಿ ನೀರು ತೋಡಿ, ತಣ್ಣೀರು ಬೆರೆಸೋದಕ್ಕೆ ತರಲು ಹೋಗಿದ್ದಾರೆ. ಈ ವೇಳೆ ವೇದಾ

ಡಿ.21 ರಂದು ರಾಷ್ಟೀಯ ಪಲ್ಸ್ ಪೋಲಿಯೋ : ವಿದ್ಯಾರ್ಥಿಗಳಿಂದ ಜಾಥಾ

ಡಿ.21 ರಂದು ರಾಷ್ಟೀಯ ಪಲ್ಸ್ ಪೋಲಿಯೋ : ವಿದ್ಯಾರ್ಥಿಗಳಿಂದ ಜಾಥಾ

ಮುದ್ದೇಬಿಹಾಳ : ಪ್ರಾಥಮಿಕ ಆರೋಗ್ಯ ಕೇಂದ್ರ ಗರಸಂಗಿ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗರಸಂಗಿ ಸಂಯುಕ್ತಾಶ್ರಯದಲ್ಲಿ ರಾಷ್ಟಿçÃಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದಂಗವಾಗಿ ಶನಿವಾರ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಸಲಾಯಿತು. ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, "ಪೋಲಿಯೋ ಮಾರಕ ರೋಗವಾಗಿದ್ದು, ಐದು ವರ್ಷದೊಳಗಿನ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತರಾಗದAತೆ ನೋಡಿಕೊಳ್ಳಬೇಕು ಎಂದರು. ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಹಾಗೂ