Tagaru who won the competition and got on the bike

ಸ್ಪರ್ಧೆ ಗೆದ್ದು ಬೈಕ್ ಏರಿದ ಟಗರು..!

ಸ್ಪರ್ಧೆ ಗೆದ್ದು ಬೈಕ್ ಏರಿದ ಟಗರು..!

ಕುಷ್ಟಗಿ : ತಾಲೂಕಿನ ಕುಂಬಳಾವತಿ ಗ್ರಾಮದಲ್ಲಿ ನಡೆದ ರಾಜ್ಯ ಮಟ್ಟದ ಟಗರಿನ ಕಾಳಗ ಸ್ಪರ್ಧೆಯಲ್ಲಿ ಕುಷ್ಟಗಿ ಟಗರು ಸೆಣಸಾಡಿ ಅಂದಾಜು 1 ಲಕ್ಷ ರೂಪಾಯಿ ಬೆಲೆ ಬಾಳುವ ಹೊಸ ಬೈಕ್ ಗೆದ್ದುಕೊಂಡಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada

ಶ್ರಾವಣ ಮಾಸದ ನಿಮಿತ್ತ ಕುಂಬಳಾವತಿ ಗ್ರಾಮದ ಶ್ರೀದ್ಯಾಮಾಂಭಿಕಾ ದೇವಿ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ರಾಜ್ಯ ಮಟ್ಟದ ಟಗರಿನ ಕಾಳಗ ಓಪನ್ ಸ್ಪರ್ಧೆ ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಕಡೆಯಿಂದ 8 ಹಲ್ಲಿನ 40ಕ್ಕೂ ಹೆಚ್ಚು ಟಗರುಗಳು ಭಾಗವಹಿಸಿದ್ದವು.

4 ಸುತ್ತುಗಳ ಈ ಸ್ಪರ್ಧೆಯಲ್ಲಿ ಬಲಾಢ್ಯ ಎದುರಾಳಿ ಟಗರು ಗಳನ್ನು ಕುಷ್ಟಗಿ ಟಗರು ಸೆಣೆಸಾಡಿ ಮಹಾ ಬಲಾಢ್ಯ ಎನಿಸಿಕೊಂಡಿತು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಗುಡದೂರಿನ ಬಲಿಷ್ಠ ಟಗರಿನ ಜೊತೆಗೆ ತೀವ್ರ ಸೆಣಸಾಡಿ ಕೊನೆಗೆ ಗೆದ್ದ ಕುಷ್ಟಗಿ ಟಗರು, ಅಂದಾಜು 1 ಲಕ್ಷ ರೂ. ಬೆಲೆ ಬಾಳುವ ಹೊಸ ಬೈಕ್ ಬಹುಮಾನವಾಗಿ ಪಡೆದುಕೊಂಡಿದೆ.

ಹರ್ಷ: ರಾಜ್ಯದ ಐದು ಕಡೆಗಳಲ್ಲಿ ನಡೆದ ಓಪನ್ ಟಗರಿನ ಕಾಳಗ ಸ್ಪರ್ಧೆಯಲ್ಲಿ ನಮ್ಮ ಟಗರು ಭಾಗವಹಿಸಿತ್ತು. ಸ್ವಲ್ಪ ಅಂತರದಲ್ಲಿಯೇ ಸೋತಿತ್ತು. ಆದರೆ ಎದುರಾಳಿ ಟಗುರುಗಳಿಗೆ ಸಾಕಷ್ಟು ಹಾನಿ ಮಾಡಿತ್ತು.

ಒಟ್ಟು 5 ರಾಜ್ಯ ಮಟ್ಟದ ಕಾಳಗ ಸ್ಪರ್ಧೆಗಳಲ್ಲಿ ಎರಡರಲ್ಲಿ ಗೆದ್ದು ಬಹುಮಾನ ಗೆದ್ದುಕೊಟ್ಟಿದೆ. ಈ ಹಿಂದೆ ಸೂಳಿಬಾವಿಯಲ್ಲಿ ನಡೆದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು 30 ಸಾವಿರ ರೂ. ನಗುದು ಬಹುಮಾನಗಳಿಸಿ ಕೊಟ್ಟಿದೆ. ಮುಂದಿನ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಲಿದೆ ಎಂಬ ವಿಶ್ವಾಸ ನಮಗಿತ್ತು.

