Murder Case Image of murder symbol

Crime story: ದಾಂಪತ್ಯದಲ್ಲಿ ವಿರಸ.. ಪತ್ನಿ ಕೊಲೆಯಲ್ಲಿ ಅಂತ್ಯ..!

Crime story: ದಾಂಪತ್ಯದಲ್ಲಿ ವಿರಸ.. ಪತ್ನಿ ಕೊಲೆಯಲ್ಲಿ ಅಂತ್ಯ..!

ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತ್ನಿಗೆ ಪತಿಯೊಬ್ಬ ಚಾಕುವಿನಿಂದ ಇರಿದು ಹತ್ಯೆಗೈದಿದ್ದ (Crime Story). ಈ ಕುಕೃತ್ಯ ಎಸಗಿದ ಪತಿಯನ್ನು ಕೃತ್ಯ ನಡೆದ ಕೆಲವೇ ತಾಸಿನಲ್ಲಿ ಕೆಂಗೇರಿ ಠಾಣೆ ಪೊಲೀಸರು ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಟ್ಟಿಗನಹಳ್ಳಿ ನಿವಾಸಿ ಗೌರಿ (30) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ. ಇನ್ನು ಈ ಕೃತ್ಯದ (Crime story) ಸಂಬಂಧ ಮೃತಳ ಪತಿ ನಾಗೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Join Our Telegram: https://t.me/dcgkannada

ಜಟ್ಟಿಗನಹಳ್ಳಿ ಸ್ಮಶಾನ ಸಮೀಪ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಕೊಂದು ನಾಗೇಶ್ ಪರಾರಿಯಾಗಿದ್ದ. ಖಾಲಿ ಪ್ರದೇಶದಲ್ಲಿ ರಕ್ತದ ಮಡುವಿನಲ್ಲಿ ಅಪರಿಚಿತ ಮೃತದೇಹವನ್ನು ಕಂಡು
ಪೊಲೀಸ್ ನಿಯಂತ್ರಣ ಕೊಠಡಿಗೆ ಬೆಳಗ್ಗೆ ಸಾರ್ವಜನಿಕರು ಕರೆ ಮಾಡಿದ್ದರು.

ಈ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಕೂಡಲೇ ಮೃತಳ ಗುರುತು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Murder Case: ವಿಚ್ಛೇದನ‌ ಕೇಳಿದ ಪತ್ನಿ.. ದೇಗುಲಕ್ಕೆ ಕರೆದುಕೊಂಡು ಹೋಗಿ ಹತ್ಯೆಗೈದ ಪತಿ..!

ಎಂಟು ವರ್ಷಗಳ ಹಿಂದೆ ರಾಮನಗರ ಜಿಲ್ಲೆಯ ಗೌರಿ ಹಾಗೂ ನಾಗೇಶ್ ವಿವಾಹವಾಗಿದ್ದರು. ಇತ್ತೀಚೆಗೆ ಕೌಟುಂಬಿಕ ಕಾರಣಕ್ಕೆ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಇದೇ ವಿಚಾರವಾಗಿ ಪರಸರ ಜಗಳವಾಡುತ್ತಿದ್ದರು. ಕೊನೆಗೆ ದಾಂಪತ್ಯ ವಿರಸ ಕೊಲೆಯಲ್ಲಿ ಅಂತ್ಯವಾಗಿದೆ.

Latest News

ಅಂಗಡಿಯಾತನಿಗೆ ಗನ್ ತೋರಿಸಿ ಹಾಡಹಗಲೇ ಬಂಗಾರದ ಅಂಗಡಿ ದರೋಡೆ

ಅಂಗಡಿಯಾತನಿಗೆ ಗನ್ ತೋರಿಸಿ ಹಾಡಹಗಲೇ ಬಂಗಾರದ ಅಂಗಡಿ ದರೋಡೆ

ವಿಜಯಪುರ : ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಭೂಮಿಕಾ ಜ್ಯುವೆಲ್ಲರಿ ಶಾಪ್‌ಗೆ ಇಬ್ಬರು

ಅರಣ್ಯ ಇಲಾಖೆ ಅಧಿಕಾರಿಗಳ ಸ್ಪಷ್ಟನೆ;                      ಮದರಿಯಲ್ಲಿ ಚಿರತೆ ಪ್ರತ್ಯಕ್ಷ ಫೋಟೋ ಅಸಲಿ ಅಲ್ಲ..!!

ಅರಣ್ಯ ಇಲಾಖೆ ಅಧಿಕಾರಿಗಳ ಸ್ಪಷ್ಟನೆ; ಮದರಿಯಲ್ಲಿ ಚಿರತೆ ಪ್ರತ್ಯಕ್ಷ ಫೋಟೋ ಅಸಲಿ ಅಲ್ಲ..!!

