ಬೆಂಗಳೂರು: ಯುವಕನೊಬ್ಬನನ್ನು ತೃತೀಯಲಿಂಗಿಯಾಗಿ ಪರಿವರ್ತನೆಯಾಗುವಂತೆ ಒತ್ತಾಯಿಸಿ ಬಲವಂತವಾಗಿ ಆತನ ಪ್ರಜ್ಞೆ ತಪ್ಪಿಸಿ ಮರ್ಮಾಂಗ ಕತ್ತರಿಸಿ ಹಿಂಸೆ ನೀಡಿದ ಆರೋಪದಲ್ಲಿ ಐವರು ತೃತೀಯ ಲಿಂಗಿಗಳ ವಿರುದ್ಧ ಪುಲಿಕೇಶಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ. (Crime news)
ಚಿತ್ರಾ, ಅಶ್ವಿನಿ, ಕಾಜಲ್, ಪ್ರೀತಿ ಹಾಗೂ ಮುಗಿಲ ಎಂಬ ತೃತೀಯ ಲಿಂಗಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿ ಬಲೆ ಬೀಸಿದ್ದಾರೆ.
Join Our Telegram: https://t.me/dcgkannada
ಏನಿದು ಪ್ರಕರಣ?:
ದೂರುದಾರ ಯುವಕ 3 ವರ್ಷದ ಹಿಂದೆ ಅಂಬೇಡ್ಕರ್ ಕಾಲೇಜು ಬಳಿ ಟೀ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಆರೋಪಿಗಳು ಟೀ ಕುಡಿಯಲು ಆಗಾಗ ಅಂಗಡಿಗೆ ಬರುತ್ತಿದ್ದರು. ಈ ವೇಳೆ ಯುವಕನನ್ನು ಪರಿಚಯಿಸಿ ಕೊಂಡು, ನೀನು ನಮ್ಮ ಜತೆ ಬಂದರೆ ಒಳ್ಳೆಯ ಮನೆ ಹೆಣ್ಣಾದರೆ ಹೆಚ್ಚು ದುಡಿಯುವೆ ಎಂದು ಯುವಕನಿಗೆ ಒತ್ತಾಯ ಅದಕ್ಕೆ ಇಂಜೆಕ್ಷನ್ ನೀಡಿ ಶಸ್ತ್ರಚಿಕಿತ್ಸೆಯಲ್ಲಿ ಇರಿಸಿ ಸಂಪಾದನೆಗೆ ದಾರಿ ಮಾಡಿಕೊಡುವು ದಾಗಿ ಪುಸಲಾಯಿಸಿದ್ದಾರೆ. ಯುವಕ ನಾನು ಬರು ವುದಿಲ್ಲ ಎಂದರೂ ಬಲವಂತವಾಗಿ ಟ್ಯಾನರಿ ರಸ್ತೆಯ ಮನೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ.
ಪೋಷಕರ ಕೊಲೆ ಮಾಡುವುದಾಗಿ ಬೆದರಿಕೆ:
ನೀನು ಭಿಕ್ಷಾಟನೆ ಮಾಡದಿದ್ದರೆ, ನಿನ್ನ ಮನೆಯವರನ್ನು ಕೊಲೆ ಮಾಡುವುದಾಗಿ ಯುವಕನನ್ನು ಬೆದರಿಸಿದ್ದಾರೆ. ಬಲವಂತವಾಗಿ 3 ವರ್ಷಗಳ ಕಾಲ ಯುವಕನಿಂದ ಭಿಕ್ಷಾಟನೆ ಮಾಡಿಸಿ ಹಣ ಪಡೆದಿದ್ದಾರೆ. ಕಳೆದ ಜು.17ರಂದು ನೀನು ಗಂಡಸಾಗಿ ರುವಾಗಲೇ ಪ್ರತಿ ದಿನ 2000 ರು. ದುಡಿದು ಕೊಡುತ್ತಿರುವೆ. ನೀನು ಹೆಣ್ಣಾದರೆ ಹೆಚ್ಚು ದುಡಿಯಬಹುದು ಎಂದಿದ್ದಾರೆ. (Crime news)
ಪ್ರಜ್ಞೆ ತಪ್ಪಿಸಿ ಮರ್ಮಾಂಗ ಕತ್ತರಿಸಿದರು: ಬಳಿಕ ಆರೋಪಿಗಳು ಗಾಂಜಾ, ಮದ್ಯ ಸೇವಿಸಿ ಮಹಿಳೆ ಯೊಬ್ಬಳನ್ನು ಮನೆಗೆ ಕರೆಸಿಕೊಂಡು ಬಲವಂತವಾಗಿ ಯುವಕನಿಗೆ ಇಂಜೆಕ್ಷನ್ ನೀಡಿ ಪ್ರಜ್ಞೆ ತಪ್ಪಿಸಿದ್ದಾರೆ. ನಂತರ ಆತನ ಮರ್ಮಾಂಗ ಕತ್ತರಿಸಿದ್ದಾರೆ. ಆತ ಎಚ್ಚರಗೊಂಡಾಗ ಮರ್ಮಾಂಗದ ಬಳಿ ರಕ್ತಗಾಯ ವಾಗಿದ್ದು, ಪೈಪ್‌ವೊಂದನ್ನು ಅಳವಡಿಸಿರುವುದು ಕಂಡು ಬಂದಿದೆ. ಬಳಿಕ ಆರೋಪಿಗಳು ಯುವಕನನ್ನು ಆ.3ರ ವರೆಗೂ ಆ ಮನೆಯಲ್ಲೇ ಕೂಡಿ ಹಾಕಿ ಬಳಿಕ ಬೇರೆಡೆ ಕರೆದೊಯು ಪೂಜೆ ಮಾಡಿಸಿದ್ದಾರೆ.
ಲೈಂಗಿಕ ಕಾರ್ಯಕರ್ತೆ ಕೆಲಸಕ್ಕೆ ಒತ್ತಾಯ:
ಇನ್ನು ಮುಂದೆ ನೀನು ಭಿಕ್ಷಾಟನೆ ಮಾಡುವುದರ ಜತೆಗೆ ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಯುವಕ ಒಪ್ಪದಿದ್ದಾಗ 5 ಲಕ್ಷ ರು. ಕೊಡುವಂತೆ ಒತ್ತಾಯಿಸಿದ್ದಾರೆ. ಆರೋಪಿ ಗಳ ಹಿಂಸೆ ತಾಳಲಾರದೆ ತಪ್ಪಿಸಿಕೊಂಡುದೂರು ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Astrology: ನಿಮಗೆ ಹಣದ ಸಮಸ್ಯೆ ಉಂಟಾಗುವ ಸಾಧ್ಯತೆ.. ದಿನ ಭವಿಷ್ಯ: ಬುಧವಾರ, ಆಗಸ್ಟ್ 21, 2024, ದೈನಂದಿನ ರಾಶಿ ಭವಿಷ್ಯ