Children's art at Pratibha Karanji

ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ನಾಲತವಾಡ: ಸಮೀಪದ ಲೊಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತಿಯ ಕಾಂತಿ ಮಕ್ಕಳ ಮೂಲಕ ಹೊರಹೊಮ್ಮುತ್ತಿತ್ತು. ವಿದ್ಯಾರ್ಥಿಗಳ ನೃತ್ಯ, ನಾಟಕ, ರಂಗೋಲಿ, ಛದ್ಮವೇಷ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಜತೆಗೆ ಕಲೆಯನ್ನೂ ಮೇಳೈಸುವಂತೆ ಮಾಡಿದರು.

ಶಾಲಾ ಶಿಕ್ಷಣ ಇಲಾಖೆ, ಎಸ್ ಡಿಎಂಸಿ ಅಧ್ಯಕ್ಷ ಲಕ್ಕಪ್ಪ ನಾಗರಬೆಟ್ಟ ಹಾಗೂ ಲೊಟಗೇರಿ ಗ್ರಾಮಸ್ಥರ ನೇತೃತ್ವದಲ್ಲಿ ಆಯೋಜಿಸಲಾದ ರಕ್ಕಸಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳ ವಿವಿಧ ಸ್ಪರ್ಧೆಗಳು ನಡೆದವು. ಡಾ.ಗುರುಮೂರ್ತಿ ಕಣಕಾಲಮಠ ಕಾರ್ಯಕ್ರಮ ಉದ್ಘಾಟಿಸಿ ‘ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದು ಹೇಳಿದರು. ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಸನಗೌಡ ಮುದ್ನೂರ ಮಾತನಾಡಿ, ‘ವಿದ್ಯಾರ್ಥಿಗಳು ಪಠ್ಯ ವಿಷಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು’ ಎಂದರು. ಸಿಆರ್ ಪಿ ಮಹಾಂತೇಶ ನೂಲಿನವರ ಮಾತನಾಡಿ ‘ಕಲೋತ್ಸವ ಮಕ್ಕಳ ಮುಂದಿನ ಭವಿಷ್ಯದಲ್ಲಿ ಅವರು ಯಾವ ಕ್ಷೇತ್ರದಲ್ಲಿ ಉತ್ತಮ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಗುರುತಿಸಲು ಪೂರಕವಾಗುತ್ತದೆ. ಅಷ್ಟೇ ಅಲ್ಲ ವರ್ಷಂಪ್ರತಿ ಪಾಠಗಳನ್ನು ಆಲಿಸುವ ಮಕ್ಕಳಿಗೆ ಇದರಿಂದ ಹೊಸತನ ದೊರೆಯುತ್ತದೆ ಎಂದರು.ಟಕ್ಕಳಕಿ ಶಾಲೆಯ ವಿದ್ಯಾರ್ಥಿಗಳು ರಸಪ್ರಶ್ನೆಯಲ್ಲಿ ಸಾಧನೆ ಮಾಡಿದರೆ, ಹುನಕುಂಟಿಯ ವಿದ್ಯಾರ್ಥಿನಿ ಅಕ್ಕಮಹಾದೇವಿ, ಸರಸ್ವತಿ ವೇಷದಲ್ಲಿ ಗಮನಸೆಳೆದರು.

ಮುಖ್ಯಗುರುಗಳಾದ ಗಂಗಣ್ಣ ಕಮರಿ, ಎಚ್. ಜಿ. ಗೌರೋಜಿ, ಎ. ಸಿ. ನರಸಲಗಿ, ಯಮನಪ್ಪ ನಾಗಬೇನಾಳ, ಎಸ್. ಎಸ್. ನಾಗರಬೆಟ್ಟ, ಅಧ್ಯಕ್ಷ ಬಿ. ಎಸ್. ಮುದನೂರ, ಎಸ್. ಬಿ. ತೊಗರಿ, ಎಸ್. ಐ. ಗಂಗನಗೌಡ್ರ, ಆರ್. ಎಸ್. ಹಿರೇಮಠ, ಸಂಗಣ್ಣ ಟಕ್ಕಳಕಿ, ಎ. ಪಿ. ಸಿರಗುಂಪಿ, ಲಕ್ಕಪ್ಪ ನಾಗರಬೆಟ್ಟ, ಉಪಸ್ಥಿತರಿದ್ದರು.

Latest News

ಮಾನವ ಬಂಧುತ್ವ ವೇದಿಕೆ ಖಂಡನೆ :                                ಏಐಸಿಸಿ ಅಧ್ಯಕ್ಷ ಖರ್ಗೆ ಭಾಷಣ ಮಾಡಿದ ಜಾಗೆ ಶುದ್ಧೀಕರಣ

ಮಾನವ ಬಂಧುತ್ವ ವೇದಿಕೆ ಖಂಡನೆ : ಏಐಸಿಸಿ ಅಧ್ಯಕ್ಷ ಖರ್ಗೆ ಭಾಷಣ ಮಾಡಿದ ಜಾಗೆ ಶುದ್ಧೀಕರಣ

ಮುದ್ದೇಬಿಹಾಳ : ಉತ್ತರಖಂಡದ ರಾಮಲೀಲಾ ಮೈದಾನದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ

