
ನಿಡಗುಂದಿ : ಕಲಿಕಾ ಸಾಮಗ್ರಿ ಸರ್ಕಾರಿ ಶಾಲೆಗಳ ಬಡ ಮಕ್ಕಳ ಕಲಿಕೆಗೆ ಸಹಕಾರಿಯಾಗಿವೆ ಎಂದು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಡಿ. ಬಿ. ಕುಪ್ಪಸ್ತ ಹೇಳಿದರು.

ಗೊಳಸಂಗಿ ಗ್ರಾಮದ ಮಾದರಿ ಬಡಾವಣೆಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಬಿಜಾಪುರ-ಹುನಗುಂದ ಟೋಲ್ ವೇ ಪ್ರೈವೇಟ್ ಲಿ (ಬಿಎಚ್‌ಟಿಪಿಎಲ್) ನಿರ್ದೇಶನದಂತೆ ಮೇಕಿಂಗ್ ದಿ ಡಿಫರೆನ್ಸ್ ಚಾರಿಟೇಬಲ್ ಟ್ರಸ್ಟ್ ಶುಕ್ರವಾರ ವಿತರಿಸಿದ ಶೈಕ್ಷಣಿಕ ಸಲಕರಣೆ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಮನಗೂಳಿ, ಮುಖ್ಯಗುರು ಬಸವರಾಜ ಜಾನಕರ, ಶಿಕ್ಷಕಿ ರಾಧಾ ಹಂಗರಗಿ, ಬಿಎಚ್‌ಟಿಪಿಎಲ್ ಮತ್ತು ಮೇಕಿಂಗ್ ದಿ ಪಿಫರೆನ್ಸ್ ಚಾರಿಟೇಬಲ್ ಟ್ರಸ್ಟ್ ಅಧಿಕಾರಿಗಳು ಇದ್ದರು.
ಮಕ್ಕಳ ಕಲಿಕೆಗೆ ಪೂರಕವಾಗಿ 5 ಟೇಬಲ್, 21 ಖುರ್ಚಿ, 37 ಸ್ಕೂಲ್ ಬ್ಯಾಗ್, ತಲಾ ಒಂದು ವ್ಹಾಲಿಬಾಲ್ ನಟ್, ಕ್ರಿಕೇಟ್ ಕಿಟ್, ರಿಂಗ್, ಜಂಪಿAಗ್ ರೋಪ್, ಕೇರಂ ಬೋರ್ಡ್, ಚೆಸ್ ಬೋರ್ಡ್, ಗ್ಲೋಬ್‌ಗಳನ್ನು ನೀಡಲಾಯಿತು.