ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆ ಪತಿಯಿಂದಲೇ ಪತ್ನಿ ಹತ್ಯೆಯಾಗಿರುವ (Murder Case) ಘಟನೆ ಮಾಗಡಿ ತಾಲೂಕಿನ ಹೂಜಗಲ್ಲು ಬೆಟ್ಟದಲ್ಲಿ ಮಂಗಳವಾರ ನಡೆದಿದ್ದು, ತಡವಾಗಿ ವರದಿಯಾಗಿದೆ.
ಹತ್ಯೆಯಾದ ಮಹಿಳೆಯನ್ನು 32 ವರ್ಷದ ದಿವ್ಯಾ ಎಂದು ಗುರುತಿಸಲಾಗಿದೆ. ಹತ್ಯೆ ಆರೋಪಿ ಪತಿಯನ್ನು ಉಮೇಶ್ ಎನ್ನಲಾಗಿದೆ.
Join Our Telegram: https://t.me/dcgkannada
ಮದುವೆಯಾಗಿ ಕೆಲವು ವರ್ಷಗಳು ಜೀವನ ನಡೆಸಿದ ಇಬ್ಬರ ನಡುವೆ ಇತ್ತೀಚೆಗೆ ಮನಸ್ತಾಪ ಉಂಟಾಗಿದೆ. ಇದರಿಂದ ನನಗೆ ಡಿವೋರ್ಸ್ ಕೊಟ್ಟುಬಿಡಿ ನಾನು ಬೇರೆ ಜೀವನ ಕಟ್ಟಿಕೊಳ್ಳುತ್ತೇನೆ ಎಂದು ದಿವ್ಯಾ ಕೇಳಿದ್ದಾಳೆ. ಆಗ ಉಮೇಶ್ ಹೆಂಡತಿಯನ್ನು ಸಮಾಧಾನಪಡಿಸಿ ಬುದ್ದಿ ಹೇಳಿದ್ದ ಆದರೆ, ಇದ್ಯಾವುದನ್ನೂ ಕೇಳದ ದಿವ್ಯಾಳಿಗೆ ಉಮೇಶ್ ಡಿವೋರ್ಸ್ ಕೊಡುವುದಾಗಿ ಹೇಳಿದ್ದಾನೆ.
ಡಿವೋರ್ಸ್ ಕೇಸ್ (Divorce Case) ಸಂಬಂಧಿಸಿದಂತೆ ಮಂಗಳವಾರ ಮಾಗಡಿ ಕೋರ್ಟ್‌ಗೆ ದಂಪತಿ ಹಾಜರಾಗಿ ವಿಚಾರಣೆಯನ್ನು ಎದುರಿಸಿದ್ದರಂತೆ. ಇನ್ನು ಹೆಂಡತಿಗೆ ಒಲ್ಲದ ಮನಸ್ಸಿನಿಂದ ಡಿವೋರ್ಸ್ ಕೊಡಲು ಮುಂದಾಗಿದ್ದನಂತೆ ಉಮೇಶ್.
ಇದನ್ನೂ ಓದಿ: BPL Card: ಬಿಪಿಎಲ್ ಕಾರ್ಡ್, ಗ್ಯಾರಂಟಿ ಯೋಜನೆ ರದ್ದು? ಸಚಿವ ಎಂ.ಬಿ.ಪಾಟೀಲ ಕ್ಲಾರಿಟಿ
ನ್ಯಾಯಾಲಯದಿಂದ ಮನೆಗೆ ವಾಪಸ್ ಹೋಗುವ ಮೊದಲು ದೇವಸ್ಥಾನಕ್ಕೆ ಹೋಗಿ ಬರೋಣ ಎಂದು ಹೇಳಿ ಹೆಂಡತಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾನೆ. ದೇವಸ್ಥಾನದಲ್ಲಿ ದಿವ್ಯಾ ಪೂಜೆ ಮಾಡುತ್ತಿರುವಾಗಲೇ ಆಕೆಯನ್ನು ಹತ್ಯೆ (Murder Case) ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಅಲ್ಲಿಂದ ಮೃತದೇಹವನ್ನು ಚೀಲೂರು ಅರಣ್ಯ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಇನ್ನು ಅರಣ್ಯದಲ್ಲಿ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಜಾಡು ಹಿಡಿದು ಹೊರಟ ಪೊಲೀಸರು ಶವದ ಗುರುತು ಪತ್ತೆ ಮಾಡಿದ್ದಾರೆ. ನಂತರ, ಆಕೆಯ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಕುರಿತಂತೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)