ಜಾನಪದ ಕ್ಷೇತ್ರದ ಪುನಃಶ್ಚೇತನಕ್ಕೆ ಶ್ರಮಿಸಿ-ಅಶೋಕ ತಡಸದ

ಜಾನಪದ ಕ್ಷೇತ್ರದ ಪುನಃಶ್ಚೇತನಕ್ಕೆ ಶ್ರಮಿಸಿ-ಅಶೋಕ ತಡಸದ

ಮುದ್ದೇಬಿಹಾಳ : ಗ್ರಾಮೀಣ ಭಾಗದಲ್ಲಿರುವ ಜನಪದ ಕಲೆಗಳನ್ನು,ಕಲಾವಿದರನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು

ಬಾವಿ ನೀರು ಖಾಲಿಯಾದರೂ ಪತ್ತೆಯಾಗದ ತಂದೆ :               ತೋಟದ ಬಾವಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ

ಬಾವಿ ನೀರು ಖಾಲಿಯಾದರೂ ಪತ್ತೆಯಾಗದ ತಂದೆ :   ತೋಟದ ಬಾವಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ

ಮುದ್ದೇಬಿಹಾಳ : ಅಕ್ಕ ತಂಗಿಯರ ಶವ ಬಾವಿಯಲ್ಲಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ

ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ : ಬಿ.ಕೆ. ಶೃತಿ

ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ : ಬಿ.ಕೆ. ಶೃತಿ

ವಿಜಯಪುರ: ನಾವು ನಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಲು ದುಶ್ಚಟಗಳಿಂದ ದೂರ ಇರಬೇಕೆಂದು ನಗರದ ಪ್ರಜಾಪಿತ ಬ್ರಹ್ಮಕುಮಾರಿ

ಕಲಾವಿದ,ಶಿಕ್ಷಕ ಗೋಪಾಲ ಹೂಗಾರ ಮಾದರಿ ನಡೆ: ಜನುಮದಿನದ ನಿಮಿತ್ಯ  ಸರ್ಕಾರಿ ಶಾಲೆಯ 500 ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್

ಕಲಾವಿದ,ಶಿಕ್ಷಕ ಗೋಪಾಲ ಹೂಗಾರ ಮಾದರಿ ನಡೆ: ಜನುಮದಿನದ ನಿಮಿತ್ಯ ಸರ್ಕಾರಿ ಶಾಲೆಯ 500 ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್

ಮುದ್ದೇಬಿಹಾಳ : ಹಾಸ್ಯ ಕಲಾವಿದ ,ಶಿಕ್ಷಕ ಗೋಪಾಲ ಎನ್.ಹೂಗಾರ ತಮ್ಮ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಕಲಾಸಿಂಚನ ಸಾಂಸ್ಕೃತಿಕ ಸಂಸ್ಥೆಯಿoದ ಗೋಪಾಲ ಹೂಗಾರ ಅವರ ಜನುಮದಿನದ ನಿಮಿತ್ಯವಾಗಿ ಯರಗಲ್ಲ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 500 ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ವಿತರಿಸುವ ಕಾರ್ಯ ಕೈಗೊಳ್ಳಲಾಯಿತು. ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಬಿ.ಧಮ್ಮೂರಮಠ ಮಾತನಾಡಿ, ಭಗವಂತ ಎಲ್ಲರಿಗೂ ಎಲ್ಲವನ್ನೂ ಕೊಟ್ಟಿರುತ್ತಾನೆ. ಆದರೆ ಕೊಡುವ ಮನಸ್ಸನ್ನು ಕೆಲವರಿಗೆ

ಹೈಕೋರ್ಟ್ ಕದ ತಟ್ಟಿದ್ದ ನಾಲ್ವರಿಗೂ ಗೆಲುವು:       ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆ ಫಲಿತಾಂಶ ಪ್ರಕಟ

ಹೈಕೋರ್ಟ್ ಕದ ತಟ್ಟಿದ್ದ ನಾಲ್ವರಿಗೂ ಗೆಲುವು: ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆ ಫಲಿತಾಂಶ ಪ್ರಕಟ

ಮುದ್ದೇಬಿಹಾಳ : ಪಟ್ಟಣದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ನಾಮಪತ್ರ ತಿರಸ್ಕೃತಗೊಂಡು ಹೈಕೋರ್ಟ್ ಆದೇಶದೊಂದಿಗೆ ಕಣದಲ್ಲಿ ಉಳಿದಿದ್ದ ನಾಲ್ವರು ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದ್ದಾರೆ. ಪಟ್ಟಣದ ಅಂಜುಮನ್ ಹೈಸ್ಕೂಲ್‌ನಲ್ಲಿ ಸೋಮವಾರ ಸಂಜೆ 4.30ಕ್ಕೆ ಆರಂಭಗೊoಡ ಮತ ಎಣಿಕೆ ಕಾರ್ಯ ರಾತ್ರಿ 12 ಗಂಟೆಗೆ ಪೂರ್ಣಗೊಂಡಿತು.ಮತಎಣಿಕೆ ಕಾರ್ಯವನ್ನು ಕಂದಾಯ ಇಲಾಖೆಯವರಿಗೆ ವಹಿಸಿದ್ದರಿಂದ ಯಾವುದೇ ಗೊಂದಲಗಳಿಲ್ಲದoತೆ ಫಲಿತಾಂಶ ಪ್ರಕಟಿಸಲಾಯಿತು. ಚುನಾವಣಾಧಿಕಾರಿಯೂ ಆಗಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ್,