ಮುದ್ದೇಬಿಹಾಳ : ತಾಲ್ಲೂಕು ಪಂಚಾಯಿತಿಗೆ ಸೇರಿದ ವಸತಿ ಗೃಹಗಳನ್ನು ನೆಲಸಮಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಪ್ರತಿಕ್ರಿಯೆ ನೀಡಿದ್ದು, ದಲಿತಪರ ಸಂಘಟನೆಯ ಹೆಸರಿನಲ್ಲಿ ಹರೀಶ ನಾಟೀಕಾರ ಎಂಬ ಹೋರಾಟಗಾರರ ಹಣ ವಸೂಲಿ ಮಾಡುವ ಸಮೀತಿ ಎಂದು ಹೆಸರು ಇಟ್ಟುಕೊಳ್ಳುವುದು ಒಳಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಪಂ ವಸತಿ ಗೃಹಗಳನ್ನು ನೆಲಸಮಗೊಳಿಸಿದ್ದು ಪುರಸಭೆಯವರಲ್ಲ. ಪುರಸಭೆಗೂ ಇದಕ್ಕೂ ಸಂಬಂಧವಿಲ್ಲ. ಗ್ರಾಮದೇವತೆ ಜಾತ್ರಾ ಕಮೀಟಿಯ ಅಧ್ಯಕ್ಷನೆಂದು ಊರಿನ ದೈವದವರು ಸಮೀತಿಯ ಮುಂದಾಳತ್ವ ವಹಿಸಿರುತ್ತಾರೆ. ಆದರೆ ಪುರಸಭೆ ಅಧ್ಯಕ್ಷರಿಗೆ ಯಾವುದೇ ಹಣಕಾಸಿನ ವ್ಯವಹಾರ, ಆರ್ಥಿಕ ಚಟುವಟಿಕೆ ಕೈಗೊಳ್ಳುವ ಜವಾಬ್ದಾರಿಯನ್ನು ಜಾತ್ರಾ ಕಮೀಟಿಯವರು ಕೊಟ್ಟಿರುವುದಿಲ್ಲ. ವಿಷಯ ಹೀಗಿದ್ದಾಗ್ಯೂ ನನಗೆ ಜಾತ್ರಾ ಕಮಿಟಿಯವರಿಂದ ಐದು ಲಕ್ಷ ರೂ.ಹಣ ಕೊಡಬೇಕು ಎಂದು ನಾಟೀಕಾರ ಬೇಡಿಕೆ ಇರಿಸಿದರು. ನಾನು ಭ್ರಷ್ಟಾಚಾರಿಯಲ್ಲ. ಜಾತ್ರೆಯ ಸಮಯದಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡಿದ್ದೇನೆ.
ಆದರೆ, ಹರೀಶ ನಾಟೀಕಾರ ದಲಿತ ಸಂಘರ್ಷ ಸಮಿತಿಯ ಹೆಸರಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ. ದಲಿತ ಸಂಘರ್ಷ ಸಮಿತಿ ಎಂದು ಹೆಸರಿಸುವ ಬದಲು ಹಣ ವಸೂಲಿ ಮಾಡುವ ಸಮೀತಿ ಎಂದು ಹೆಸರಿಟ್ಟುಕೊಳ್ಳಬೇಕು ಎಂದು ಹರಿಹಾಯ್ದರು. ತಾಪಂನಿಂದ ಕೊಟ್ಟಿರುವ ನೋಟಿಸಿಗೆ ಮುಖ್ಯಾಧಿಕಾರಿ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.