ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿ ಆದರ್ಶ ವಿದ್ಯಾಲಯದಲ್ಲಿ ಸನ್ 2024-25ನೇ ಸಾಲಿನ ತರಗತಿ ದಾಖಲಾತಿಗಾಗಿ 4ನೇ ಸುತ್ತಿನ ಕೌನ್ಸಲಿಂಗ ಪ್ರಕ್ರಿಯೆ ಆ.13 ಹಾಗೂ 14 ರಂದು ಬಿದರಕುಂದಿ ಆರ್.ಎಂ.ಎಸ್.ಎ ಶಾಲೆ (Bidarakunde RMSA school) ಯಲ್ಲಿ ಹಮ್ಮಿಕೊಳ್ಳಲಾಗಿದೆ.
Join Our Telegram: https://t.me/dcgkannada
6ನೇ ತರಗತಿ ದಾಖಲಾತಿಗಾಗಿ ಮೀಸಲಾತಿವಾರು ಖಾಲಿ ಇರುವ ಸ್ಥಾನಗಳಿಗೆ ಈಗಾಗಲೇ 1,2,3ನೇ ಸುತ್ತಿನ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು ಉಳಿದ ಆರು ಸ್ಥಾನಗಳಿಗೆ 1:20 ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಬಿಇಒ ಹಾಗೂ ಶಾಲೆಯ (Bidarakundi RMSA school) ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಆ.13 ರಂದು ಬೆಳಗ್ಗೆ 10ಕ್ಕೆ ಒಂದು ಸಾಮಾನ್ಯ ಸ್ಥಾನಕ್ಕೆ ಹಾಗೂ ಆ.14 ರಂದು ಬೆಳಗ್ಗೆ 10ಕ್ಕೆ ಐದು ಮೀಸಲಾತಿ ವರ್ಗದ ಸ್ಥಾನಗಳಿಗೆ ಕೌನ್ಸಲಿಂಗ್ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ಬಿಇಒ ಬಿ.ಎಸ್.ಸಾವಳಗಿ ಹಾಗೂ ಆರ್.ಎಂ.ಎಸ್.ಎ ಶಾಲೆ ಮುಖ್ಯಗುರು ಸಂಗಮೇಶ ಸಜ್ಜನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.