CM Siddaramaiah insulted by private news channel..! Magnificent Narasimhamurthy painted by Grahachara

CM Siddaramaiahಗೆ ಖಾಸಗಿ ಸುದ್ದಿವಾಹಿನಿ ಅವಹೇಳನ..! ಗ್ರಹಚಾರ ಬಿಡಿಸಿದ ಭವ್ಯ ನರಸಿಂಹಮೂರ್ತಿ (ವಿಡಿಯೋ ವೈರಲ್)

CM Siddaramaiahಗೆ ಖಾಸಗಿ ಸುದ್ದಿವಾಹಿನಿ ಅವಹೇಳನ..! ಗ್ರಹಚಾರ ಬಿಡಿಸಿದ ಭವ್ಯ ನರಸಿಂಹಮೂರ್ತಿ (ವಿಡಿಯೋ ವೈರಲ್)

ನವದೆಹಲಿ: ಮೂಡಾ ಹಗರಣದ ಆರೋಪದ ಕುರಿತು ಸಿಎಂ ಸಿದ್ದರಾಮಯ್ಯರ (CM Siddaramaiah) ಕುರಿತು ದೇಶಾದ್ಯಂತ ಚರ್ಚೆ ಜೋರಾಗಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada

ಈ ಕುರಿತು ಖಾಸಗಿ ಸುದ್ದಿ ವಾಹಿನಿಗಳು ಡಿಬೆಟ್ ಮೇಲೆ ಡಿಬೆಟ್ ನಡೆಸುತ್ತಿವೆ. ಹೀಗೆ ಡಿಬೆಟ್ ನಡೆಸುತ್ತಿದ್ದ ಖ್ಯಾತ ಸುದ್ದಿ ವಾಹಿನಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಹೇಳನ ಮಾಡಿತು. ಆಗ ಡಿಬೆಟ್‌ನಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ಮೂರ್ತಿ ಅವರಿಂದ ಛೀಮಾರಿ ಹಾಕಿದ್ದಾರೆ.

ಖ್ಯಾತ ಖಾಸಗಿ ಸುದ್ದಿವಾಹಿನಿ ಎನ್‌ಡಿಟಿವಿಯಲ್ಲಿ ಮೂಡಾ ಹಗರಣದ ಡಿಬೆಟ್ ವೇಳೆ ಸುದ್ದಿ ವಾಹನಿ ಟ್ಯಾಗ್ಲೈನ್ ನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಸಿದ್ದ ಎಂದು ನಮೂದಿಸಿದ್ದು, ಡಿಬೆಟ್ ನಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ಅವರನ್ನು ಕೆರಳಿಸಿದೆ.

ಡಿಬೆಟ್ ನಲ್ಲಿ ಮಾತನಾಡುವ ಸರದಿ ಬರುವವರೆಗೆ ತಾಳ್ಮೆಯಿಂದ ಕಾದ ಭವ್ಯ ನರಸಿಂಹಮೂರ್ತಿ, ನ್ಯೂಸ್ ಆ್ಯಂಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳನ್ನು ಸಿದ್ದ ಎಂದು ನಿಮ್ಮ ಸುದ್ದಿ ವಾಹಿನಿ ಅವಹೇಳನಕಾರಿಯಾಗಿ ಉಲ್ಲೇಖಿಸುವುದನ್ನು ಸಹಿಸಲು ಸಾಧ್ಯವಿಲ್ಲ, ಇದು ಗೌರವವಲ್ಲ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವೇಂದು ನರೇಂದ್ರ, ನರೇನ್ ಎಂದು ಹೆಸರನ್ನು ಬಳಸುವುದಿಲ್ಲ. ನರೇಂದ್ರ ಮೋದಿ ಅವರಿಗೆ ಕೊನೆಯ ಹೆಸರಿದೆ. ಆದರೆ ಸಿದ್ದರಾಮಯ್ಯ ಅವರಿಗೆ ಕೊನೆಯ ಹೆಸರಿಲ್ಲ. ಈ ಕೂಡಲೇ ಸಿದ್ದರಾಮಯ್ಯ ಅವರನ್ನು ಗೌರವ ಪೂರ್ವಕವಾಗಿ ಪೂರ್ತಿಯಾಗಿ ಬಳಸಬೇಕು ಎಂದು ತಾಕೀತು ಮಾಡಿದರು‌.

ಸಿದ್ದರಾಮಯ್ಯ ಅವರು ಕರ್ನಾಟಕದ ಹಿರಿಯ ಮುಖಂಡರಾಗಿದ್ದಾರೆ. ಸಾಂವಿಧಾನಿಕವಾಗಿ ಉನ್ನತ ಹುದ್ದೆಯಲ್ಲಿದ್ದಾರೆ ಎಂಬುದನ್ನು ತಿಳಿಯಬೇಕೆಂದು ಆಗ್ರಹಿಸಿದರು.

ಕೂಡಲೇ ಆದ ತಪ್ಪಿಂದ ಹೆಚ್ಚೆತ್ತ ಸುದ್ದಿ ವಾಹಿನಿ ಆ್ಯಂಕರ್ ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ: ಸ್ಪರ್ಧೆ ಗೆದ್ದು ಬೈಕ್ ಏರಿದ ಟಗರು..!