ಇದನ್ನೂ ಓದಿ: Accident news: ಹೋಟೆಲ್‌ಗೆ ನುಗ್ಗಿದ ಟಿಪ್ಪರ್: ಇಬ್ಬರ ಸಾವು

ಸದ್ಯದ ಕುಂಬಳಾವತಿಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ನಮಗೆ ಬಹುಮಾನವಾಗಿ ಬೈಕ್ ತಂದುಕೊಟ್ಟ ನಮ್ಮ ಬಲಾಢ್ಯ ಟಗರಿನ ಬಗ್ಗೆ ನಮಗೆ ಹೆಮ್ಮೆ ಇದೆ. ಅದನ್ನು ಪ್ರೀತಿಯಿಂದ ಗಾಂಧಿನಗರ ಗೂಳಿ ಎಂತಲೇ ಕರೆಯುತ್ತೇವೆ ಎಂದು ಹರುಷ ವ್ಯಕ್ತ ಪಡಿಸುತ್ತಾರೆ ಕುಷ್ಟಗಿ ಟಗರಿನ ಮಾಲೀಕರಾದ ಜಂಬಣ್ಣ ಡೊಳ್ಳಿನ ಸಾ.ಬೆಂಚಮಟ್ಟಿ ಹಾಗೂ ದಾವಲ್ ಕಾಯಗಡ್ಡಿ.

Latest News

BREAKING: ಭೀಕರ ಅಪಘಾತ.. ಐವರು ಸಾವು

BREAKING: ಭೀಕರ ಅಪಘಾತ.. ಐವರು ಸಾವು

ಯಾದಗಿರಿ: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬೈಕ್‌'ಗೆ ಸಾರಿಗೆ ಬಸ್‌ ಡಿಕ್ಕಿಯಾಗಿ ಐವರು

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

ಗೃಹಲಕ್ಷ್ಮಿ ಯೋಜನೆಯ (Gruhalakshmi Yojane) 16ನೇ ಕಂತಿನ ಹಣದ ಕುರಿತು ಮಾಹಿತಿ ಇಲ್ಲಿದೆ. ಪ್ರತಿ

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: ಸರ್ಕಾರದಿಂದ ಆಧಾರ್ ಕಾರ್ಡ್ ಹೊಂದಿದವರಿಗೆ 5 ಹೊಸ ರೂಲ್ಸ್ ಜಾರಿ ಮಾಡಿದೆ. ಈ ಐದೂ ನಿಮಯ ಪಾಲಿಸದಿದ್ದರೆ ದಂಡ ಗ್ಯಾರಂಟಿ! ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬ ನಾಗರಿಕನ ಅಗತ್ಯ ದಾಖಲೆಯಾಗಿ ಗುರುತಿಸಲಾಗಿದೆ. ಇದು ನಮ್ಮ ಗುರುತಿನ ಕಡ್ಡಾಯ ದಾಖಲೆಯಾಗಿದೆ. ಎಲ್ಲಾ ಸರ್ಕಾರಿ ಯೋಜನೆಗಳು ಮತ್ತು ಹಣಕಾಸು ಸೇವೆಗಳು ನಮ್ಮನ್ನು ತಲುಪಲು ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಅಗತ್ಯವಿರುತ್ತದೆ. Join Our Telegram: https://t.me/dcgkannada

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕಳಪೆ ಫಾರ್ಮ್ ನಿಂದ ನಿವೃತ್ತಿ ಕುರಿತು ಚರ್ಚೆ ಶುರುವಾಗಿದೆ. ಈ ಸರಣಿಯಲ್ಲಿ 9 ಇನಿಂಗ್ಸ್ ಆಡಿದ್ದ ವಿರಾಟ್ ಕೊಹ್ಲಿ 23.75 ರ ಕಳಪೆ ಸರಾಸರಿಯೊಂದಿಗೆ 190 ರನ್ ಮಾತ್ರ ಕಲೆಹಾಕಿದ್ದಾರೆ. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಕೊಹ್ಲಿ ನಿವೃತ್ತರಾಗುವುದು ಉತ್ತಮ ಎಂಬ ಕೂಗುಗಳು ಕೇಳಿಬಂದಿದ್ದವು. ಆದರೀಗ ವಿರಾಟ್ ಕೊಹ್ಲಿ ತಾವು ಯಾವಾಗ ನಿವೃತ್ತಿ ಆಗುತ್ತೇನೆ ಎಂಬುದರ