ಮಂಡ್ಯ: ರೈಲ್ವೆ ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ (Train accident) ಯುವತಿಯೊಬ್ಬರು ದಾರುಣ ಸಾವನ್ನಪ್ಪಿರುವ ಘಟನೆ ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ನಗರದ ಸ್ವರ್ಣಸಂದ್ರ ನಿವಾಸಿ ನರಸಿಂಹ ಮೂರ್ತಿ ಪುತ್ರಿ, ಚಿನ್ನದ ಪದಕ ವಿಜೇತೆ 24 ವರ್ಷದ ಎನ್.ರಮ್ಯಾ ಮೃತ ಯುವತಿ ಎಂದು ಗುರುತಿಸಲಾಗಿದೆ.
Join Our Telegram: https://t.me/dcgkannada
ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಬಿಕಾಂನಲ್ಲಿ ಪ್ರಥಮ ಬ್ಯಾಂಕ್ ಹಾಗೂ ಮೈ ಸೂರಿನ ಮಾನಸ ಗಂಗೋತ್ರಿ ಯಲ್ಲಿ ಎಂಕಾಂನಲ್ಲಿ ದ್ವಿತೀಯ ಬ್ಯಾಂಕ್ ಪಡೆದು ಚಿನ್ನದ ಪದಕ ಗಳಿಸಿದ್ದರು.
ಕಳೆದ 10 ತಿಂಗಳಿಂದ ತಂದೆ ನರಸಿಂಹ ಮೂರ್ತಿ ಅವರೊಂದಿಗೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಚಾರ್ಟಡ್ ಅಕೌಂಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ: Kodishree: ಶ್ರಾವಣದಲ್ಲೂ ಕಂಟಕ! ಕೋಡಿಶ್ರೀ ಭಯಾನಕ ಭವಿಷ್ಯ!
ಗುರುವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಲು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಸಹೋದರ ರೈಲ್ವೆ ನಿಲ್ದಾಣಕ್ಕೆ ಮೊದಲು ತಂದೆಯನ್ನು ಬಿಟ್ಟು ನಂತರ ಸಹೋದರಿ ಎನ್.ರಮ್ಯಾ ಅವರನ್ನು ಕರೆತಂದು ಬಿಟ್ಟಿದ್ದಾರೆ. ರೈಲ್ವೆ ಹಳಿ ದಾಟಲು ಹೋದಾಗ ಬೆಂಗಳೂರು ಕಡೆಯಿಂದ ಮೈಸೂರು ಮಾರ್ಗವಾಗಿ ಸಂಚಿರಿಸುತ್ತಿದ್ದ ಹಂಪಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಮೈಸೂರಿನಿಂದ ಬೆಂಗಳೂರು ಕಡೆಗೆ ತೆರಳುವ ವಾರಾಣಸಿ ರೈಲು ನಿಲ್ದಾಣಕ್ಕೆ ಬರಲು ಇನ್ನೂ ಹತ್ತು ನಿಮಿಷ ಕಾಲವಕಾಶವಿತ್ತು. ಅದರೂ ರಮ್ಯಾ ಅತುರಾತುರದಿಂದ ರೈಲು ಹಳಿ (Train accident) ದಾಟಲು ಹೋಗಿದ್ದೇ ಈ ದುರ್ಘಟನೆಗೆ ಕಾರಣ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಮಗಳನ್ನು ಕಳೆದುಕೊಂಡ ಕುಟುಂಬದವರ ರೋಧನೆ ಮುಗಿಲು ಮುಟ್ಟಿತ್ತು. ಘಟನೆಗೆ ಸಂಬಂಧಿಸಿದಂತೆ ಮಂಡ್ಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.