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ‌.

Latest News

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ನಾರಾಯಣಪುರ : ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ಕೊಡೇಕಲ್ ಉಪತಶೀಲ್ದಾರ ಕಲ್ಲಪ್ಪ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಕೊಡೇಕಲ್ : ‘ಬರೀ ಭ್ರಷ್ಟಾಚಾರ ಮರಾಯ, ನಾನು ಬ್ರಿಟಿಷ್ ಕಾಲದಲ್ಲಿ ಇಂತಹ ಅವ್ಯವಸ್ಥೆ ದುರಾಡಳಿತ

ತ್ರಿವೇಣಿ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ತ್ರಿವೇಣಿ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

​ ಮುಧೋಳ : ದೇಶಾಭಿಮಾನ ಪ್ರತಿಯೊಬ್ಬರಲ್ಲಿ ಸ್ವಪ್ರೇರಣೆಯಿಂದ ಮೂಡಿದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಲು

ಮಕ್ಕಳ ಮನಸ್ಸಿನಲ್ಲಿ ದೇಶಪ್ರೇಮದ ಬೀಜ ಬಿತ್ತಿ : ಅಶೋಕ ಮಣಿ

ಮಕ್ಕಳ ಮನಸ್ಸಿನಲ್ಲಿ ದೇಶಪ್ರೇಮದ ಬೀಜ ಬಿತ್ತಿ : ಅಶೋಕ ಮಣಿ

ಮುದ್ದೇಬಿಹಾಳ : ಮಕ್ಕಳ ಮನಸ್ಸಿನಲ್ಲಿ ಬಾಲ್ಯದಿಂದಲೇ ದೇಶಪ್ರೇಮದ ಬೀಜ ಬಿತ್ತಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ

ಬೆಳೆ ಸಮೀಕ್ಷೆದಾರರಿಗೆ ಕಿಟ್ ವಿತರಣೆ

ಬೆಳೆ ಸಮೀಕ್ಷೆದಾರರಿಗೆ ಕಿಟ್ ವಿತರಣೆ

ಮುದ್ದೇಬಿಹಾಳ : ರೈತರ ಬೆಳೆದ ಬೆಳೆ ವಿವರಗಳನ್ನು ದಾಖಲಿಸುವಲ್ಲಿ ಬೆಳೆಯ ಸಮೀಕ್ಷೆದಾರರ ಪಾತ್ರವು ಅತಿ ಮುಖ್ಯವಾಗಿದ್ದು ಅವರ ಬೇಡಿಕೆಯಂತೆ ಐಡಿ ಕಾರ್ಡ್ ಹಾಗೂ ಕಿಟ್ ವಿತರಿಸಲಾಗಿದೆ ಎಂದು ತಹಸೀಲ್ದಾರ್ ಕೀರ್ತಿ ಚಾಲಕ್ ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರ ಹಾಗೂ ಸರ್ಕಾರದ ಪ್ರತಿನಿಧಿಯಾಗಿ ಈ ಬೆಳೆ ಸಮೀಕ್ಷೆದಾರರು ಕಾರ್ಯನಿರ್ವಹಿಸಲಿದ್ದಾರೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಎಸ್. ಡಿ. ಭಾವಿಕಟ್ಟಿ, ಕೃಷಿ ಅಧಿಕಾರಿಗಳಾದ ಗೋವಿಂದರೆಡ್ಡಿ

ಬಲಗೈ ಸಮುದಾಯದಿಂದ ಪ್ರತಿಭಟನೆ ನ್ಯಾ. ನಾಗಮೋಹನ್‌ದಾಸ್ ವರದಿ ತಿರಸ್ಕರಿಸಲು ಆಗ್ರಹ

ಬಲಗೈ ಸಮುದಾಯದಿಂದ ಪ್ರತಿಭಟನೆ ನ್ಯಾ. ನಾಗಮೋಹನ್‌ದಾಸ್ ವರದಿ ತಿರಸ್ಕರಿಸಲು ಆಗ್ರಹ

ಮುದ್ದೇಬಿಹಾಳ : ಕುಲಶಾಸ್ತ್ರಿಯ ಅಧ್ಯಯನದ ಕೊರತೆ, ಬಲಗೈ ಸಮುದಾಯದ ವಿರುದ್ಧ ದ್ವೇಷಪೂರಿತ ನಿರ್ಧಾರವಾಗಿರುವ ಒಳಮೀಸಲಾತಿ ಕೊಡುವ ಹಿನ್ನೆಲೆಯಲ್ಲಿ ನ್ಯಾ. ನಾಗಮೋಹನದಾಸ್ ನೀಡಿರುವ ವರದಿಯನ್ನು ಸರ್ಕಾರ ಅಂಗೀಕರಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ತಾಲ್ಲೂಕು ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಅಂಬೇಡ್ಕರ್ ಸರ್ಕಲ್‌ದಿಂದ ಆರಂಭಗೊಂಡ ಪ್ರತಿಭಟನೆ ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ, ತಹಸೀಲ್ದಾರ್ ಕಚೇರಿಗೆ ಆಗಮಿಸಿತು. ಮುಖಂಡ ಹರೀಶ ನಾಟೀಕಾರ, ಚೆನ್ನಪ್ಪ ವಿಜಯಕರ್