ಮುದ್ದೇಬಿಹಾಳ : ಸಾಮಾಜಿಕ ಜಾಲತಾಣಗಳ ಮೂಲಕ ಮದರಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ ಎನ್ನಲಾದ ಫೋಟೋ

ಸಾಂಸ್ಕೃತಿಕ ಕಾರ್ಯಕ್ರಮ:ಉರ್ದು ಹೆಣ್ಣು ಮಕ್ಕಳ ಶಾಲೆಗೆ ಪ್ರಥಮ

ಸಾಂಸ್ಕೃತಿಕ ಕಾರ್ಯಕ್ರಮ:ಉರ್ದು ಹೆಣ್ಣು ಮಕ್ಕಳ ಶಾಲೆಗೆ ಪ್ರಥಮ

ಮುದ್ದೇಬಿಹಾಳ ; ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸರಕಾರಿ

ಮೊಬೈಲ್‌ನಲ್ಲಿ ಒಳ್ಳೆಯದನ್ನೇ ವಿದ್ಯಾರ್ಥಿಗಳು ಗ್ರಹಿಸಿ-ಚಾಲಕ್

ಮೊಬೈಲ್‌ನಲ್ಲಿ ಒಳ್ಳೆಯದನ್ನೇ ವಿದ್ಯಾರ್ಥಿಗಳು ಗ್ರಹಿಸಿ-ಚಾಲಕ್

ಮುದ್ದೇಬಿಹಾಳ : ಸ್ವಾತಂತ್ರö್ಯಕ್ಕಾಗಿ ಮಡಿದ ಮಹನೀಯರ ತ್ಯಾಗ ಬಲಿದಾನದ ಸ್ಮರಣೆ ಮಾಡುವ ಕಾರ್ಯ ಆಗಬೇಕು.ಜಾತಿ,

ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ;                                                ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ; ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಮುದ್ದೇಬಿಹಾಳ : ನಾವು ಶಿಕ್ಷಣ ಕೊಡುವ ನೆಪದಲ್ಲಿ ನಮ್ಮ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿದ್ದೇವೆ.ಅವರು ಆಟಗಳಲ್ಲಿ ಭಾಗಿಯಾಗುವ ಸಮಯವನ್ನು ಕಡಿಮೆಗೊಳಿಸಿದ್ದೇವೆ.ಶೇ.95 ಪಡೆದುಕೊಂಡರೂ ಮಗುವಿಗೆ ಪ್ರೋತ್ಸಾಹಿಸದೇ ಶೇ.98 ತಗೆದುಕೊಳ್ಳುವವರೆಗೂ ನಮಗಿಂದು ಸಮಾಧಾನ ಇರುವುದಿಲ್ಲ.ಅಂಕಗಳ ಬೆನ್ನು ಹತ್ತಿದ್ದೇವೆ ಎಂದು ಗದಗನ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎ.ಎನ್.ನಾಗರಳ್ಳಿ ಹೇಳಿದರು. ಪಟ್ಟಣದ ಶ್ರೀ ಕೃಷ್ಣ ಮಂಗಲಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿoದ ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ಶೈಕ್ಷಣಿಕ

ವಿಜಯಪುರ ಡಿಡಿಪಿಐ ಕಚೇರಿ 14 ಸಿಬ್ಬಂದಿ ಎತ್ತಂಗಡಿ..!

ವಿಜಯಪುರ ಡಿಡಿಪಿಐ ಕಚೇರಿ 14 ಸಿಬ್ಬಂದಿ ಎತ್ತಂಗಡಿ..!

ವಿಜಯಪುರ : ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಿಂದ ಅ.3 , 2025 ರಿಂದ ಅ.6,2025ರವರೆಗೆ ವಿಜಯಪುರ ಶಾಲಾ ಶಿಕ್ಷಣ ಇಲಾಖೆಯ ಕಚೇರಿ ತಪಾಸಣೆ ನಡೆಸಿದಾಗ ಸಾರ್ವಜನಿಕರ ಕೆಲಸಗಳನ್ನು ವಿಳಂಬವಾಗಿ ಮಾಡುತ್ತಿದ್ದ 14 ಜನ ಸಿಬ್ಬಂದಿಯನ್ನು ಬೇರೆಡೆ ಎತ್ತಂಗಡಿ ಮಾಡಿ ಧಾರವಾಡದ ಅಪರ ಆಯುಕ್ತರು ಆದೇಶಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಯಾಕೆ ಎತ್ತಂಗಡಿ : ವಿಜಯಪುರ ಡಿಡಿಪಿಐ ಕಚೇರಿಗೆ ಧಾರವಾಡದ ಆಯುಕ್ತರು ಭೇಟಿ ನೀಡಿದ್ದ ವೇಳೆ ಪತ್ರಾಂಕಿತ